AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ವ್ಯಕ್ತಿಗಳು ಭೂಮಿಗೆ ಭಾರ ಎನ್ನುತ್ತಾರೆ ಚಾಣಕ್ಯ

ಯಾರಾದ್ರೂ ಪದೇ ಪದೇ ನಮ್ಮ ನೆಮ್ಮದಿಯನ್ನು ಕೆಡಿಸಲು ಯತ್ನಿಸಿದರೆ ಅಂತಹ ಜನರನ್ನು ನಾವು ಭೂಮಿಗೆ ಭಾರವೆಂದು ಹೇಳ್ತೇವೆ. ಇದರ ಜೊತೆಗೆ ಈ ಒಂದಷ್ಟು ಜನಗಳು ಕೂಡಾ ಭೂಮಿಗೆ ಹೊರೆಯಂತೆ, ಇವರಿಂದ ಯಾರಿಗೂ ಒಂದಿಷ್ಟು ಪ್ರಯೋಜನ ಆಗುವುದಿಲ್ಲ, ಅವರು ಎಂದಿಗೂ ಸುಧಾರಿಸುವುದಿಲ್ಲ ಎನ್ನುತ್ತಾರೆ ಚಾಣಕ್ಯ. ಹಾಗಿದ್ರೆ ಚಾಣಕ್ಯರು ಹೇಳುವಂತೆ ಎಂತಹ ವ್ಯಕ್ತಿಗಳು ಭೂಮಿಗೆ ಭಾರ, ದಂಡಪಿಂಡಗಳು ಎಂಬುದನ್ನು ನೋಡೋಣ ಬನ್ನಿ.

Chanakya Niti: ಇಂತಹ ವ್ಯಕ್ತಿಗಳು ಭೂಮಿಗೆ ಭಾರ ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Oct 10, 2025 | 9:32 AM

Share

ಆಚಾರ್ಯ ಚಾಣಕ್ಯರು (Acharya Chanakya) ತನ್ನ ನೀತಿಶಾಸ್ತ್ರದಲ್ಲಿ ಧರ್ಮ, ರಾಜಕೀಯ ಮಾತ್ರವಲ್ಲದೆ ಸಮಾಜಕ್ಕೆ, ಜನರಿಗೆ ಮಾರ್ಗದರ್ಶನ ನೀಡುವಂತಹ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಹೌದು ನಾವು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಎಂತಹ ವ್ಯಕ್ತಿಗಳ ಸಹವಾಸ ಮಾಡಬಾರದು, ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು, ವಿದ್ಯೆಯ ಮಹತ್ವ, ವೃತ್ತಿ ಜೀವನ, ಶತ್ರು-ಮಿತ್ರ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಈ ಒಂದಷ್ಟು ಜನ ಭೂಮಿಗೆ ಭಾರ ಎಂಬುದನ್ನು ಸಹ ಹೇಳಿದ್ದಾರೆ. ಸಾಮಾನ್ಯವಾಗಿ ನಾವು ಪದೇ ಪದೇ ಕೆಟ್ಟ ಕೆಲಸಗಳನ್ನು ಮಾಡುವವರನ್ನು, ಇತರರ ನೆಮ್ಮದಿ ಕೆಡಿಸುವವರನ್ನು ಭೂಮಿಗೆ ಭಾರ ಕೂಳಿಗೆ ದಂಡ ಅನ್ನುತ್ತೇವಲ್ವಾ. ಆದ್ರೆ ನಿಜವಾಗ್ಲೂ ದಂಡಪಿಂಡಗಳು ಯಾರು ಗೊತ್ತಾ? ಈ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ನೋಡಿ.

ಚಾಣಕ್ಯರ ಪ್ರಕಾರ ಇಂತಹ ವ್ಯಕ್ತಿಗಳು ಭೂಮಿಗೆ ಭಾರ:

  • ಆಚಾರ್ಯ ಚಾಣಕ್ಯ ಹೇಳುವಂತೆ ಅಧ್ಯಯನವನ್ನು ತಪ್ಪಿಸುವ ಮತ್ತು ಜ್ಞಾನವನ್ನು ಪಡೆಯಲು ನಿರಾಕರಿಸುವ ವ್ಯಕ್ತಿಯು ಭೂಮಿಗೆ ಭಾರ. ಶಿಕ್ಷಣವು ನಮ್ಮನ್ನು ಉತ್ತಮ ಮನುಷ್ಯರಾಗಲು ಸಹಾಯ ಮಾಡುತ್ತದೆ. ಆದರೆ ಶಿಕ್ಷಣವನ್ನು ದೂರ ಉಳಿಯುವ ವ್ಯಕ್ತಿ ಎಂದಿಗೂ ಜ್ಞಾನವನ್ನು ಸಂಪಾದಿಸಲಾರ. ಆತ ಕೊನೆಯವರೆಗೂ ದಂಡಪಿಂಡನಾಗಿಯೇ ಇರುತ್ತಾನೆ.
  • ತಾನು ಗಳಿಸಿದ ಸಂಪತ್ತನ್ನು ಒಳ್ಳೆಯ ಉದ್ದೇಶಗಳಿಗಾಗಿ ಬಳಸದ ಅಥವಾ ದಾನ ಮಾಡದ ವ್ಯಕ್ತಿಯನ್ನು ಆಚಾರ್ಯ ಚಾಣಕ್ಯ ಭೂಮಿಗೆ ಹೊರೆ ಎಂದು ಪರಿಗಣಿಸಿದ್ದಾರೆ. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಅಗತ್ಯವಿರುವವರಿಗೆ ದಾನವನ್ನೂ ಮಾಡಬೇಕು.
  • ಇತರರೊಂದಿಗೆ ಕೆಟ್ಟದಾಗಿ ವರ್ತಿಸುವ ಮತ್ತು ನಿರಂತರವಾಗಿ ಕಟುವಾಗಿ ಮಾತನಾಡುವ, ಯಾವಾಗ್ಲೂ ಕೆಟ್ಟ ಬೈಗುಳಗಳನ್ನಾಡುವ ವ್ಯಕ್ತಿಯನ್ನು ಯಾರು ಇಷ್ಟಪಡುವುದಿಲ್ಲ. ಬದಲಾಗಿ ಆತನನ್ನು ಕಿರಿಕಿರಿ ಎಂದು ಭಾವಿಸುತ್ತಾರೆ. ಇಂತಹ ವ್ಯಕ್ತಿಗಳು ಕೂಡಾ ದಂಡಪಿಂಡಗಳು ಎನ್ನುತ್ತಾರೆ ಚಾಣಕ್ಯ.
  • ಚಾಣಕ್ಯರ ಪ್ರಕಾರ ಇತರರ ಬಗ್ಗೆ ಅಸೂಯೆ ಮತ್ತು ದ್ವೇಷದ ಭಾವನೆಗಳನ್ನು ಹೊಂದಿರುವ, ಸ್ವಾರ್ಥಿ ವ್ಯಕ್ತಿಯು ಸಹ ಭೂಮಿಗೆ ಭಾರವಾಗಿಯೇ ಇರುತ್ತಾನೆ.
  • ಆಚಾರ್ಯ ಚಾಣಕ್ಯರು ಮಹಿಳೆಯರು ಮತ್ತು ಹಿರಿಯರನ್ನು ಗೌರವಿಸದ ವ್ಯಕ್ತಿಯನ್ನು ಭೂಮಿಗೆ ಭಾರ ಎಂದು ಹೇಳಿದ್ದಾರೆ. ಅಲ್ಲದೆ  ಮಹಿಳೆಯರು ಮತ್ತು ಹಿರಿಯರನ್ನು ಗೌರವಿಸದ ವ್ಯಕ್ತಿಗೆ ದೇವರ ಆಶೀರ್ವಾದ ಎಂದಿಗೂ ಸಿಗುವುದಿಲ್ಲ, ಅಂತಹ ವ್ಯಕ್ತಿ ಯಾವತ್ತಿದ್ದರೂ ಭೂಮಿಗೆ ಭಾರ ಎಂದು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ