Jamun: ಮಳೆಗಾಲದಲ್ಲಿ ಈ ಹಣ್ಣನ್ನು ಏಕೆ ಸೇವಿಸಬೇಕು! ಇಲ್ಲಿವೆ 5 ಕಾರಣಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 01, 2023 | 4:09 PM

ಇಂಡಿಯನ್ ಬ್ಲ್ಯಾಕ್ ಬೆರ್ರಿ ಅಥವಾ ಬ್ಲ್ಯಾಕ್ ಪ್ಲಮ್ ಎಂದೂ ಕರೆಯಲ್ಪಡುವ ಜಾಮೂನ್ ಅನ್ನು ವಿಶ್ವದ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ರುಚಿಯಲ್ಲಿ ಹುಳಿ ಮತ್ತು ಸಿಹಿಯಾಗಿದೆ. ಆದರೆ ಈ ಹಣ್ಣನ್ನು ಮಳೆಗಾಲದಲ್ಲಿ ಏಕೆ ಸೇವಿಸಬೇಕು? ಇಲ್ಲಿದೆ ಮಾಹಿತಿ.

Jamun: ಮಳೆಗಾಲದಲ್ಲಿ ಈ ಹಣ್ಣನ್ನು ಏಕೆ ಸೇವಿಸಬೇಕು! ಇಲ್ಲಿವೆ 5 ಕಾರಣಗಳು
ಸಾಂದರ್ಭಿಕ ಚಿತ್ರ
Follow us on

ನೀವು ಜಾಮೂನ್ ಹಣ್ಣಿನ ಬಗ್ಗೆ ಕೇಳಿರಬಹುದು. ಇದನ್ನು ಕಪ್ಪು ಪ್ಲಮ್ ಎಂದೂ ಕರೆಯಲಾಗುತ್ತದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇಂಡಿಯನ್ ಬ್ಲ್ಯಾಕ್ ಬೆರ್ರಿ ಅಥವಾ ಬ್ಲ್ಯಾಕ್ ಪ್ಲಮ್ ಎಂದೂ ಕರೆಯಲ್ಪಡುವ ಜಾಮೂನ್ ಅನ್ನು ವಿಶ್ವದ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ರುಚಿಯಲ್ಲಿ ಹುಳಿ ಮತ್ತು ಸಿಹಿ ಎರಡು ಗುಣಗಳನ್ನು ಹೊಂದಿದೆ. ಅದೆಲ್ಲದರ ಜೊತೆಗೆ ಅತ್ಯಧಿಕ ಪ್ರೋಟಿನ್, ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ ಮತ್ತು ಬಿ ನಂತಹ ಪೋಷಕಾಂಶಗಳಿಂದ ಹೇರಳವಾಗಿದೆ. ಜಾಮೂನ್ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮತ್ತು ಒಟ್ಟಾರೆ ಯೋಗ ಕ್ಷೇಮವನ್ನು ಸಮತೋಲನಗೊಳಿಸುವ ಹಣ್ಣುಗಳಲ್ಲಿ ಒಂದಾಗಿದೆ.

ಜಾಮೂನಿನ 5 ಪ್ರಮುಖ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:

1- ಜಾಮೂನು ಹಣ್ಣಿನಲ್ಲಿ ಕಬ್ಬಿಣದ ಶಕ್ತಿ ಸಮೃದ್ಧವಾಗಿದೆ ಮತ್ತು ವಿಟಮಿನ್ ಸಿ ಯಿಂದ ತುಂಬಿದೆ. ಇದು ನಮ್ಮ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.

2. ಈ ಹಣ್ಣು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

3- ಜಾಮೂನು ಜೀರ್ಣಕಾರಿ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ ಮಾಡುವ ಶೀತಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಮಳೆಗಾಲದಲ್ಲಿ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ನೇರಳೆ ಹಣ್ಣಿನ ವಿನೆಗರ್ ಸೇವಿಸಿದ್ದೀರಾ? ಇದರಲ್ಲಿನ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು

4. ಜಾಮೂನಿನಲ್ಲಿರುವ ವಿಟಮಿನ್ ಸಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಆರೋಗ್ಯಕರ ಒಸಡುಗಳನ್ನು ಕಾಪಾಡಿಕೊಳ್ಳಲು ಮತ್ತು ದುರ್ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

5- ಜಾಮೂನಿನಲ್ಲಿರುವ ಹೆಚ್ಚಿನ ಫೈಬರ್ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ, ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಇದರಿಂದಾಗಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ, ಈ ಋತುವಿನಲ್ಲಿ ಅದರ ಪೌಷ್ಟಿಕ ಆರೋಗ್ಯ ಪ್ರಯೋಜನಗಳಿಗಾಗಿ ಜಾಮೂನನ್ನು ಆನಂದಿಸಲು ಮರೆಯಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:01 pm, Sat, 1 July 23