Karnataka Cuisine: ಕರ್ನಾಟಕದಲ್ಲಿನ ಈ ಪ್ರಸಿದ್ಧ ಭಕ್ಷ್ಯಗಳನ್ನು ನೀವು ಮಿಸ್​​ ಮಾಡಲೇ ಬೇಡಿ

ಒಂದೊಂದು ಪ್ರದೇಶಕ್ಕೆ ಹೋದಂತೆ ಅಲ್ಲಿನ ಆಹಾರ ಪದ್ಧತಿಯು ಕೂಡಾ ಬೇರೆಯಾಗಿರುತ್ತದೆ. ಕರ್ನಾಟಕದ ಪಾಕಪದ್ಧತಿಯಲ್ಲಿ ಅನೇಕ ಪ್ರಕಾರದ ಭಕ್ಷ್ಯಗಳನ್ನು ನೋಡಬಹುದು. ನೀವು ಸವಿಯಲೇಬೇಕಾದ ಕೆಲವೊಂದು ಕರ್ನಾಟಕದ ಭಕ್ಷ್ಯಗಳ ಮಾಹಿತಿ ಇಲ್ಲಿದೆ.

Karnataka Cuisine: ಕರ್ನಾಟಕದಲ್ಲಿನ ಈ ಪ್ರಸಿದ್ಧ ಭಕ್ಷ್ಯಗಳನ್ನು ನೀವು ಮಿಸ್​​ ಮಾಡಲೇ ಬೇಡಿ
ಸಾಂದರ್ಭಿಕ ಚಿತ್ರImage Credit source: herzindagi
Follow us
ಅಕ್ಷತಾ ವರ್ಕಾಡಿ
|

Updated on:Feb 17, 2023 | 6:59 PM

ಕರ್ನಾಟಕವು ಇಡ್ಲಿ, ದೋಸೆಗೆ ಪ್ರಸಿದ್ಧವಾಗಿದೆ. ಇಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಪಾಕವಿಧಾನಗಳು ಭಿನ್ನವಾಗಿರುತ್ತದೆ. ಈ ಹಲವು ಭಕ್ಷ್ಯಗಳ ನಡುವೆ ನೀವು ಒಮ್ಮೆಯಾದರೂ ರುಚಿ ನೋಡಲೇಬೇಕಾದ ಕರ್ನಾಟಕದ ಪ್ರಸಿದ್ಧ ಪಾಕವಿಧಾನಗಳು ಇಲ್ಲಿವೆ. ನೀವು ಕರ್ನಾಟಕದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸುವಾಗ ಅಲ್ಲಿನ ಅಡುಗೆಯ ರುಚಿ ಮತ್ತು ವೈವಿಧ್ಯತೆ ಕೂಡಾ ಬದಲಾಗುತ್ತದೆ. ಉತ್ತರ ಕರ್ನಾಟಕದ ಪಾಕಪದ್ಧತಿಯು ಹೆಚ್ಚಾಗಿ ಸಸ್ಯಾಹಾರ ಪಾಕಪದ್ಧತಿಯಾಗಿರುತ್ತದೆ. ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಮೀನುಗಳನ್ನು ಸೇವನೆ ಮಾಡುತ್ತಾರೆ. ಕೊಡಗಿನಲ್ಲಿ ಹೆಚ್ಚಾಗಿ ಮಾಂಸಾಹಾರವನ್ನು ಮಾಡುತ್ತಾರೆ. ಒಂದೊಂದು ಪ್ರದೇಶಕ್ಕೆ ಹೋದಂತೆ ಅಲ್ಲಿನ ಆಹಾರ ಪದ್ಧತಿಯು ಕೂಡಾ ಬೇರೆಯಾಗಿರುತ್ತದೆ. ಕರ್ನಾಟಕದ ಪಾಕಪದ್ಧತಿಯಲ್ಲಿ ಅನೇಕ ಪ್ರಕಾರದ ಭಕ್ಷ್ಯಗಳನ್ನು ನೋಡಬಹುದು.

ನೀವು ಸವಿಯಲೇಬೇಕಾದ ಕೆಲವೊಂದು ಕರ್ನಾಟಕದ ಭಕ್ಷ್ಯಗಳ ಮಾಹಿತಿ ಇಲ್ಲಿದೆ.

ಚೌ ಚೌ ಬಾತ್:

ಖಾರಾ ಬಾತ್ ಮತ್ತು ಕೇಸರಿ ಬಾತ್ ಒಂದೇ ಪ್ರಕಾರದ ಭಕ್ಷ್ಯವಾಗಿದೆ. ಕೇಸರಿ ಬಾತ್ ನೋಡಲು ಕೆಸರಿ ಬಣ್ಣವನ್ನು ಹೊಂದಿದ್ದು, ಇದು ಸಿಹಿ ಖಾದ್ಯವಾಗಿದೆ. ಖಾರಾ ಬಾತ್ ಕಡಲೆಬೀಜ ಮತ್ತು ತರಕಾರಿ, ಇತರ ಮಸಾಲೆಗಳನ್ನು ಸೇರಿಸಿ ತಯಾರಿಸಿದ ಮಸಾಲೆಯುಕ್ತ ಉಪ್ಪಿಟ್ಟು. ಈ ಎರಡು ರುಚಿಕರ ಪಾಕವಿಧಾನವನ್ನು ರವೆಯನ್ನು ಬಳಸಿ ತಯಾರಿಸಲಾಗುತ್ತದೆ. ಇದು ಕರ್ನಾಟಕದಲ್ಲಿ ಹೆಚ್ಚಾಗಿ ತಯಾರಿಸುವ ಉಪಾಹಾರವಾಗಿದೆ ಹಾಗೂ ಕರ್ನಾಟಕದ ಖಾದ್ಯಗಳಲ್ಲಿಯೂ ಒಂದು.

ಮೈಸೂರು ಮಸಾಲೆ ದೋಸೆ:

ಕರ್ನಾಟಕದ ಇನ್ನೊಂದು ಸಾಂಪ್ರದಾಯಿಕ ಖಾದ್ಯವೆಂದರೆ ಮೈಸೂರು ಮಸಾಲೆ ದೋಸೆ. ಈ ಮಸಾಲೆ ದೊಸೆಯೊಳಗೆ ಕೆಂಪು ಮಸಾಲೆ ಮಿಶ್ರಣವನ್ನು ಹಾಕಿ ಕೊಡುತ್ತಾರೆ. ಇದು ದೋಸೆಯ ರುಚಿಯನ್ನು ದುಪ್ಪಟ್ಟಾಗಿಸುತ್ತದೆ. ಕೆಂಪು ಮಸಾಲೆ ಮಿಶ್ರಣದ ಸುವಾಸನೆ ಹಾಗೂ ದೋಸೆಯ ಗರಿಗರಿಯಾದ ರುಚಿಯಿಂದ ಖಂಡಿತವಾಗಿಯೂ ನೀವು ಇದನ್ನು ಜಾಸ್ತಿ ಇನ್ನಲು ಇಷ್ಟು ಪಡುತ್ತೀರಿ. ಕಾಯಿ ಚಟ್ನಿ ಮತ್ತು ಸಾಂಬರ್‌ನೊಂದಿಗೆ ಈ ದೋಸೆಯ ರುಚಿ ಅದ್ಭುತವಾಗಿರುತ್ತದೆ.

ಇದನ್ನೂ ಓದಿ: ಅಳಿಯನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತ ಕೋರಿದ ಅತ್ತೆ-ಮಾವ! ವೈರಲ್ ವಿಡಿಯೋ ಇಲ್ಲಿದೆ

ಕೋಳಿ ಗಸಿ:

ಕರ್ನಾಟಕದ ಕರಾವಳಿ ಭಾಗದ ಈ ಪ್ರಸಿದ್ಧ ಭಕ್ಷ್ಯವನ್ನು ಕೋರಿ ಗಸಿ ಎಂದು ಕರೆಯುತ್ತಾರೆ. ಹುಣಸೆ, ಬ್ಯಾಡಗಿ ಮೆಣಸು, ತೆಂಗಿನ ಕಾಯಿ ತುರಿ ಹಾಗೂ ಇತರ ಮಸಾಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಹುರಿದು ಮಸಾಲೆಯನ್ನು ರುಬ್ಬಿ ಚಿಕನ್ ಜೊತೆ ಬೆರೆಸಿ ಬೇಯಿಸಲಾಗುತ್ತದೆ. ಕರಿಬೇವಿನ ಮೇಕೋಗರವು ಇದರ ಸುವಾಸನೆಯನ್ನು ದುಪ್ಪಟ್ಟು ಮಾಡುತ್ತದೆ. ನೀರುದೋಸೆಯೊಂದಿಗೆ ಕೋರಿ ಗಸಿಯ ಕಾಂಬಿನೇಷನ್ ಉತ್ತಮವಾಗಿರುತ್ತದೆ. ಖಾರ ಖಾರವಾಗಿ ಮಸಾಲೆ ರುಚಿಯನ್ನು ನೀಡುವ ಕೋಳಿ ಗಸಿಯನ್ನು ನೀವು ಒಮ್ಮೆಯಾದರೂ ಸವಿಯಲೇ ಬೇಕು.

ಗೊಜ್ಜು:

ಪ್ರಧಾನ ಭಕ್ಷ್ಯಗಳೊಂದಿಗೆ ಸಸ್ಯಾಹಾರಿ ಭಕ್ಷ್ಯವಾದ ಗೊಜ್ಜನ್ನು ನೀಡುತ್ತಾರೆ. ಈ ಗೊಜ್ಜುಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವಂತಹದ್ದು ಟೊಮೆಟೊ ಗೊಜ್ಜು, ಮಾವಿನ ಹಣ್ಣಿನ ಸಿಹಿ ಗೊಜ್ಜು, ಅನಾನಸ್ ಸಿಹಿ ಗೊಜ್ಜು. ಇದನ್ನು ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ.

ಕಾಣೆ ಮೀನಿನ ರವಾ ಫ್ರೈ:

ಕರಾವಳಿ ಕರ್ನಾಟಕ ಭಾಗದ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಕಾನೆ ಮೀನಿನ ಫ್ರೈ ಕೂಡಾ ಒಂದು. ಮಸಾಲೆಗಳಲ್ಲಿ ಮ್ಯಾರಿನೇಡ್ ಮಾಡಿ ನಂತರ ಆ ಮೀನಿನ ಮೇಲೆ ರವಾವನ್ನು ಲೇಪಿಸಿ ಎಣ್ಣೆಯಲ್ಲಿ ಫ್ರೈ ಮಾಡಲಾಗುತ್ತದೆ. ಈ ರವಾ ಫ್ರೈ ಹೊರಗಡೆಯಿಂದ ಗರಿಗರಿಯಾಗಿ ಹಾಗೂ ಫ್ರೈಯ ಒಳಭಾಗ ಮೃದುವಾಗಿರುತ್ತದೆ. ಈ ಸಾಂಪ್ರದಾಯಿಕ ಕಾನೆ ಮೀನಿನ ಫ್ರೈಯನ್ನು ಒಮ್ಮೆಯಾದರೂ ಸವಿಯಲೇಬೇಕು. ಇದು ಕರ್ನಾಟಕದ ಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:59 pm, Fri, 17 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ