ಜೋಡಿ ಬಾಳೆಹಣ್ಣು ತಿಂದ್ರೆ ಅವಳಿ-ಜವಳಿ ಮಕ್ಕಳು ಹುಟ್ಟುತ್ತೆ ಅನ್ನೋದು ನಿಜನಾ? ಸತ್ಯಾಸತ್ಯತೆ ತಿಳಿಯಿರಿ

ನಮ್ಮ ಸಮಾಜದಲ್ಲಿ ಕೆಲವೊಂದು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಅದರಲ್ಲಿ ಜೋಡಿ ಬಾಳೆ ಹಣ್ಣು ತಿಂದ್ರೆ ಅವಳಿ ಜವಳಿ ಮಕ್ಕಳು ಹುಟ್ತಾರೆ ಎಂಬುದು ಕೂಡ ಒಂದು. ಮಕ್ಕಳು, ಅವಿವಾಹಿತರು ಜೋಡಿ ಬಾಳೆಹಣ್ಣು ತಿನ್ಬಾರ್ದು ಅವಳಿ ಮಕ್ಕಳು ಹುಟ್ಟುತ್ತವೆ ಎಂದು ಹಿರಿಯರು ಹೇಳುವಂತಹ ಮಾತುಗಳನ್ನು ನೀವು ಸಹ ಕೇಳಿರಬಹುದಲ್ವಾ. ಆದ್ರೆ ನಿಜಕ್ಕೂ ಜೋಡಿಬಾಳೆ ಹಣ್ಣು ತಿನ್ನುವುದರಿಂದ ಅವಳಿ ಮಕ್ಕಳು ಹುಟ್ಟುತ್ತವೆಯೇ? ವಿಜ್ಞಾನ ಈ ಬಗ್ಗೆ ಏನು ಹೇಳುತ್ತೆ ತಿಳಿಯಿರಿ.

ಜೋಡಿ ಬಾಳೆಹಣ್ಣು ತಿಂದ್ರೆ ಅವಳಿ-ಜವಳಿ ಮಕ್ಕಳು ಹುಟ್ಟುತ್ತೆ ಅನ್ನೋದು ನಿಜನಾ? ಸತ್ಯಾಸತ್ಯತೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Image Credit source: Google

Updated on: Oct 09, 2025 | 5:58 PM

ಮಗುವಿನ ಜನನವಾಗುವುದು ಪ್ರತಿಯೊಬ್ಬ ಪೋಷಕರು ಹಾಗೂ ಅವರ ಕುಟುಂಬದ ಪಾಲಿಗೆ ಬಹಳ ಸಂಭ್ರಮದ ವಿಚಾರ. ಅದರಲ್ಲೂ ಅವಳಿ ಮಕ್ಕಳು (Twin baby) ಹುಟ್ಟಿದರೆ ಅವರ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಬಲು ಅಪರೂಪ ಸಂದರ್ಭಗಳಲ್ಲಿ ಅವಳಿ ಮಕ್ಕಳು ಹುಟ್ಟುತ್ತವೆ. ಈ ಅವಳಿ ಮಕ್ಕಳು ಜನನದ ಹಿಂದಿಯೂ ಒಂದು ನಂಬಿಕೆಯಿದ್ದು, ಅವಳಿ ಬಾಳೆಹಣ್ಣು ತಿಂದ್ರೆ ಈ ರೀತಿ ಅವಳಿ ಜವಳಿ ಮಕ್ಕಳು ಹುಟ್ತಾರೆ ಎಂದು ಹಲವರು ಭಾವಿಸುತ್ತಾರೆ. ಬಹಳ ಹಿಂದಿನಿಂದಲೂ ಇದು ಪ್ರಚಲಿತದಲ್ಲಿದ್ದು, ಅವಿವಾಹಿತರು ಜೋಡಿಬಾಳೆ ಹಣ್ಣು (twin banana) ಸಿಕ್ರೆ ಅದನ್ನು ತಿನ್ನಬಾರದು, ಅವಳಿ ಮಕ್ಕಳು ಹುಟ್ಟುತ್ತವೆ ಹಾಗೇ ಹೀಗೆ ಅಂತೆಲ್ಲಾ ಹೇಳುತ್ತಿರುತ್ತಾರೆ. ಆದ್ರೆ ನಿಜಕ್ಕೂ ಜೋಡಿ ಬಾಳೆಹಣ್ಣು ತಿನ್ನುವುದರಿಂದ ಅವಳಿ-ಜವಳಿ ಮಕ್ಕಳು ಹುಟ್ಟುತ್ತಾ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ ನೋಡಿ.

ಜೋಡಿ ಬಾಳೆಹಣ್ಣು ತಿನ್ನುವುದರಿಂದ ಅವಳಿ ಮಕ್ಕಳು ಜನಿಸುತ್ತಾ?

ವಿಜ್ಞಾನದ ಪ್ರಕಾರ, ಜೋಡಿ ಬಾಳೆಹಣ್ಣು ತಿನ್ನುವುದಕ್ಕೂ ಅವಳಿ ಮಕ್ಕಳಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಅವಳಿ ಮಕ್ಕಳ ಜನನವು ಸಂಪೂರ್ಣವಾಗಿ ಆನುವಂಶಿಕವಾಗಿದೆ. ನಿಮ್ಮ ಕುಟುಂಬದ ಇತಿಹಾಸದಲ್ಲಿ ಯಾರಿಗಾದರೂ ಅವಳಿ ಮಕ್ಕಳಿದ್ದರೆ, ನಿಮಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು. ಇದಲ್ಲದೆ, ವಯಸ್ಸು ಮತ್ತು ಇತರ ಆರೋಗ್ಯ ಅಂಶಗಳು ಸಹ ಅವಳಿ ಮಕ್ಕಳ ಜನನದ ಮೇಲೆ ಪರಿಣಾಮ ಬೀರುತ್ತವೆ.  ಆದರೆ, ಬಾಳೆಹಣ್ಣು ತಿನ್ನುವುದಕ್ಕೂ ಅವಳಿ ಮಕ್ಕಳ ಜನನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ವೈದ್ಯರು ಇದನ್ನು ಕೇವಲ ವದಂತಿ ಮತ್ತು ಮೂಢನಂಬಿಕೆ ಎಂದು ತಳ್ಳಿ  ಹಾಕುತ್ತಿದ್ದಾರೆ.

ಅವಳಿಗಳು ಹೇಗೆ ಜನಿಸುತ್ತವೆ?

ಕೆಲವೊಮ್ಮೆ ಫಲೀಕರಣದ ನಂತರ ಮೊಟ್ಟೆಯು ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಗರ್ಭದಲ್ಲಿ ಎರಡು ಪ್ರತ್ಯೇಕ ಶಿಶುಗಳು ಬೆಳೆಯುತ್ತವೆ. ಈ ಅವಳಿ ಶಿಶು ಜನನದಲ್ಲಿ ಎರಡು ವಿಧಗಳಿದ್ದು, ಅವುಗಳಲ್ಲಿ ಒಂದನ್ನು ಒಂದೇ ಅವಳಿ ಅಥವಾ ಮೊನೊಜೈಗೋಟಿಕ್‌ ಎಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಒಂದು ವೀರ್ಯ ಎರಡು ಭ್ರೂಣಗಳನ್ನು ರೂಪಿಸಲು ಒಂದೇ ಮೊಟ್ಟೆಯನ್ನು ಹಂಚಿಕೊಳ್ಳುತ್ತದೆ. ಒಂದೇ ಮೊಟ್ಟೆ ಚೀಲದಿಂದ ಜನಿಸುವ ಈ ಶಿಶುಗಳು ಒಂದೇ ಆಕಾರ, ಬಣ್ಣ ಮತ್ತು ಗಾತ್ರ ಮತ್ತು ಒಂದೇ ಲಿಂಗವನ್ನು ಹೊಂದಿರುತ್ತವೆ.

ಇದನ್ನೂ ಓದಿ
ಸ್ವಿಚ್‌ಬೋರ್ಡ್‌ ಸ್ವಚ್ಛಗೊಳಿಸುವ ಸಿಂಪಲ್‌ ಸಲಹೆಗಳು
ಗಂಡ-ಹೆಂಡತಿಯ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ
ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ?
ಒಬ್ಬ ಒಳ್ಳೆಯ ಮಗನಾದವನಿಗೆ ಇರಬೇಕಾದ ಗುಣಗಳಿವು

ಇದನ್ನೂ ಓದಿ: ಮದುವೆಯಾಗಿದ್ದರೂ ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ?

ಎರಡನೇ ಅವಳಿಯನ್ನು ಭಾತೃತ್ವದ ಅವಳಿಗಳು ಅಥವಾ ಡೈಜೈಗೋಟಿಕ್‌ ಅವಳಿಗಳು ಎಂದು ಕರೆಯುತ್ತಾರೆ. ಇದರಲ್ಲಿ ಎರಡು ಅಂಡಾಶಯಗಳು ರೂಪುಗೊಳ್ಳುತ್ತವೆ. ಮತ್ತು ಎರಡು ವೀರ್ಯಗಳು ಭ್ರೂಣವನ್ನು ರೂಪಿಸಲು ಆ ಎರಡು ಪ್ರತ್ಯೇಕ ಮೊಟ್ಟೆಗಳನ್ನು ಅವಲಂಬಿಸುತ್ತವೆ. ಈ ರೀತಿ ಜನಿಸಿದ ಅವಳಿ ಮಕ್ಕಳ ಲಿಂಗ ಬೇರೆ ಬೇರೆ ಇರಬಹುದು ಅಥವಾ ಕೆಲವೊಮ್ಮೆ ಒಂದೇ ಇರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ