Weight Loss Tips: ನಿಮ್ಮ ಊಟ, ತಿಂಡಿಯ ಸಮಯವೂ ತೂಕದ ಮೇಲೆ ಪರಿಣಾಮ ಬೀರಬಹುದು, ಎಚ್ಚರ!
ಬೆಳಗ್ಗೆ ಎಚ್ಚರವಾದ 1 ಗಂಟೆಯೊಳಗೆ ಪೌಷ್ಟಿಕಾಂಶದ ಉಪಹಾರವನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ. ಮಧ್ಯಾಹ್ನ 12 ರಿಂದ 2 ಗಂಟೆಯ ನಡುವೆ ಊಟಕ್ಕೆ ಉತ್ತಮ ಸಮಯ.
ನೀವು ಕೂಡ ತೂಕ ಇಳಿಸಿಕೊಳ್ಳುವ (Weight Loss) ಪ್ರಯತ್ನ ಮಾಡುತ್ತಿದ್ದೀರಾ? ಹಾಗಾದರೆ, ನೀವು ದಿನನಿತ್ಯ ಯಾವ ಸಮಯದಲ್ಲಿ ತಿಂಡಿ, ಊಟ ಮಾಡುತ್ತೀರ ಎಂಬುದು ಕೂಡ ನಿಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಷಯ ನಿಮಗೆ ತಿಳಿದಿರುವುದು ಒಳ್ಳೆಯದು. ಆಹಾರ ಸೇವನೆಯ ಸಮಯವು ಹಲವಾರು ವಿಧಗಳಲ್ಲಿ ತೂಕ ಇಳಿಕೆ ಅಥವಾ ಹೆಚ್ಚಳದ ಮೇಲೆ ಪರಿಣಾಮ ಬೀರಬಹುದು. ದಿನವಿಡೀ ನಿಯಮಿತ ಮಧ್ಯಂತರದಲ್ಲಿ ತಿನ್ನುವುದು, ಊಟವನ್ನು ಬಿಟ್ಟುಬಿಡುವುದು ಅಥವಾ ಊಟದ ನಡುವೆ ಹೆಚ್ಚು ಅಂತರವನ್ನು ಹೊಂದಿರುವುದು, ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಬೆಳಗಿನ ತಿಂಡಿ: ಬೆಳಗ್ಗೆ ಎಚ್ಚರವಾದ 1 ಗಂಟೆಯೊಳಗೆ ಪೌಷ್ಟಿಕಾಂಶದ ಉಪಹಾರವನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ. ಇದು ನಮಗೆ ಶಕ್ತಿಯನ್ನು ನೀಡುತ್ತದೆ. ಇದು ನಮ್ಮ ಹಸಿವಿನ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು, ಅದಾದ ನಂತರ ಅತಿಯಾಗಿ ತಿನ್ನುವುದು ನಿಧಾನವಾದ ಚಯಾಪಚಯಕ್ಕೆ ಕಾರಣವಾಗಬಹುದು. ಏನೇ ಆಗಲಿ ತಿಂಡಿಯನ್ನು ಬಿಡಬೇಡಿ. ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದರಿಂದ ತೂಕ ಹೆಚ್ಚಾಗುವುದು ಮತ್ತು ಕಡಿಮೆಯಾದ ಗ್ಲೂಕೋಸ್ ಚಯಾಪಚಯ ಸೇರಿದಂತೆ ಹಲವಾರು ಅನಾರೋಗ್ಯ ಉಂಟಾಗುತ್ತದೆ.
ಇದನ್ನೂ ಓದಿ: Honey For Weight Loss: ಈ ರೀತಿ ಜೇನುತುಪ್ಪವನ್ನು ಬಳಸಿ ತೂಕವನ್ನು ಕಡಿಮೆ ಮಾಡಿಕೊಳ್ಳಿ
ಊಟ: ಮಧ್ಯಾಹ್ನದ ಊಟವು ದಿನದ ನಿಮ್ಮ ದೊಡ್ಡ ಊಟವಾಗಿದ್ದರೂ, ಊಟದ ಸಮಯವು ತೂಕ ನಷ್ಟದ ಮೇಲೆ ಪರಿಣಾಮ ಬೀರುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು, ಕ್ಯಾಲೊರಿಗಳನ್ನು ಸುಡುವಲ್ಲಿ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ. ಮಧ್ಯಾಹ್ನದ ಊಟದ ಜೊತೆ ಪ್ರೋಟೀನ್, ಧಾನ್ಯಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ತಿನ್ನುವುದು ಹಸಿವನ್ನು ನಿಯಂತ್ರಿಸಲು ಮತ್ತು ಮಧ್ಯಾಹ್ನದ ಉದ್ದಕ್ಕೂ ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಊಟವನ್ನು ಬಿಟ್ಟುಬಿಡುವುದು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು. ಮಧ್ಯಾಹ್ನ 12 ರಿಂದ 2 ಗಂಟೆಯ ನಡುವೆ ಊಟಕ್ಕೆ ಉತ್ತಮ ಸಮಯ.
ಇದನ್ನೂ ಓದಿ: ದೇಹದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಕಠಿಣ ವ್ಯಾಯಾಮವಿಲ್ಲದ 10 ಟಿಪ್ಸ್
ರಾತ್ರಿಯ ಊಟ: ರಾತ್ರಿಯ ವೇಳೆ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಲಘು ಭೋಜನವನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮಲಗುವ ಸಮಯದಲ್ಲಿ ಭಾರೀ ಭೋಜನವನ್ನು ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ಏಕೆಂದರೆ ಆಗ ದೇಹವು ಕಡಿಮೆ ಸಕ್ರಿಯವಾಗಿರುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ಕಡಿಮೆ ಕ್ಯಾಲೊರಿಗಳು ಬರ್ನ್ ಆಗುತ್ತದೆ. ತಡವಾದ ಭೋಜನವನ್ನು ತಿನ್ನುವುದು ನಿದ್ರೆಯನ್ನು ಅಡ್ಡಿಪಡಿಸಬಹುದು, ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಮಲಗುವುದಕ್ಕಿಂತ 3ರಿಂದ 4 ಗಂಟೆ ಮೊದಲು ನಿಮ್ಮ ರಾತ್ರಿಯ ಊಟಕ್ಕೆ ಸೂಕ್ತ ಸಮಯ. ತಡವಾದ ಊಟ ಅಥವಾ ತಡರಾತ್ರಿಯಲ್ಲಿ ತಿನ್ನುವುದು ನಿಮ್ಮ ಬೊಜ್ಜು ಮತ್ತು ಡೈಸ್ಲಿಪಿಡೆಮಿಯಾ ಮತ್ತು ಹೈಪರ್ಗ್ಲೈಸೀಮಿಯಾದಂತಹ ಚಯಾಪಚಯ ಅಡಚಣೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ತಿಳಿಸಿವೆ.