Chocolate Day 2023: ಕೇವಲ 10 ನಿಮಿಷಗಳಲ್ಲಿ ಚಾಕೊಲೇಟ್ ತಯಾರಿಸಿ, ರೆಸಿಪಿಗಳು ಇಲ್ಲಿವೆ
ಚಾಕೊಲೇಟ್ ದಿನದಂದು, ತಮ್ಮ ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಪ್ರೀತಿ, ವಾತ್ಸಲ್ಯ ಮತ್ತು ಮೆಚ್ಚುಗೆಯ ಸಂಕೇತವಾಗಿ ಚಾಕೊಲೇಟ್‌ಗಳನ್ನು ಹಂಚಿಕೊಳ್ಳುವುದಾಗಿದೆ. ಆದ್ದರಿಂದ ನೀವು ಮನೆಯಲ್ಲಿಯೇ ತಯಾರಿಸಬಹುದಾದ ಸಿಂಪಲ್ ಚಾಕೊಲೇಟ್ ರೆಸಿಪಿ ಇಲ್ಲಿದೆ.
ಸ್ನೇಹ ಮತ್ತು ಪ್ರೀತಿಯನ್ನು ಹಂಚಲು ವ್ಯಾಲೆಂಟೈನ್ಸ್ ವೀಕ್(Valentine Week) ಪ್ರಾರಂಭವಾಗಿದೆ. ರೋಸ್ ಡೇ(Rose Day) ಯಿಂದ ಪ್ರಾರಂಭವಾಗಿ ವಾರದ ಪ್ರತಿ ದಿನವೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಚಾಕೊಲೇಟ್ ದಿನವು ವ್ಯಾಲೆಂಟೈನ್ಸ್ ವೀಕ್ ಆಚರಣೆಗಳ ಒಂದು ಭಾಗವಾಗಿದೆ, ಇದನ್ನು ಪ್ರತಿ ವರ್ಷ ಫೆಬ್ರವರಿ 9 ರಂದು ಆಚರಿಸಲಾಗುತ್ತದೆ. ಈ ದಿನದಂದು, ತಮ್ಮ ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಪ್ರೀತಿ, ವಾತ್ಸಲ್ಯ ಮತ್ತು ಮೆಚ್ಚುಗೆಯ ಸಂಕೇತವಾಗಿ ಚಾಕೊಲೇಟ್‌ಗಳನ್ನು ಹಂಚಿಕೊಳ್ಳುವುದಾಗಿದೆ. ಆದ್ದರಿಂದ ನೀವು ಮನೆಯಲ್ಲಿಯೇ ತಯಾರಿಸಬಹುದಾದ ಸಿಂಪಲ್ ಚಾಕೊಲೇಟ್ ರೆಸಿಪಿ ಇಲ್ಲಿದೆ.
ನೀವು ಮನೆಯಲ್ಲಿಯೇ ಸಿಂಪಲ್ ಚಾಕೊಲೇಟ್ ತಯಾರಿಸಿ:
ಬಾದಾಮ್ ಚಾಕೊಲೇಟ್ ಟ್ರಫಲ್:
ಬೇಕಾಗುವ ಪದಾರ್ಥಗಳು:
- 1 ಕಪ್ (150 ಗ್ರಾಂ) ಖರ್ಜೂರ (ಬಿಸಿ ನೀರಿನಲ್ಲಿ ನೆನೆಸಿದ)
- 1/2ಕಪ್ (80 ಗ್ರಾಂ) ಹುರಿದ ಬಾದಾಮಿ
- 1/2 ಕಪ್ ಕೋಕೋ ಪೌಡರ್
- 2 ಚಮಚ ತೆಂಗಿನ ಎಣ್ಣೆ
- 1/2 ಚಮಚ ವೆನಿಲ್ಲಾ ಸಾರ
- 1/2 ಚಮಚ ಉಪ್ಪು
- 100 ಗ್ರಾಂ ಡಾರ್ಕ್ ಚಾಕೊಲೇಟ್
ಬಾದಾಮ್ ಚಾಕೊಲೇಟ್ ಟ್ರಫಲ್ ಮಾಡುವ ವಿಧಾನ:
ವೆನಿಲ್ಲಾ, ಕೋಕೋ ಪೌಡರ್, ಖರ್ಜೂರ, ಬಾದಾಮಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಈಗ ಒಂದು ಪಾತ್ರೆಯಲ್ಲಿ ಡಾರ್ಕ್ ಚಾಕೊಲೇಟ್ ಹಾಕಿ. ಇದನ್ನು ಮೈಕ್ರೋವೇವ್ ಅಥವಾ ಡಬಲ್ ಬಾಯ್ಲರ್ನಲ್ಲಿ ಕರಗಿಸಿ. ಈ ಕರಗಿದ ಚಾಕೋಲೇಟ್ಗೆ ಈಗ ಸ್ವಲ್ಪ ತೆಂಗಿನ ಎಣ್ಣೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈಗಾಗಲೇ ಮಾಡಿಟ್ಟ ಉಂಡೆಗಳನ್ನು ಈ ಕರಗಿದ ಚಾಕೋಲೇಟ್ನಲ್ಲಿ ಅದ್ದಿ ತೆಗೆಯಿರಿ. ಮೂರು ನಿಮಿಷಗಳ ವರೆಗೆ ಫ್ರಿಜ್ಜ್ನಲ್ಲಿ ಇರಿಸಿ. ಈಗ ಬಾದಾಮ್ ಚಾಕೊಲೇಟ್ ಟ್ರಫಲ್ ಸಿದ್ಧವಾಗಿದೆ.
ಇದನ್ನೂ ಓದಿ: ನಿಮ್ಮ ಪ್ರೇಮಿಗೆ ನೀಡುವ ಚಾಕೋಲೇಟ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಚಾಕೋಲೇಟ್ ಡೇ ಇತಿಹಾಸ
ಮಸಾಲೆಯೊಂದಿನ ಹಾಟ್ ಚಾಕೊಲೇಟ್:
ಬೇಕಾಗುವ ಸಾಮಾಗ್ರಿಗಳು:
- 250 ಮಿಲಿ ಹಾಲು
- 2 ಚಮಚ ಕೋಕೋ ಪೌಡರ್
- 1 ಚಮಚ ಬೆಲ್ಲ ಅಥವಾ ಸಕ್ಕರೆ
- 1 ಟೀಚಮಚ ದಾಲ್ಚಿನ್ನಿ
- ಟೀಚಮಚ ಮೆಣಸಿನ ಪುಡಿ
- 5 ಲವಂಗ
- ಸ್ಟಾರ್ ಸೋಂಪು 2 ತುಂಡುಗಳು
- 1 ಟೀಚಮಚ ಕಪ್ಪು ಮೆಣಸು
- 1/2 ಚಮಚ ಜಾಯಿಕಾಯಿ
ಹಾಟ್ ಚಾಕೊಲೇಟ್ ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ. ನಂತರ ಅದಕ್ಕೆ ದಾಲ್ಚಿನ್ನಿ, ಜಾಯಿಕಾಯಿ, ಸ್ಟಾರ್ ಸೋಂಪು, ಕರಿಮೆಣಸು ಮತ್ತು ಲವಂಗವನ್ನು ಸೇರಿಸಿ, ಚೆನ್ನಾಗಿ ಕುದಿಸಿ. ನಂತರ ಒಂದೂವರೆ ಚಮಚ ಬೆಲ್ಲ ಮತ್ತು ಸುಮಾರು 2 ಚಮಚ ಕೋಕೋ ಪೌಡರ್ ಸೇರಿಸಿ. ಎರಡೂ ಸಂಪೂರ್ಣವಾಗಿ ಹಾಲಿನಲ್ಲಿ ಕರಗುವ ತನಕ ಬೆರೆಸಿ ಇರಿಸಿಕೊಳ್ಳಿ. ಈಗ ಇದನ್ನು ಒಂದು ಮಗ್ನಲ್ಲಿ ಹಾಕಿ ಸ್ವಲ್ಪ ಕರಿಮೆಣಸು, ಜಾಯಿಕಾಯಿಯಿಂದ ಅಲಂಕರಿಸಿ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:06 am, Thu, 9 February 23