Artificial Jewelry: ಕೃತಕ ಆಭರಣಗಳು ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು

|

Updated on: Nov 17, 2023 | 11:13 AM

ಕೃತಕ ಆಭರಣಗಳನ್ನು ಧರಿಸುವ ಪ್ರತೀ ಮಹಿಳೆಯರೂ ಕೂಡ ಚರ್ಮದ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ. ಕೆಲವೊಮ್ಮೆ ಕೃತಕ ಆಭರಣಗಳನ್ನು ಧರಿಸಿದ ನಂತರ ಕುತ್ತಿಗೆಯ ಸುತ್ತ ತುರಿಕೆ, ಚರ್ಮ ಕೆಂಪಾಗುವುದು, ದದ್ದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಕೃತಕ ಆಭರಣ ಧರಿಸುವ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಚರ್ಮದ ಆರೈಕೆಯ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Artificial Jewelry: ಕೃತಕ ಆಭರಣಗಳು ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು
Jewellery allergy
Image Credit source: Pinterest
Follow us on

ಆಭರಣಗಳೆಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ. ಮದುವೆಯಿಂದ ಹಿಡಿದು ಹಬ್ಬ ಹರಿದಿನಗಳ ಸಮಯದಲ್ಲಿ ಮಹಿಳೆಯರಿಗಂತೂ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ವಿನ್ಯಾಸದ ಆಭರಣಗಳನ್ನು ಧರಿಸುತ್ತಾರೆ. ಕೆಲವೊಂದಿಷ್ಟು ಮಂದಿ ಲಕ್ಷ ಲಕ್ಷ ಖರ್ಚು ಮಾಡಿ ಬಂಗಾರದ ಆಭರಣಗಳನ್ನು ಖರೀದಿಸಿದರೆ, ಇನ್ನು ಕೆಲವರು ಬಂಗಾರವನ್ನೇ ಹೋಲುವ ಕೃತಕ ಆಭರಣಗಳನ್ನು ಖರೀದಿಸುತ್ತಾರೆ. ಆದರೆ ಕೃತಕ ಆಭರಣಗಳನ್ನು ಧರಿಸುವ ಪ್ರತೀ ಮಹಿಳೆಯರೂ ಕೂಡ ಚರ್ಮದ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ. ಕೆಲವೊಮ್ಮೆ ಕೃತಕ ಆಭರಣಗಳನ್ನು ಧರಿಸಿದ ನಂತರ ಕುತ್ತಿಗೆಯ ಸುತ್ತ ತುರಿಕೆ, ಚರ್ಮ ಕೆಂಪಾಗುವುದು, ದದ್ದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಕೃತಕ ಆಭರಣ ಧರಿಸುವ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಚರ್ಮದ ಆರೈಕೆಯ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಕೃತಕ ಆಭರಣ ಧರಿಸುವ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಚರ್ಮದ ಆರೈಕೆ:

ಗುಣಮಟ್ಟ ಪರಿಶೀಲಿಸಿ:

ಸಾಕಷ್ಟು ಮಹಿಳೆಯರು ಗುಣಮಟ್ಟ ಪರಿಶೀಲಿಸುವ ಬದಲು ಅವರ ಸೀರೆಗಳಿಗೆ ಮ್ಯಾಚಿಂಗ್​​​ ಆಗುವಂತಹ ಆಭರಣಗಳನ್ನು ಖರೀದಿಸುವಲ್ಲಿಯೇ ಹೆಚ್ಚು ಮಗ್ನನಾಗಿರುತ್ತಾರೆ. ಇಂತಹ ತಪ್ಪುಗಳು ಕೂಡ ಚರ್ಮದ ಸಮಸ್ಯೆಗಳಿಗೆ ಕಾರಣವಾಬಹುದು. ಆದ್ದರಿಂದ ಆದಷ್ಟು ಒಳ್ಳೆಯ ಗುಣಮಟ್ಟದ ಆಭರಣಗಳನ್ನು ಖರೀದಿಸಿ.

ಮಾಯಿಶ್ಚರೈಸರ್ ಹಚ್ಚಿ:

ಕೃತಕ ಆಭರಣಗಳನ್ನು ಧರಿಸುವ ಮೊದಲು ಕುತ್ತಿಗೆ ಹಾಗೂ ಕೈಗಳಿಗೆ ಮಾಯಿಶ್ಚರೈಸರ್ ಅನ್ವಯಿಸಿ. ಆ ನಂತರ ಪೌಡರ್ ಹಚ್ಚಿದರೆ ಅಲರ್ಜಿ ಬರುವುದಿಲ್ಲ. ಚರ್ಮದ ಅಲರ್ಜಿ ಇರುವವರು ಚರ್ಮಕ್ಕೆ ಬಿಗಿಯಾದ ಆಭರಣಗಳನ್ನು ಧರಿಸಬಾರದು.

ಇದನ್ನೂ ಓದಿ: ಕನ್ನಡತನ ಮೆರೆದ ಬ್ರಿಟನ್​​ ಪ್ರಧಾನಿಯ ಪತ್ನಿ; ಅಕ್ಷತಾ ಮೂರ್ತಿ ಸರದಲ್ಲಿ ಕರ್ನಾಟಕ ಲಾಂಛನ

ಒಣಗಲು ಬಿಡಿ:

ಆಭರಣಗಳನ್ನು ಧರಿಸಿಕೊಂಡು ವಿಶೇಷ ದಿನ ಅಥವಾ ಮದುವೆ ಸಮಾರಂಭಗಳಲ್ಲಿ ದಿನವಿಡೀ ಓಡಾಡಿರುವುದರಿಂದ ಬೆವರುವುದು ಸಾಮಾನ್ಯ. ಇದಲ್ಲದೇ ಮುಖ ತೊಳೆಯುವಾಗಲೂ ಆಭರಣ ಒದ್ದೆಯಾಗುತ್ತದೆ. ಆದ್ದರಿಂದ ಒದ್ದೆಯಾದ ಆಭರಣಗಳನ್ನು ತಕ್ಷಣವೇ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಡಬೇಡಿ. ಆದ್ದರಿಂದ ಸ್ವಲ್ಪ ಸಮಯದ ವರೆಗೆ ಒಣಗಲು ಬಿಡಿ.

ಅಲೋವೆರಾ ಜೆಲ್ ಹಚ್ಚಿ:

ಕೃತಕ ಆಭರಣಗಳಿಂದ ನೀವು ಅಲರ್ಜಿಯ ಸಮಸ್ಯೆಯನ್ನು ಹೊಂದಿದ್ದರೆ ಇರುವವರು ಆಭರಣದೊಳಗೆ ಪ್ಲಾಟಿನಂ ಲೇಪನವಿರುವ ಆಭರಣ ಖರೀದಿಸಿ. ಆಭರಣ ತೆಗೆದ ನಂತರ ತುರಿಕೆ ಅನಿಸಿದರೆ ಆ ಜಾಗಕ್ಕೆ ಅಲೋವೆರಾ ಜೆಲ್ ಹಚ್ಚಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: