ಭಾರತೀಯ ಪಾಕಪದ್ಧತಿಯಲ್ಲಿ ಆಹಾರದ ಘಮ ಹಾಗೂ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ ಸೂಪ್, ಸಲಾಡ್, ರಸಂ, ಚಟ್ನಿ, ದಾಲ್ ಹೀಗೆ ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಘಮ, ಬಣ್ಣ ಹಾಗೂ ರುಚಿಯಿಂದಾಗಿ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ಆದರೆ ಈ ಸೊಪ್ಪು ಎರಡು ಮೂರು ದಿನಕ್ಕಿಂತ ಹೆಚ್ಚು ಹಾಗೆಯೇ ಬಿಟ್ಟರೆ ಹಾಳಾಗಿ ಬಿಡುತ್ತದೆ. ಇದನ್ನು ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ. ಎಷ್ಟೋ ಬಾರಿ ಹಾಳಾದ ಕೊತ್ತಂಬರಿ ಸೊಪ್ಪನ್ನೆಲ್ಲಾ ಎಸೆಯುತ್ತೇವೆ. ಆದರೆ ಈ ಕೆಲವು ಟಿಪ್ಸ್ ಬಗ್ಗೆ ತಿಳಿದಿದ್ದರೆ ಇದನ್ನು ಫ್ರೆಶ್ ಆಗಿರಿಸಿಕೊಳ್ಳಬಹುದು.
- ತಾಜಾ ವಾಸನೆ ಮತ್ತು ತಿಳಿ ಹಸಿರು ಮತ್ತು ಸಣ್ಣ ಎಲೆಗಳನ್ನು ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಖರೀದಿಸಿದರೆ ಇದನ್ನು ಹೆಚ್ಚು ಕಾಲ ತಾಜಾವಾಗಿಡಬಹುದು.
- ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿರಿಸಲು ಅದರ ಬೇರನ್ನು ಕತ್ತರಿಸಿ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆಯಲ್ಲಿ ಬೆರೆಸಿದ ಐಸ್ ಟ್ರೇಯಲ್ಲಿ ಸಂಗ್ರಹಿಸಿಟ್ಟರೆ ಹಾಳಾಗುವುದಿಲ್ಲ.
- ತಾಜಾ ಕೊತ್ತಂಬರಿ ಸೊಪ್ಪಿನಿಂದ ಬೇರು ಹಾಗೂ ಹಳದಿ ಎಲೆಗಳನ್ನು ತೆಗೆದುಹಾಕಬೇಕು. ಆ ಬಳಿಕ ಒಂದು ಪಾತ್ರೆಯಲ್ಲಿ ನೀರು ಮತ್ತು ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ, ಈ ಸೊಪ್ಪನ್ನು 30 ನಿಮಿಷಗಳ ಕಾಲ ನೆನೆಸಿಡಬೇಕು. ಆ ಬಳಿಕ ನೀರು ಆರಲು ಬಿಟ್ಟು ಡಬ್ಬಿಯಲ್ಲಿ ಹಾಕಿ ಮುಚ್ಚಿಡಿ. ಆ ಡಬ್ಬವನ್ನು ಫ್ರಿಜ್ ನಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.
- ಕೊತ್ತಂಬರಿ ಸೊಪ್ಪಿನ ಬೇರನ್ನು ಕತ್ತರಿಸಿ ಪ್ರತ್ಯೇಕಿಸಿ, ಹಳದಿ ಎಲೆಗಳನ್ನು ತೆಗೆದುಹಾಕಬೇಕು. ಆ ಬಳಿಕ ಗಾಳಿಯಾಡದ ಬಿಗಿಯಾದ ಪಾತ್ರೆಯಲ್ಲಿ ಮುಚ್ಚಿ, ಫ್ರಿಜ್‌ನಲ್ಲಿ ಇರಿಸಿದರೆ ತಾಜಾವಾಗಿರುತ್ತದೆ.
- ಕೊತ್ತಂಬರಿಯನ್ನು ತಾಜಾವಾಗಿಡಲು, ಒಂದು ಗಾಜಿನ ಜಾರ್ ನಲ್ಲಿ ನೀರು ತುಂಬಿ, ಸೊಪ್ಪಿನ ಕಾಂಡವು ನೀರಿಗೆ ತಾಕುತ್ತಿರಲಿ. ಆ ನೀರಿಗೆ ಪಾಲಿಥಿನ್ ಅನ್ನು ಹಾಕಿದರೆ ಸೊಪ್ಪು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ