ಒಂದು ಸಣ್ಣ ಸಹಾಯ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು; ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ

ಬಸ್ಸಿಗೆ ವಯಸ್ಸಾದ ವ್ಯಕ್ತಿಗಳು ಹತ್ತಿದರೆ ಅಥವಾ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಬಂದ್ರೆ ಅಂತವರಿಗೆ ಸೀಟ್‌ ಬಿಟ್ಟು ಕೊಡಲು ಕೆಲವರು ಹಿಂದೆ ಮುಂದೆ ನೋಡ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ತಾನು ಸುಸ್ತಾಗಿ ಬಂದು ಕೂತಿದ್ದರೂ ಕೂಡಾ ವಯಸ್ಸದ ವ್ಯಕ್ತಿ ಬಂದರೆಂದು ಬಸ್ಸಿನಲ್ಲಿ ವೃದ್ಧನಿಗೆ ತನ್ನ ಸೀಟನ್ನು ಬಿಟ್ಟು ಕೊಟ್ಟಿದ್ದಾನೆ. ನಂತರ ಈ ವ್ಯಕ್ತಿಯೊಂದಿಗೆ ಒಂದಷ್ಟು ಮಾತುಗಳನ್ನಾಡಿದ್ದು, ಈ ಮಾತು ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದು, ಈ ಕುರಿತ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಒಂದು ಸಣ್ಣ ಸಹಾಯ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು; ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Apr 24, 2025 | 5:09 PM

ಕೆಲವೊಮ್ಮೆ ನಾವು ಮಾಡುವಂತ ಸಣ್ಣ ಸಹಾಯ (Help) ಅಥವಾ ಒಂದೊಳ್ಳೆ ಕೆಲಸ ಇನ್ನೊಬ್ಬರ ಮುಖದಲ್ಲಿ ಸಂತೋಷವನ್ನು ಮೂಡಿಸುವುದರ ಜೊತೆಗೆ ನಮಗೆ ಒಂದೊಳ್ಳೆ ಪಾಠವನ್ನು ಸಹ ಕಲಿಸುತ್ತದೆ. ಇದಕ್ಕೆ ಉದಾಹರಣೆಯಂತಿರುವ ಘಟನೆಯೊಂದು ನಡೆದಿದ್ದು, ಪ್ರಯಾಣಿಕರಿಂದ ತುಂಬಿ ಹೋಗಿದ್ದ ಬಸ್ಸಿನಲ್ಲಿ (Bus)  ವೃದ್ಧರೊಬ್ಬರಿಗೆ (elderly man) ಸೀಟ್‌ ಬಿಟ್ಟು ಕೊಡುವ ಮೂಲಕ ವ್ಯಕ್ತಿಯೊಬ್ಬ ಸಣ್ಣ ಸಹಾಯ ಮಾಡಿದ್ದಾನೆ. ಈ ಒಂದು ಸಣ್ಣ ಸಹಾಯ ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು ಎಂದು ಆತ ಹೇಳಿಕೊಂಡಿದ್ದಾನೆ. ಹೌದು ಬಸ್ಸಿನಲ್ಲಿ ವಯಸ್ಸಾದ ವ್ಯಕ್ತಿಗಳಿಗೆ, ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಬರುವರಿಗೆ ಸೀಟ್‌ ಬಿಟ್ಟು ಕೊಡಲು ಹಿಂದೆ ಮುಂದೆ ನೋಡುವವರ ಮಧ್ಯೆ ಈ ವ್ಯಕ್ತಿ ತನಗೆ ಸುಸ್ತಾಗಿದ್ದರೂ ಕೂಡಾ ವೃದ್ಧನಿಗೆ ಸೀಟ್‌ ಬಿಟ್ಟು ಕೊಟ್ಟಿದ್ದಾನೆ.

ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ:

ಈ ಹೃದಯಸ್ಪರ್ಶಿ ಕಥೆಯನ್ನು ಆ ವ್ಯಕ್ತಿ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಈ ಒಂದು ಸಣ್ಣ ಸಹಾಯ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು ಎಂದು ಹೇಳಿದ್ದಾನೆ. moamen12323 ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಪೋಸ್ಟ್ ಇಲ್ಲಿದೆ ನೋಡಿ:

I Gave Up My Seat to an Elderly Man on the Bus ,What He Said to Me Afterwards Made Me Think a Lot.
byu/moamen12323 inself

ಇದನ್ನೂ ಓದಿ
ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಮಂಗಳೂರಿನ ದಂಪತಿ
ಭೂಮಿಯ ಮೇಲಿನ ಸ್ವರ್ಗ ಈ ʼಪಹಲ್ಗಾಮ್ʼ
ಗೋಡಂಬಿ ತಿಂದರೆ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ತಿನ್ನಬೇಕು
ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ?

“ನಾನು ಕೆಲಸ ಮುಗಿಸಿ ಬರುತ್ತಿದ್ದಾಗ ತುಂಬಾ ಸುಸ್ತಾಗಿದ್ದೆ ಯಾವುದಕ್ಕೂ ಮೂಡ್ ಇರಲಿಲ್ಲ, ಮತ್ತು ನಾನು ತುಂಬಾ ರಶ್‌ ಇದ್ದ ಬಸ್ ಹತ್ತಿದೆ. ಆ ಬಸ್ಸಲ್ಲಿ ಇದ್ದ ಒಂದು ಖಾಲಿ ಸೀಟಲ್ಲಿ ಹೋಗಿ ಕುಳಿತೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಇದೇ ಬಸ್‌ಗೆ ವೃದ್ಧ ವ್ಯಕ್ತಿಯೊಬ್ಬರು ಹತ್ತಿದರು. ಅವರು ಕೂಡಾ ತುಂಬಾ ದಣಿದವರಂತೆ ಇದ್ದ ಕಾರಣ ನಾನು ತಕ್ಷಣ ಸೀಟ್‌ ಬಿಟ್ಟು ಕೊಟ್ಟೆ.ಅವರು ಸರಳ ನಗುವಿನೊಂದಿಗೆ ನನಗೆ ಧನ್ಯವಾದ ಹೇಳಿದರು, ಮತ್ತು ಕೆಲ ಹೊತ್ತಿನ ನಂತರ, ಅವರು ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅವರು ನನ್ನ ಕೆಲಸದ ಬಗ್ಗೆ ಮತ್ತು ಜೀವನ ಹೇಗೆ ನಡೆಯುತ್ತಿದೆ ಎಂದು ಕೇಳಿದರು. ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಮಾತನಾಡಿದೆವು. ಅವರ ಮಾತನ್ನು ಕೇಳಿದಾಗ ಅವರು ದಯೆ ಮತ್ತು ಶಾಂತ ಸ್ವಭಾವದ ವ್ಯಕ್ತಿಯೆಂದನಿಸಿತು.

ಇದನ್ನೂ ಓದಿ: ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸಲು ಮರೆಯದಿರಿ

ಇದ್ದಕ್ಕಿದ್ದಂತೆ, ಅವರು ʼನಾನು ನಾಲ್ಕು ದಿನಗಳಿಂದ ಯಾರೊಂದಿಗೂ ಮಾತನಾಡಿಲ್ಲ, ನನಗೆ ಯಾರಾದರೂ ನನ್ನ ಮಾತನ್ನು ಕೇಳುವವರು ಬೇಕಾಗಿತ್ತುʼ ಎಂದು ಹೇಳಿದ್ರು. ಅವರ ಈ ಮಾತು ನಿಜವಾಗಿಯೂ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು. ಇದಕ್ಕೆ ಏನು ಪ್ರತಿಕ್ರಿಯಿಸಬೇಕು ಗೊತ್ತಾಗಲಿಲ್ಲ, ಆದ್ರೆ ಅವರು ಬಸ್ಸಿನಿಂದ ಇಳಿಯುವವರೆಗೂ ಅವರ ಮಾತುಗಳನ್ನು ನಾನು ಆಲಿಸಿದೆ.  ಹೀಗೆ ಮಾತುಗಳನ್ನು ಕೇಳಿಸುತ್ತಾ ನಮ್ಮ ಒಂದು ಸಣ್ಣ ನಡೆ ಒಬ್ಬರ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನೇ ಉಂಟುಮಾಡುತ್ತದೆ ಎಂಬುದನ್ನು ಅರಿತುಕೊಂಡೆ. ನೀವು ಕೂಡಾ ಇಂತಹ ಸಣ್ಣ ಕ್ಷಣವನ್ನುಎಂದಾದರೂ ಅನುಭವಿಸಿದ್ದೀರಾ?” ಎಂದು ಬರೆದುಕೊಂಡಿದ್ದಾನೆ. ಈ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಈತ ಮಾಡಿದ ಸಣ್ಣ ಉಪಕಾರಕ್ಕೆ ವ್ಯಾಪಕ ಶ್ಲಾಘನೆ ಕೂಡಾ ವ್ಯಕ್ತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Thu, 24 April 25