ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ

ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ.

ಮಲೆನಾಡಿನ ಪಾರಂಪರಿಕ ಗರಿ ಗರಿಯಾದ ತೊಡೆದೇವು ಸಿಹಿ ಖಾದ್ಯ ಮಾಡುವ ವಿಧಾನ ಇಲ್ಲಿದೆ
ತೊಡೆದೇವು ಮಾಡುವ ವಿಧಾನ Image Credit source: Youtube
Follow us
ಅಕ್ಷತಾ ವರ್ಕಾಡಿ
|

Updated on:Feb 09, 2023 | 3:48 PM

ಮಲೆನಾಡಿನ ಅತ್ಯಂತ ರುಚಿಕರ ಹಾಗೆಯೇ ಗರಿ ಗರಿಯಾದ ಖಾದ್ಯ ತೊಡೆದೇವು. ಈ ವಿಶೇಷ ಖಾದ್ಯವು ಮಲೆನಾಡಿನ ಹವ್ಯಕರ ಮನೆಯಲ್ಲಿ ಹೆಚ್ಚಾಗಿ ಕಂಡು ಬರುವ ತಿಂಡಿಯಾಗಿದೆ. ಈಗಲೂ ಕೂಡ ಮಲೆನಾಡಿನ ಕಡೆಗಳ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಕಟ್ಟಿಗೆಯ ಒಲೆಯ ಮೇಲೆ ಮಡಿಕೆಯನ್ನು ತಲೆಕೆಳಗಾಗಿ ಇಟ್ಟು ಅಂದರೆ ಅದಕ್ಕೆ ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ.  ಈ ರೀತಿಯಾಗಿ ಖಾದ್ಯವನ್ನು ತಯಾರಿಸಲಾಗುತ್ತದೆ. ಸಾಗರ, ಯಲ್ಲಾಪುರ, ಶಿರಸಿ, ಸಿದ್ಧಾಪುರ, ಗೋಕರ್ಣಾ, ಕುಮುಟಾ ಸುತ್ತಮುತ್ತಲಲ್ಲಿ ಈ ತಿಂಡಿ ಭಾರೀ ಜನಪ್ರಿಯತೆಯನ್ನು ಹೊಂದಿದೆ.  ಇತ್ತೀಚೆಗಷ್ಟೇ  ಗರಿ ಗರಿಯಾದ ತೊಡೆದೇವು ಮಾಡುವ ವಿಧಾನವನ್ನು ಗಗನ್​​ ಶರ್ಮರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಇಲ್ಲಿದೆ.

ತೊಡೆದೇವು ಮಾಡಲು ಬೇಕಾಗುವ ಪದಾರ್ಥಗಳು:

  • ದಪ್ಪ ಅಕ್ಕಿ 1ಕೆಜಿ
  • ಜೋನಿ ಬೆಲ್ಲ 1ಕೆಜಿ
  • ಅರಶಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ

ತೊಡೆದೇವು ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು ಮುಂಚಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಿ. ಮರುದಿನ ಅಕ್ಕಿಯನ್ನು ಚೆನ್ನಾಗಿ ತೊಳೆದಿಡಿ. ನಂತರ ನೆನೆಸಿಟ್ಟ ಅಕ್ಕಿ , ಜೋನಿ ಬೆಲ್ಲ, ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಹಿಟ್ಟು ಸಿದ್ಧವಾಗಿದೆ.
  • ನಂತರ ಒಲೆ ಮೇಲೆ ಒಂದು ಮಡಕೆಯನ್ನು ತಲೆಕೆಳಗಾಗಿ ಇಟ್ಟುಕೊಂಡು, ಇದನ್ನು ತೊಡದೇವು ಎರೆಯುವ ಮಡಿಕೆ ಎಂದು ಕರೆಯುತ್ತಾರೆ. ನಂತರ ಒಂದು ಸಣ್ಣ ಕೋಲಿಗೆ ಕಾಟನ್​​​ ಬಟ್ಟೆಯನ್ನು ಸುತ್ತಿ ರುಬ್ಬಿದ ಹಿಟ್ಟಿನಲ್ಲಿ ಅದ್ದಿ, ಒಲೆಯ ಮೇಲಿಟ್ಟ ಕಾದ ಮಡಿಕೆಯ ಮೇಲೆ ತುಂಬಾ ತೆಳ್ಳಗೆ ಹಚ್ಚಿ. ಇದು ಬೇಯಲು ಸಮಯ ಬೇಡ. ಒಂದೇ ಕ್ಷಣದಲ್ಲಿ ಇದು ಬೆಂದು ಹೋಗುತ್ತದೆ. ನಂತರ ಇದನ್ನು ನಾಜೂಕಾಗಿ ನಿಮಗೆ ಬೇಕಾದ ಆಕಾರದಲ್ಲಿ ಮಡಚಿಡಿ.
  • ನಂತರ ಒಲೆಯಿಂದ ಕೆಳಗಿಳಿಸಿ ಕೆಲವು ನಿಮಿಷಗಳ ವರೆಗೆ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಗಾಳಿಯಾಡದ ಕವರ್​​ ಒಳಗಡೆ ಶೇಖರಿಸಿಡಿ. ಇದು 15 ರಿಂದ 20 ದಿನಗಳ ವರೆಗೆ ಹಾಳಾಗದೇ ಹಾಗೆಯೇ ಉಳಿದು ಬಿಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 3:42 pm, Thu, 9 February 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್