AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Back Pain: ಬೆಂಬಿಡದೆ ಕಾಡುವ ಬೆನ್ನು ನೋವಿನಿಂದ ಮುಕ್ತಿ ಹೊಂದಲು ಈ 7 ಅಭ್ಯಾಸ ರೂಢಿಸಿಕೊಳ್ಳಿ

ನಿಮ್ಮ ದಿನನಿತ್ಯದ ಕೆಲವು ಅಭ್ಯಾಸಗಳು ನಿಮ್ಮ ಬೆನ್ನುನೋವಿಗೆ ಕಾರಣವಾಗಬಹುದು. ನಿಮಗೆ ಗಾಯ ಅಥವಾ ಅಪಘಾತದಿಂದ ಬೆನ್ನು ನೋವು ಇದ್ದಲ್ಲಿ ವೈದ್ಯರಿಂದ ಸಹಾಯ ಪಡೆಯುವುದು ಸೂಕ್ತ.

Back Pain: ಬೆಂಬಿಡದೆ ಕಾಡುವ ಬೆನ್ನು ನೋವಿನಿಂದ ಮುಕ್ತಿ ಹೊಂದಲು ಈ 7 ಅಭ್ಯಾಸ ರೂಢಿಸಿಕೊಳ್ಳಿ
ಬೆನ್ನು ನೋವು
ಸುಷ್ಮಾ ಚಕ್ರೆ
|

Updated on: Feb 08, 2023 | 4:48 PM

Share

ಬೆನ್ನು ನೋವು (Back Pain) ಹೆಚ್ಚಿನ ಜನರನ್ನು ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಈ ಬೆನ್ನು ನೋವಿನಿಂದ ಚಲನೆಯಲ್ಲಿ ತೊಂದರೆ ಉಂಟಾಗುತ್ತದೆ. ಇದು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಬೆನ್ನು ನೋವಿನಿಂದ ಮುಕ್ತಿ ಪಡೆಯಬಹುದು.

ಹೌದು, ನಿಮ್ಮ ದಿನನಿತ್ಯದ ಕೆಲವು ಅಭ್ಯಾಸಗಳು ನಿಮ್ಮ ಬೆನ್ನುನೋವಿಗೆ ಕಾರಣವಾಗಬಹುದು. ನಿಮ್ಮ ಬೆನ್ನು ನೋವನ್ನು ನಿವಾರಿಸಲು ಈ ಅಭ್ಯಾಸಗಳನ್ನು ತಪ್ಪಿಸುವ ಅವಶ್ಯಕತೆಯಿದೆ. ನಿಮಗೆ ಗಾಯ ಅಥವಾ ಅಪಘಾತದಿಂದ ಬೆನ್ನು ನೋವು ಇದ್ದಲ್ಲಿ ವೈದ್ಯರಿಂದ ಸಹಾಯ ಪಡೆಯುವುದು ಸೂಕ್ತ.

ಬೆನ್ನು ನೋವನ್ನು ತಡೆಗಟ್ಟಲು ನೀವು ಅನುಸರಿಸಬೇಕಾದ 7 ದೈನಂದಿನ ಅಭ್ಯಾಸಗಳು ಹೀಗಿವೆ: ವ್ಯಾಯಾಮ: ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಮ್ಮ ಸ್ನಾಯುಗಳನ್ನು ಸರಿಸಲು ಮತ್ತು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದ ಆರೋಗ್ಯಕರ ಚಲನೆಗೆ ಅಗತ್ಯವಾಗಿದೆ. ಬೆನ್ನು ನೋವನ್ನು ದೂರವಿರಿಸಲು ನಿಮ್ಮ ಬೆನ್ನು ಮತ್ತು ಬೆನ್ನುಮೂಳೆಯನ್ನು ಕೇಂದ್ರೀಕರಿಸುವ ವ್ಯಾಯಾಮಗಳನ್ನು ಮಾಡಿ.

ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಿ: ನೀವು ಕೂರುವ ಅಥವಾ ನಡೆಯುವ ಭಂಗಿಯೂ ನಿಮ್ಮ ಬೆನ್ನು ನೋವಿಗೆ ಕಾರಣವಾಗಿರಬಹುದು. ನೀವು ಸರಿಯಾದ ಭಂಗಿಯಲ್ಲಿ ಕೂರುವುದರಿಂದ ದೀರ್ಘಾವಧಿಯಲ್ಲಿ ಬೆನ್ನು ನೋವನ್ನು ನಿವಾರಿಸಲು ಸಹಾಯವಾಗುತ್ತದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಬೆನ್ನು ನೋವನ್ನು ಅನುಭವಿಸುತ್ತಾರೆ. ಕೂರುವಾಗ ನೀವು ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಬೇಕು. ಆಗಾಗ ವಿರಾಮಗಳನ್ನು ತೆಗೆದುಕೊಂಡು, ಓಡಾಡಬೇಕು.

ಇದನ್ನೂ ಓದಿ: ದೇಹದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಕಠಿಣ ವ್ಯಾಯಾಮವಿಲ್ಲದ 10 ಟಿಪ್ಸ್​​

ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸಿ: ನಿಮ್ಮ ಮೂಳೆಗಳನ್ನು ಬಲಪಡಿಸಲು ನೀವು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವನೆಯನ್ನು ಹೆಚ್ಚಿಸಬೇಕು. ದುರ್ಬಲ ಮೂಳೆಗಳು ನಂತರದ ಜೀವನದಲ್ಲಿ ಆಸ್ಟಿಯೊಪೊರೋಸಿಸ್​ಗೆ ಕಾರಣವಾಗಬಹುದು. ಇದು ವಿಶೇಷವಾಗಿ ಮಹಿಳೆಯರಲ್ಲಿ ಬೆನ್ನುನೋವಿಗೆ ಕಾರಣವಾಗಬಹುದು. ಹಾಲು, ಮೊಸರು ಮತ್ತು ಸೊಪ್ಪುಗಳು ಕ್ಯಾಲ್ಸಿಯಂನ ಕೆಲವು ಮೂಲಗಳಾಗಿವೆ.

ಆರಾಮದಾಯಕ ಶೂಗಳನ್ನು ಧರಿಸಿ: ನಿಮ್ಮ ಶೂಗಳ ಆಯ್ಕೆಯು ಬೆನ್ನಿನ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾಗಿ ಹೊಂದಿಕೊಳ್ಳದ ಮತ್ತು ಎತ್ತರದ ಹಿಮ್ಮಡಿಯ ಬೂಟುಗಳನ್ನು ಆಗಾಗ ಧರಿಸುವುದರಿಂದ ನಿಂತಿರುವಾಗ ನಿಮ್ಮ ಬೆನ್ನಿನ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಆದ್ದರಿಂದ, ನೀವು ಆರಾಮದಾಯಕ ಚಪ್ಪಲಿ, ಶೂಗಳನ್ನು ಧರಿಸಬೇಕು. ಆದಷ್ಟೂ ಫ್ಲಾಟ್ ಚಪ್ಪಲಿಗಳನ್ನು ಧರಿಸಲು ಪ್ರಯತ್ನಿಸಬೇಕು.

ಧೂಮಪಾನವನ್ನು ಬಿಡಿ: ನಮ್ಮ ಆರೋಗ್ಯದ ಮೇಲೆ ಧೂಮಪಾನದ ದುಷ್ಪರಿಣಾಮಗಳು ಏನೆಂಬುದು ನಮಗೆಲ್ಲರಿಗೂ ತಿಳಿದಿವೆ. ಆದರೆ ಧೂಮಪಾನಿಗಳಲ್ಲದವರಿಗಿಂತ ಧೂಮಪಾನಿಗಳು ಹೆಚ್ಚು ಬೆನ್ನುನೋವಿಗೆ ಹೆಚ್ಚು ಒಳಗಾಗುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಸಿಗರೇಟ್‌ನಲ್ಲಿರುವ ನಿಕೋಟಿನ್ ನಿಮ್ಮ ಬೆನ್ನುಮೂಳೆಯ ಡಿಸ್ಕ್‌ಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.

ಮಧ್ಯಮ ತೂಕವನ್ನು ಕಾಪಾಡಿಕೊಳ್ಳಿ: ಸ್ಥೂಲಕಾಯದ ಜನರು ಹೆಚ್ಚಾಗಿ ಬೆನ್ನು ನೋವನ್ನು ಅನುಭವಿಸುತ್ತಾರೆ. ಏಕೆಂದರೆ ಅದು ಅವರ ಕೆಳ ಬೆನ್ನಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ, ಬೆನ್ನು ನೋವು ತಪ್ಪಿಸಲು ನಿಮ್ಮ ತೂಕವನ್ನು ಕಡಿಮೆ ಮಾಡಬೇಕು.

ಇದನ್ನೂ ಓದಿ: Benefits of Essential Oils: ಮುಟ್ಟಿನ ಸಮಯದ ಬೆನ್ನು ನೋವು, ಮೈಗ್ರೇನ್‌ ಸಮಸ್ಯೆಗೆ ಮನೆಮದ್ದುಇಲ್ಲಿದೆ

ಮಲಗುವ ಭಂಗಿ ಬದಲಿಸಿ: ನೀವು ಪ್ರತಿದಿನ ಬೆನ್ನು ನೋವನ್ನು ಅನುಭವಿಸಿದರೆ ನಿಮ್ಮ ಮಲಗುವ ಭಂಗಿಯ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಬೇಕು. ವೈದ್ಯರು ನಿಮಗೆ ಮಗ್ಗುಲಲ್ಲಿ ಮಲಗಲು ಸಲಹೆ ನೀಡಬಹುದು ಅಥವಾ ಮಲಗುವಾಗ ನಿಮ್ಮ ಮೊಣಕಾಲುಗಳ ಕೆಳಗೆ ಮತ್ತು ಕೆಳ ಬೆನ್ನಿನ ಕೆಳಗೆ ದಿಂಬನ್ನು ಹಾಕಲು ಸಲಹೆ ನೀಡಬಹುದು. ಆದಷ್ಟೂ ನಿಮ್ಮ ಹೊಟ್ಟೆಯ ಮೇಲೆ ಮಲಗುವುದನ್ನು ನೀವು ತಪ್ಪಿಸಬೇಕು. ಇದು ನಿಮ್ಮ ಬೆನ್ನು ನೋವನ್ನು ಉಲ್ಬಣಗೊಳಿಸುತ್ತದೆ.

ಒತ್ತಡವನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ: ಒತ್ತಡವು ನಿಮ್ಮ ದೇಹಕ್ಕೆ ಮತ್ತು ನಿಮ್ಮ ಬೆನ್ನಿಗೆ ಹಾನಿಕಾರಕವಾಗಿದೆ. ಒತ್ತಡವು ನಿಮ್ಮ ಸ್ನಾಯುಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇದು ಅಂತಿಮವಾಗಿ ಬೆನ್ನುನೋವಿಗೆ ಕಾರಣವಾಗಬಹುದು. ಒತ್ತಡವನ್ನು ಕಡಿಮೆ ಮಾಡಲು ನೀವು ಧ್ಯಾನವನ್ನು ಅಭ್ಯಾಸ ಮಾಡಬೇಕು, ಇದು ಬೆನ್ನು ನೋವನ್ನು ತಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್