AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rare Smiley Face: ಏಪ್ರಿಲ್ 25 ರಂದು ನಡೆಯಲಿದೆ ಖಗೋಳ ವಿಸ್ಮಯ; ಗ್ರಹಗಳ ಸಂಯೋಗದಿಂದ ಆಕಾಶದಲ್ಲಿ ರೂಪುಗೊಳ್ಳಲಿದೆ ‘ಸ್ಮೈಲಿ ಫೇಸ್’

ಅಪರೂಪಕ್ಕೊಮ್ಮೆ ಆಕಾಶದಲ್ಲಿ ಗ್ರಹಗಳ ಸಂಯೋಜನೆಯಿಂದ ಖಗೋಳ ವಿಸ್ಮಯಗಳು ನಡೆಯುವುದುಂಟು. ಅದೇ ರೀತಿ ಏಪ್ರಿಲ್‌ 25 ಅಂದರೆ ನಾಳೆ ಕೂಡಾ ಖಗೋಳ ವಿಸ್ಮಯವೊಂದು ನಡೆಯಳಿದ್ದು, ತ್ರಿವಳಿ ಗ್ರಹಗಳ ಸಂಯೋಜನೆಯಿಂದ ಆಗಸದಲ್ಲಿ ನಗು ಮುಖ ಬೆಳಗಲಿದೆ. ಶುಕ್ರ, ಶನಿ ಮತ್ತು ಅರ್ಧ ಚಂದ್ರನ ಸಂಯೋಜನೆಯಿಂದ ಆಕಾಶದಲ್ಲಿ 'ಸ್ಮೈಲಿ ಫೇಸ್' ಗೋಚರಿಸಲಿದ್ದು, ಇದು ಯಾವ ಸಮಯದಲ್ಲಿ ಕಾಣಿಸಲಿದೆ, ಇದನ್ನು ಹೇಗೆ ವೀಕ್ಷಿಸುವುದು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

Rare Smiley Face: ಏಪ್ರಿಲ್ 25 ರಂದು ನಡೆಯಲಿದೆ ಖಗೋಳ ವಿಸ್ಮಯ; ಗ್ರಹಗಳ ಸಂಯೋಗದಿಂದ ಆಕಾಶದಲ್ಲಿ ರೂಪುಗೊಳ್ಳಲಿದೆ 'ಸ್ಮೈಲಿ ಫೇಸ್'
ಸ್ಮೈಲಿ ಫೇಸ್Image Credit source: Google
ಮಾಲಾಶ್ರೀ ಅಂಚನ್​
|

Updated on: Apr 24, 2025 | 7:47 PM

Share

ಬಾಹ್ಯಾಕಾಶದಲ್ಲಿ (Space) ಆಗೊಮ್ಮೆ ಈಗೊಮ್ಮೆ ಅದ್ಭುತ ಪವಾಡಗಳು ನಡೆಯುತ್ತಿರುತ್ತವೆ. ಗ್ರಹಗಳ ಸಂಯೋಜನೆಯಿಂದ ಈ ಹಿಂದೆಯೂ ಇಂತಹ ಸಾಕಷ್ಟು ಅದ್ಭುತಗಳು (phenomenon) ನಡೆದಿವೆ. ಅದೇ ರೀತಿ ಏಪ್ರಿಲ್‌ 25 ರಂದು ಅಂದರೆ ನಾಳೆ ಆಕಾಶದಲ್ಲಿ ಅದ್ಭುತ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ಹೌದು ನಾಳೆ ಶುಕ್ರ, ಶನಿ ಮತ್ತು ಅರ್ಧ ಚಂದ್ರನ ಸಹಯೋಗದಿಂದ ಆಕಾಶದಲ್ಲಿ ನಗು ಮುಖ ಬೆಳಗಲಿದೆ. ಈ ಮೂರು ಗ್ರಹಗಳ ಅಪರೂಪದ ಜೋಡಣೆಯಿಂದ ಆಗಸದಲ್ಲಿ ‘ಸ್ಮೈಲಿ ಫೇಸ್‘  (Smiley Face )ಗೋಚರಿಸಲಿದ್ದು, ಈ ಖಗೋಳ ಅದ್ಭುತ ಯಾವಾಗ ಗೋಚರಿಸಲಿದೆ, ಅದನ್ನು ಹೇಗೆ ವೀಕ್ಷಿಸುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಆಕಾಶದಲ್ಲಿ ಗೋಚರಿಸಲಿದೆ ‘ಸ್ಮೈಲಿ ಫೇಸ್’:

ಏಪ್ರಿಲ್‌ 25, 2025 ರಂದು ಅಂದರೆ ನಾಳೆ ಬೆಳಗಿನ ಜಾವ 5:30 ರ ಸುಮಾರಿಗೆ ಆಕಾಶದಲ್ಲಿ ‘ಸ್ಮೈಲಿ ಫೇಸ್’ ಕಾಣಿಸಲಿದೆ. ಬೆಳಗಿನ ಜಾವದ ವೇಳೆಗೆ ಈ ಖಗೋಳ ಅದ್ಭುತ ಗೋಚರಿಸಲಿದ್ದು, ಆಕಾಶದಲ್ಲಿ ಕಾಣಿಸುವ ಈ ನಗು ಮುಖವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ.  ಕೇವಲ ಒಂದು ಗಂಟೆ ಮಾತ್ರ ಈ ಖಗೋಳ ಅಧ್ಬುತ ಗೋಚರಿಸಲಿದೆ. ಶುಕ್ರ, ಶನಿ ಗ್ರಹ ಮತ್ತು ಅರ್ಧ ಚಂದ್ರನ ಸಂಯೋಜನೆಯಿಂದ ಆಕಾಶದಲ್ಲಿ  ಸ್ಮೈಲಿ ಫೇಸ್ ರಚನೆಯಾಗಲಿದೆ.  ಶುಕ್ರ ಮತ್ತು ಶನಿ ಕಣ್ಣಿನಂತೆ ಇದ್ದರೆ, ಅರ್ಧ ಚಂದ್ರ ಬಾಯಿಯ ಆಕಾರದಲ್ಲಿ ಕಾಣಿಸಲಿದೆ.

ಇದನ್ನೂ ಓದಿ: ಒಂದು ಸಣ್ಣ ಸಹಾಯ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು; ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ

ಇದನ್ನೂ ಓದಿ
Image
ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಮಂಗಳೂರಿನ ದಂಪತಿ
Image
ಭೂಮಿಯ ಮೇಲಿನ ಸ್ವರ್ಗ ಈ ʼಪಹಲ್ಗಾಮ್ʼ
Image
ಗೋಡಂಬಿ ತಿಂದರೆ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ತಿನ್ನಬೇಕು
Image
ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ?

ಏಪ್ರಿಲ್ 25, 2025 ರ ಮುಂಜಾನೆ ಶುಕ್ರ, ಶನಿ ಮತ್ತು ಅರ್ಧಚಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಸೂರ್ಯೋದಯಕ್ಕೂ ಮುನ್ನ ಪೂರ್ವ ದಿಕ್ಕಿನಲ್ಲಿ ಈ ಸ್ಮೈಲಿ ಫೇಸ್ ನ  ಸ್ಪಷ್ಟ ನೋಟವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು. ಹೀಗೆ ಮೂರು ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ತ್ರಿವಳಿ ಸಂಯೋಗ ಅಂತಾನು ಕರಿತಾರೆ. ನಾಳೆ ಮುಂಜಾನೆ ಶುಕ್ರ, ಶನಿ ಗ್ರಹ ಮತ್ತು ಚಂದ್ರನ ತ್ರಿವಳಿ ಸಂಯೋಗದಿಂದ ಆಕಾಶದಲ್ಲಿ ಸ್ಮೈಲಿ ಫೇಸ್ ಕಾಣಿಸಲಿದೆ.  ಇದನ್ನು ನೀವು ಬರಿಗಣ್ಣಿನಿಂದ ನೋಡಬಹುದು. ಜೊತೆಗೆ ಉತ್ತಮ ನೋಟಕ್ಕಾಗಿ ನೀವು ದೂರದರ್ಶಕ ಅಥವಾ ಬೈನಾಕ್ಯುಲರ್‌ನಿಂದ ವೀಕ್ಷಿಸಬಹುದು. ಇದಕ್ಕೂ ಮೊದಲು, 2008 ರಲ್ಲಿ ಶುಕ್ರ, ಗುರು ಮತ್ತು ಚಂದ್ರ ಒಟ್ಟಿಗೆ ಕಾಣಿಸಿಕೊಂಡಾಗ ಇದೇ ರೀತಿಯ ದೃಶ್ಯ ಆಕಾಶದಲ್ಲಿ ಕಂಡುಬಂದಿತ್ತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ