Jaya Kishori : ಆಧ್ಯಾತ್ಮಿಕ ಪ್ರಚಾರಕಿ ಜಯ ಕಿಶೋರಿ ಬಳಿ 2 ಲಕ್ಷ ರೂ. ಮೌಲ್ಯದ ಬ್ರ್ಯಾಂಡೆಡ್ ಡಿಯೊರ್ ಬ್ಯಾಗ್‌, ಏನಿದರ ವಿಶೇಷತೆ?

ಆಧ್ಯಾತ್ಮಿಕ ಪ್ರಚಾರಕಿ ಹಾಗೂ ಗಾಯಕಿ ಜಯ ಕಿಶೋರಿ ಅವರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ದುಬಾರಿ ಹ್ಯಾಂಡ್‌ ಬ್ಯಾಗ್‌ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹೌದು, ದುಬಾರಿ ಡಿಯೋ ಬ್ಯಾಗ್‌ ಹಿಡಿದು ಏರ್‌ಪೋರ್ಟ್‌ನಲ್ಲಿ ಫೊಟೋಗೆ ಪೋಸ್‌ ಕೊಟ್ಟಿದ್ದಾರೆ. ಸದ್ಯಕ್ಕೆ ಈ ಬ್ಯಾಗ್ ಕುರಿತಂತೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಈ ದುಬಾರಿ ಬೆಲೆಯ ಡಿಯೊರ್ ಬ್ಯಾಗ್ ನ ವಿಶೇಷತೆಯೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Jaya Kishori : ಆಧ್ಯಾತ್ಮಿಕ ಪ್ರಚಾರಕಿ ಜಯ ಕಿಶೋರಿ ಬಳಿ 2 ಲಕ್ಷ ರೂ. ಮೌಲ್ಯದ ಬ್ರ್ಯಾಂಡೆಡ್ ಡಿಯೊರ್ ಬ್ಯಾಗ್‌, ಏನಿದರ ವಿಶೇಷತೆ?
ವೈರಲ್​​​​​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2024 | 12:33 PM

ಸರಳ ಜೀವನ ಹಾಗೂ ಸದಾ ಲೌಕಿಕ ಮೋಹ ತ್ಯಜಿಸುವಂತೆ ಬೋಧನೆ ಮಾಡುವ ಜಯ ಕಿಶೋರಿ ಅವರು ದೇಶದ ಪ್ರಸಿದ್ಧ ಕಥೆಗಾರ್ತಿ ಮತ್ತು ಪ್ರೇರಕ ಭಾಷಣಕಾರರಾಗಿ ಗುರುತಿಸಿಕೊಂಡವರು. ದಿನವೂ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ಜಯ ಕಿಶೋರಿಯವರು ಇದೀಗ ದುಬಾರಿ ಡಿಯೊರ್ ಬ್ಯಾಗ್‌ ಹಿಡಿದು ಏರ್‌ಪೋರ್ಟ್‌ನಲ್ಲಿ ಫೊಟೋಗೆ ಪೋಸ್‌ ಕೊಡುವ ಮೂಲಕ ಸುದ್ದಿಯಾಗಿದ್ದಾರೆ.

ಈ ಡಿಯೊರ್ ಬ್ಯಾಗ್‌ ನ ವಿಶೇಷತೆಯೇನು?

Dior ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಹತ್ತಿ ಮತ್ತು ಕರುವಿನ ಚರ್ಮದಿಂದ ಈ ಲೆದರ್ ಬ್ಯಾಗ್ ತಯಾರಿಸಲಾಗುತ್ತದೆ. ಈ ಬ್ಯಾಗ್ ಲೈನಿಂಗ್ ಅನ್ನು ರೇಷ್ಮೆ, ಹತ್ತಿಯಿಂದ ಮಾಡಲಾಗುತ್ತದೆ. ಅದಲ್ಲದೇ, ಇದರ ತಯಾರಿಕೆಗೆ ಕರು ಚರ್ಮ, ಕುರಿಮರಿ ಚರ್ಮ ಅಥವಾ ಮೊಸಳೆಯಂತಹ ಪ್ರಾಣಿಗಳ ಚರ್ಮವನ್ನು ಬಳಸಲಾಗುತ್ತದೆ. ಇದನ್ನು ಉತ್ತಮ ಗುಣಮಟ್ಟದ ವಸ್ತುಗಳಿಂದ ರಚಿಸಲಾಗಿದ್ದು, ವಿನ್ಯಾಸ ಹಾಗೂ ಶೈಲಿಯಿಂದಲೇ ಈ ಬ್ಯಾಗ್ ದುಬಾರಿಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಮನೆ ಮುಂದೆ ಈ ಸಸ್ಯಗಳನ್ನು ನೆಟ್ಟರೆ ಇಲಿಗಳ ಕಾಟಕ್ಕೆ ಮುಕ್ತಿ ಗ್ಯಾರಂಟಿ

ವಿಡಿಯೋ ಇಲ್ಲಿದೆ ನೋಡಿ:

ಬ್ರ್ಯಾಂಡೆಡ್ ಡಿಯೊರ್ ಬ್ಯಾಗ್ ಬೆಲೆ ಎಷ್ಟು

ಸರಳ ಜೀವನದ ಬಗ್ಗೆ ಬೋಧಿಸುವ ಆಧ್ಯಾತ್ಮಿಕ ಪ್ರಚಾರಕಿ ಜಯಾ ಕಿಶೋರಿಯವರು ದುಬಾರಿ ಬೆಲೆಯ ಬ್ಯಾಗ್ ನ್ನು ಹೊಂದಿದ್ದಾರೆ. ದುಬಾರಿ ಬೆಲೆಯ ಈ ಬ್ರ್ಯಾಂಡೆಡ್ ಡಿಯೊರ್ ಬ್ಯಾಗ್‌ ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಆದರೆ ವಿನ್ಯಾಸ ಹಾಗೂ ಗುಣಮಟ್ಟದ ಆಧಾರದ ಮೇಲೆ ಇದರ ಮೌಲ್ಯವು ಕೂಡ ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ