AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamarind Drink: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ

ರುಚಿಯ ಜೊತೆಗೆ ಹುಣಸೆ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದ್ದರಿಂದ ಮನೆಯಲ್ಲಿಯೇ ಆರೋಗ್ಯಕರ ಹುಣಸೆ ಹಣ್ಣಿನ ಹಿತವಾದ ಪಾನಕ ತಯಾರಿಸಿ ಸವಿಯಿರಿ.

Tamarind Drink: ಹುಣಸೆ ಹಣ್ಣಿನ ಹಿತವಾದ ಪಾನಕ ಮಾಡುವ ವಿಧಾನ ಇಲ್ಲಿದೆ
ಹುಣಸೆ ಹಣ್ಣಿನ ಪಾನಕ
TV9 Web
| Edited By: |

Updated on:Feb 07, 2023 | 4:19 PM

Share

ಈಗ ಹುಣಸೆ(Tamarind) ಹಣ್ಣಿನ ಹಂಗಾಮು ಶುರುವಾಗಿದೆ. ತಾಜ ಹಣ್ಣಿನಲ್ಲಿ ಹಿತವಾದ ಹುಳಿ ಸಿಹಿ ಮಿಶ್ರಣ ಇರುತ್ತದೆ. ಹಣ್ಣು ಹಳೆಯದಾದಷ್ಟು ಹುಳಿ ಹೆಚ್ಚುತ್ತದೆ. ರುಚಿಯ ಜೊತೆಗೆ ಹುಣಸೆ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದ್ದರಿಂದ ಮನೆಯಲ್ಲಿಯೇ ಆರೋಗ್ಯಕರ ಹುಣಸೆ ಹಣ್ಣಿನ ಹಿತವಾದ ಪಾನಕ ತಯಾರಿಸಿ ಸವಿಯಿರಿ. ಹೃದಯ, ಕಿಡ್ನಿ, ಯಕೃತ್ ಗಳ ಆರೋಗ್ಯ ರಕ್ಷಣೆಗೆ ನೆರವಾಗುವ ಹುಣಸೆ ಹಣ್ಣು ಶುಚಿಕಾರಕವೂ ಹೌದು. ಪಾನಕ ಕುಡಿದ ಬಳಿಕ ಬೀಜಕ್ಕೆ ಅಂಟಿಕೊಂಡ ತಿರುಳನ್ನು ಬಾಯಲ್ಲಿ ಹಾಕಿಕೊಂಡು ಸವಿಯಬಹುದು. ಬೇರ್ಪಡಿಸಿದ ಬೀಜಗಳನ್ನು ಸುಟ್ಟುಕೊಂಡು ಅಥವಾ ಹುರಿದುಕೊಂಡು ಸಿಪ್ಪೆ ತೆಗೆದು ನೆನಸಿಟ್ಟು ತಿನ್ನುತಿದ್ದರೆ ಮಂಡಿ ನೋವು ಬೇಗ ವಾಸಿ ಆಗುತ್ತದೆ ಎಂದು ಅನುಭವಿಗಳು ಹೇಳುತ್ತಾರೆ. ಹುರಿದ ಬೀಜಗಳು ರುಚಿಯಾಗಿರುತ್ತವೆ.

ಹುಣಸೆ ಹಣ್ಣಿನ ಪಾನಕ ಮಾಡುವ ವಿಧಾನ:

  • ಹಣ್ಣಿನ ಸಿಪ್ಪೆಯನ್ನು ಬಿಡಿಸಿಕೊಂಡು ನೀರಲ್ಲಿ ತುಸು ಹೊತ್ತು ನೆನೆಯಲು ಬಿಡಿ.
  • ಜೀರಿಗೆ, ಶುಂಠಿ, ಕರಿಬೇವು ಸೇರಿಸಿ ಉಪ್ಪಿನೊಂದಿಗೆ ಕುಟ್ಟಿಕೊಂಡು ನೆನೆಸಿಟ್ಟ ಹುಣಸೆ ಹಣ್ಣಿಗೆ ಹಾಕಿಕೊಳ್ಳಿ.
  • ಬಳಿಕ ಬೆಲ್ಲವನ್ನು ಸೇರಿಸಿ ಕಿವುಚಿಕೊಂಡರೆ ಹಣ್ಣಿನ ತಿರುಳಿನ ಸಾರವು ಬಿಟ್ಟುಕೊಳ್ಳುತ್ತದೆ, ಸಿಹಿ ಹಾಗೂ ಸುವಾಸನೆಯೊಂದಿಗೆ ಸೇರಿಕೊಳ್ಳುತ್ತದೆ.
  • ಒಂದು ಲೋಟ ನೀರಿಗೆ 2-4 ಹುಣಸೆ ಹಣ್ಣು ಹಾಕಿ ತಯಾರಿಸಿದ ಪಾನಕ ಒಬ್ಬರಿಗೆ ಸಾಕಾದೀತು. ರುಚಿಕರವಾದ ಈ ಪಾನಕ ಹಿತವಾಗಿರುತ್ತದೆ.

ಇದನ್ನೂ ಓದಿ: ವಿಭಿನ್ನ ಶೈಲಿಯಲ್ಲಿ ಆರೋಗ್ಯಕರ ಹಾಗೂ ರುಚಿಕರ ಸಲಾಡ್​​ ತಯಾರಿಸಿ

ಹುಣಸೆ ಹಣ್ಣಿನ ಆರೋಗ್ಯ ಪ್ರಯೋಜನಗಳು:

  • ಹುಣಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
  • ಹುಣಸೆ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಪಾಲಿಫಿನಾಲ್​ ಎಂಬ ಆ್ಯಂಟಿ ಆಕ್ಸಿಡೆಂಟ್​ ಹೊಂದಿದ್ದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
  • ಹುಣಸೆ ಹಣ್ಣು ವಿಟಮಿನ್​ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಹುಣಸೆ ಹಣ್ಣು ಆ್ಯಂಟಿ- ಸಫ್ಟಿಕ್​ ಗುಣಗಳನ್ನು ಹೊಂದಿರುವುದರಿಂದ ಅಸ್ತಮಾ, ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ತಡೆಯಲು ಸಹಾಯಕವಾಗಿದೆ.

– ಡಾ ವಿಜಯ್ ಅಂಗಡಿ

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 4:19 pm, Tue, 7 February 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು