ಚುಮು ಚುಮು ಚಳಿಯ ದೇಹವನ್ನು ಬೆಚ್ಚಗೆ ಇರಿಸುವುದು ಮುಖ್ಯ. ಈ ಸಮಯದಲ್ಲಿ ಬಿಸಿ ಬಿಸಿ ಆಹಾರ ಪದಾರ್ಥಗಳು, ಆರೋಗ್ಯ, ಚರ್ಮ ರಕ್ಷಣೆಯ ಜೊತೆಗೆ ಬೆಚ್ಚಗೆ ಇರಿಸುವ ಉಡುಪುಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಉಡುಪುಗಳ ಆಯ್ಕೆಯ ಬಗೆಗೆ ತೀರಾ ಯೋಚಿಸಬೇಡಿ. ಈಗಾಗಲೇ ಮಾರುಕಟ್ಟೆಯಲ್ಲಿ ಚಳಿಗಾಲಕ್ಕೆಂದೆ ವಿವಿಧ ವಿನ್ಯಾಸದ ಉಡುಪುಗಳು ಲಭ್ಯವಿದ್ದು, ನಿಮಗೆ ಕಂಫರ್ಟ್ ಫೀಲ್ ನೀಡುವ ಉಡುಪುಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು.
ಚಳಿಗಾಲದಲ್ಲಿ ಉಡುಪುಗಳ ಆಯ್ಕೆಯ ವಿಚಾರದಲ್ಲಿ ಹೆಚ್ಚು ಗಮನ ನೀಡಬೇಕು. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಧಿರಿಸುಗಳು ಲಭ್ಯವಿದ್ದರೂ, ನಿಮಗೆ ಆರಾಮದಾಯಕ ಎನಿಸುವ ಉಡುಗೆಗಳನ್ನು ಆಯ್ದುಕೊಂಡರೆ ಉತ್ತಮ.
* ಸ್ವೆಟರ್ : ಚಳಿಗಾಲದಲ್ಲಿ ಮೈ ಬೆಚ್ಚಗೆ ಇರಿಸುವ ಉಡುಗೆಯಲ್ಲಿ ಸ್ವೆಟರ್ ಬೆಸ್ಟ್ ಎನ್ನಬಹುದು. ಒಳಗೆ ಟೀ ಶರ್ಟ್ ಹಾಕಿ, ಅದರ ಮೇಲೆ ಸ್ವೆಟರ್ ಹಾಕಿಕೊಂಡರೆ, ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಮಾರುಕಟ್ಟೆಯಲ್ಲಿ ತೆಳುವಾದ ಸ್ವೆಟರ್, ಬಟನ್ ಸ್ವೆಟರ್ ಹಾಗೂ ಚೆಕ್ಸ್ ಸ್ವೆಟರ್ ಹೀಗೆ ನಾನಾ ರೀತಿಯ ಸ್ವೆಟರ್ ಗಳು ಲಭ್ಯವಿದ್ದು, ನಿಮಗೆ ಇಷ್ಟವಾಗುವ ಉಡುಗೆಯನ್ನು ಆಯ್ಕೆ ಮಾಡಿ ಧರಿಸಬಹುದು.
* ಟ್ರಿಂಚ್ ಕೋಟ್ಸ್ : ಟ್ರೆಂಟ್ ಕೋಟ್ಸ್ ಗಳು ಚಳಿಗಾಲಕ್ಕೆ ಬೆಸ್ಟ್ ಆಯ್ಕೆಯಲ್ಲಿ ಒಂದು. ಡಾರ್ಕ್ ಕಲರ್ ಟ್ರಿಂಚ್ ಕೋಟ್ಸ್ ಉಡುಪುವಿಗೆ ಹೊಂದುವಂತೆ ಧರಿಸಿದರೆ ನಿಮ್ಮ ಸೌಂದರ್ಯವನ್ನು ಮತ್ತಷ್ಟು ದ್ವಿಗುಣಗೊಳಿಸುತ್ತವೆ.
* ಪೆನ್ಸಿಲ್ ಸ್ಕರ್ಟ್ : ಪೆನ್ಸಿಲ್ ಸ್ಕರ್ಟ್ ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ಉಣ್ಣೆದಾರದಿಂದ ತಯಾರಿಸಲಾಗಿದ್ದು, ಬೆಚ್ಚನೆಯ ಅನುಭವ ನೀಡುತ್ತದೆ. ಈ ಉಡುಗೆಯು ತೆಳ್ಳಗೆ ಇರುವವರಿಗೆ ಉತ್ತಮ ಆಯ್ಕೆಯಲ್ಲಿ ಒಂದಾಗಿದೆ.
* ಪ್ರಿಂಟೆಡ್ ಉಡುಗೆಗಳು: ಈ ಪ್ರಿಂಟೆಂಡ್ ಉಡುಗೆಗಳು ಚಳಿಗಾಲಕ್ಕೆ ಹೊಂದಿಕೆಯಾಗುತ್ತದೆ. ಆದರೆ ಈ ಸಮಯದಲ್ಲಿ ಬಣ್ಣಗಳ ಆಯ್ಕೆಯ ಮೇಲೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು ಸ್ಕಿನ್ ಟೋನ್ ಗೆ ಹೊಂದಿಕೆಯಾಗುವ ಬಣ್ಣಗಳ ಧಿರಿಸನ್ನು ಆಯ್ದುಕೊಳ್ಳಿ.
ಇದನ್ನೂ ಓದಿ:ನೀವು ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುತ್ತಿದ್ದೀರಾ? ಅದರ ಪರಿಣಾಮ ಇಲ್ಲಿದೆ
* ಜಾಕೆಟ್ಸ್ : ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಪಾರ್ಕಸ್, ಏನಾರಕ್ಸ್, ಮಿಲಿಟರಿ ಸ್ಟೈಲ್, ಪಫರ್, ಬಾಂಬರ್ ಜಾಕೆಟ್ಸ್ ಗಳು ಹೀಗೆ ಹಲವಾರು ಜಾಕೆಟ್ಸ್ ಗಳು ಲಭ್ಯವಿದೆ. ಈ ಜಾಕೆಟ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಉಡುಗೆಗೆ ಹೊಂದಿಕೆಯಾಗುವ ಜಾಕೆಟ್ಸ್ ಗಳತ್ತ ಗಮನ ಹರಿಸಿ.
* ಸಾಕ್ಸ್, ಬೂಟುಗಳು ಮತ್ತು ಟೋಪಿಗಳು : ನಿಮ್ಮ ಉಡುಗೆಗೆ ಮ್ಯಾಚ್ ಆಗುವ ಸಾಕ್ಸ್, ಬೂಟುಗಳು ಮತ್ತು ಟೋಪಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಈ ಉಡುಗೆಯು ನಿಮ್ಮನ್ನು ಮತ್ತಷ್ಟು ಆಕರ್ಷಕವನ್ನಾಗಿ ಕಾಣುವಂತೆ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: