
ಮಾತೃತ್ವ ರಜೆಯು ಮಹಿಳೆಯ ಹಕ್ಕಾಗಿದ್ದು, ಪ್ರತಿಯೊಂದು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯನ್ನು (Maternity Leave) ನೀಡಲೇಬೇಕು. ಹೌದು ಪ್ರಸವಪೂರ್ವ ಮತ್ತು ಹೆರಿಗೆ ನಂತರ ಮಹಿಳೆಯರು ಬಹಳ ಜಾಗೃತೆಯಿಂದ ಇರಬೇಕು, ಮಕ್ಕಳ ಲಾಲನೆ ಪಾಲನೆ ಮಾಡಬೇಕು ಅದಕ್ಕಾಗಿ ಮಾತೃತ್ವ ರಜೆಯನ್ನು ನೀಡಲೇಬೇಕು. ಆದರೆ ಇತ್ತೀಚಿಗೆ ತಮಿಳುನಾಡಿನ ಸರ್ಕಾರಿ ಶಿಕ್ಷಿಯೊಬ್ಬರಿಗೆ ಮಾತೃತ್ವದ ರಜೆ ನೀಡಲು ನಿರಾಕರಿಸಲಾಗಿತ್ತು, ಹೌದು ಆಕೆ ಮೂರನೇ ಬಾರಿಗೆ ತಾಯಿಯಾಗಿದ್ದರಿಂದ (Maternity leave for third pregnancy) ಮಾತೃತ್ವ ರಜೆ ನೀಡಲು ನಿರಾಕರಿಸಲಾಗಿತ್ತು. ಈ ಬಗ್ಗೆ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯನ್ನು ನಿರಾಕರಿಸುವಂತಿಲ್ಲ, ಮಾತೃತ್ವ ರಜೆ ಮಹಿಳಾ ಉದ್ಯೋಗಿಯ ಹಕ್ಕು ಎಂದು ಈ ಸಂಬಂಧ ಸುಪ್ರೀಂ ಕೋರ್ಟ್ (supreme court) ಮಹತ್ವದ ತೀರ್ಪನ್ನು ನೀಡಿದೆ. ಇನ್ನೂ ಭಾರತದಲ್ಲಿ ಹೆರಿಗೆ ರಜೆ, ಮಾತೃತ್ವ ಹಕ್ಕುಗಳ ಕಾನೂನು ಹೇಗಿದೆ ಎಂಬುದನ್ನು ನೋಡೋಣ.
ಭಾರತದಲ್ಲಿ ಹೆರಿಗೆ ರಜೆ ಮಹಿಳಾ ಉದ್ಯೋಗಿಗಳ ಕಾನೂನುಬದ್ಧ ಹಕ್ಕಾಗಿದೆ. ಆದರೆ ಮೂರನೇ ಮಗುವಿನ ಜನನದ ಮೇಲಿನ ಈ ಹಕ್ಕು ರಾಜ್ಯ ಸರ್ಕಾರಗಳ ನೀತಿಗಳು ಮತ್ತು ಸಂಬಂಧಿತ ಸಂಸ್ಥೆಯ ಸೇವಾ ನಿಯಮಗಳನ್ನು ಅವಲಂಬಿಸಿರುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ, ಕೇಂದ್ರ ನಾಗರಿಕ ಸೇವೆಗಳ ನಿಯಮಗಳ ಪ್ರಕಾರ, ಮಹಿಳೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಅವರಿಗೆ ಹೆರಿಗೆ ರಜೆ ಸಿಗುವುದಿಲ್ಲ ಎಂಬ ನಿಯಮವಿದೆ.
ಕೆಲವು ರಾಜ್ಯಗಳಲ್ಲಿ ನೀತಿಗಳ ಅಡಿಯಲ್ಲಿ ಮಹಿಳಾ ಉದ್ಯೋಗಿ ಮೂರನೇ ಬಾರಿ ಗರ್ಭಿಣಿಯಾದರೆ ಅವರಿಗೆ ರಜೆ ನೀಡಲಾಗುವುದಿಲ್ಲ ಎಂಬ ನಿಯಮವಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮೂರನೇ ಬಾರಿಗೆ ಗರ್ಭಿಣಿಯಾದರೆ ಅಂತಹ ಮಹಿಳಾ ಉದ್ಯೋಗಿಗೆ ಹೆರಿಗೆ ರಜೆ ಇಲ್ಲ ಎಂಬ ನಿಯಮವಿದೆ. ಅದೇ ರೀತಿ ತಮಿಳುನಾಡಿನ ರಾಜ್ಯ ನೀತಿಯಲ್ಲೂ ಸಹ ಮೊದಲ ಎರಡು ಮಕ್ಕಳ ಹೆರಿಗೆ ಸಮಯದಲ್ಲಿ ಮಾತ್ರ ಮಾತೃತ್ವ ಸೌಲಭ್ಯ ಎಂಬ ರೂಲ್ಸ್ ಇದ್ದು, ಈ ಕಾರಣದಿಂದ ಇಲ್ಲಿನ ಸರ್ಕಾರಿ ಶಿಕ್ಷಕಿಯೊಬ್ಬರು ಮೂರನೇ ಬಾರಿಗೆ ತಾಯಿಯಾದ ಕಾರಣ ಅವರಿಗೆ ಮಾತೃತ್ವ ರಜೆಯನ್ನು ನೀಡಲು ನಿರಾಕರಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಇತ್ತೀಚಿಗೆ ಸುಪ್ರೀಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡಲು ಯಾವ ಸಂಸ್ಥೆಯೂ ನಿರಾಕರಿಸುವಂತಿಲ್ಲ, ಹೆರಿಗೆ ರಜೆ ಮಹಿಳೆಯರ ಮಾತೃತ್ವ ಹಕ್ಕುಗಳ ಅವಿಭಾಜ್ಯ ಅಂಗವಾಗಿದೆ ಎಂಬ ತೀರ್ಪನ್ನು ನೀಡಿದೆ.
ಇದನ್ನೂ ಓದಿ: ಪ್ರೇಮ ವಿವಾಹ ಅಥವಾ ಕೋರ್ಟ್ ಮ್ಯಾರೇಜ್ ಆಗಲು ಈ ದಾಖಲೆಗಳು ಬೇಕೇ ಬೇಕು
ಮಾತೃತ್ವ ರಜೆ ನೀತಿಯ ಪ್ರಕಾರ, ಯಾವುದೇ ಮಹಿಳೆ ಮಗುವಿನ ಜನನದ ನಂತರ 12 ವಾರಗಳ ವರೆಗೆ ವೇತನ ಸಹಿತ ಮಾತೃತ್ವ ರಜೆ ತೆಗೆದುಕೊಳ್ಳಬಹುದು. 2017 ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಮಾತೃತ್ವ ಸೌಲಭ್ಯ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಯಿತು ಮತ್ತು ಈ ತಿದ್ದುಪಡಿ ಕಾಯ್ದೆಯಡಿಯಲ್ಲಿ 12 ವಾರಗಳ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲಾಯಿತು. ಅಲ್ಲದೆ ಮಹಿಳೆಯೊಬ್ಬರು 3 ತಿಂಗಳೊಳಗಿನ ಮಗುವನ್ನು ದತ್ತು ಪಡೆದರೆ, ಅವರಿಗೆ ವೇತನ ಸಹಿತ 12 ವಾರಗಳ ರಜೆಯನ್ನು ನೀಡಬೇಕು ಎಂಬ ಕಾನೂನು ಕೂಡಾ ಇದೆ.
ಇದೀಗ ಸುಪ್ರೀಂ ಕೋರ್ಟ್ ಹೆರಿಗೆ ರಜೆ ಮಹಿಳಾ ಉದ್ಯೋಗಿಯ ಸಂತಾನೋತ್ಪತ್ತಿ ಹಕ್ಕು, ಮಹಿಳಾ ಉದ್ಯೋಗಿ ಮೂರನೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಹೆರಿಗೆ ರಜೆಯನ್ನು ಕೊಡಲು ನಿರಾಕರಿಸುವಂತಿಲ್ಲ, ಇದು ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತದೆ ಎಂಬ ತೀರ್ಪನ್ನು ನೀಡಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ