Kannada News Lifestyle Kitchen Hacks : How to warm your food winter season? Follow these simple tips Kannada News
ಚಳಿಗಾಲದಲ್ಲಿ ಆಹಾರವನ್ನು ದೀರ್ಘಕಾಲದವರೆಗೆ ಬೆಚ್ಚಗೆ ಇಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಚಳಿಗಾಲ ಆರಂಭವಾಗಿದ್ದು, ಈ ಶೀತ ವಾತಾವರಣದಲ್ಲಿ ಎಲ್ಲರೂ ಕೂಡ ಬಿಸಿ ಬಿಸಿಯಾದ ಆಹಾರವನ್ನು ತಿನ್ನಲು ಇಷ್ಟ ಪಡುತ್ತಾರೆ. ಆದರೆ ಅಡುಗೆ ಮಾಡಿ ಸ್ವಲ್ಪ ಹೊತ್ತು ಇಟ್ಟರೆ, ಆಹಾರ ಪದಾರ್ಥಗಳೆಲ್ಲವು ತಣ್ಣಗಾಗಿ ಬಿಡುತ್ತದೆ. ಈ ಋತುವಿನಲ್ಲಿ ಆಹಾರವನ್ನು ಹೆಚ್ಚು ಕಾಲ ಹೇಗೆ ಬೆಚ್ಚಗೆ ಇರಿಸಬೇಕು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಮಾಡಿಟ್ಟ ಅಡುಗೆಯೂ ತಣ್ಣಗಾದರೆ ಬಿಸಿ ಮಾಡಿ ಸೇವಿಸುವವರೇ ಹೆಚ್ಚು. ಹಾಗಾದ್ರೆ ಈ ತಂಪಾದ ಋತುವಿನಲ್ಲಿ ಆಹಾರವನ್ನು ದೀರ್ಘಕಾಲ ಬೆಚ್ಚಗೆ ಇಡುವುದು ಹೇಗೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಚಳಿಗಾಲವು ಎಷ್ಟು ಹಿತಕರವಾಗಿರುತ್ತದೆಯೋ, ಆರೋಗ್ಯಕ್ಕೆ ಅಷ್ಟೇ ಸವಾಲಾಗಿರುತ್ತದೆ. ಶೀತ ವಾತಾವರಣದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಗಳನ್ನು ಧರಿಸುತ್ತೇವೆ. ಅದೇ ರೀತಿ ಬೆಚ್ಚಗಿನ ಆಹಾರವನ್ನು ಸೇವಿಸುವುದು ಅಷ್ಟೇ ಮುಖ್ಯ. ಆದರೆ ಈ ಋತುವಿನಲ್ಲಿ ಅಡುಗೆ ಮಾಡಿ ಸ್ವಲ್ಪ ಹೊತ್ತು ಇಟ್ಟರೆ ತಣ್ಣಗಾಗಿ ಬಿಡುತ್ತದೆ. ಈ ತಣ್ಣನೆಯ ಆಹಾರವನ್ನು ತಿನ್ನಲು ಮನಸ್ಸಾಗುವುದಿಲ್ಲ. ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆಯದಲ್ಲ. ಇದು ಆಹಾರದಲ್ಲಿನ ಪೋಷಕಾಂಶಗಳನ್ನು ಸಹ ನಾಶಪಡಿಸುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ತಪ್ಪಿಸಲು ಸರಳ ಸಲಹೆಗಳನ್ನು ಅನುಸರಿಸಬಹುದು.
ಆಲ್ಯೂಮಿನಿಯಂ ಫಾಯಿಲ್ ಬಳಕೆ ಮಾಡಿ : ಆಹಾರವನ್ನು ಬೆಚ್ಚಗಿರಿಸಲು ಸಾಮಾನ್ಯವಾಗಿ ಆಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುತ್ತೇವೆ. ಚಪಾತಿ, ರೊಟ್ಟಿ ಅಥವಾ ಪರೋಟವನ್ನು ಮಾಡಿದ್ದರೆ ಕಾಗದದಲ್ಲಿ ಸುತ್ತಿಕೊಳ್ಳಿ. ಆ ಬಳಿಕ ಆ ಕಾಗದವನ್ನು ಈ ಆಲ್ಯೂಮಿನಿಯಂ ಫಾಯಿಲ್ ನಲ್ಲಿ ಸುತ್ತಿ ಸಂಗ್ರಹಿಸಿಡಿ. ಹೀಗೆ ಮಾಡುವುದರಿಂದ ಬೆಳಗ್ಗೆ ಬಿಸಿ ಮಾಡಿಟ್ಟ ಚಪಾತಿ, ರೊಟ್ಟಿಯಂತಹ ಆಹಾರವು ಮಧ್ಯಾಹ್ನದವರೆಗೂ ಬಿಸಿಯಾಗಿಯೇ ಇರುತ್ತದೆ.
ಕಂಚಿನ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸಿ : ಚಳಿಗಾಲದಲ್ಲಿ ಕಂಚು ಅಥವಾ ಹಿತ್ತಾಳೆಯ ಪಾತ್ರೆಗಳಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವುದು ಸೂಕ್ತ. ಹೀಗಾಗಿ ತರಕಾರಿಗಳು, ಬೇಳೆಕಾಳುಗಳು, ಅನ್ನ ಅಥವಾ ರೊಟ್ಟಿ ಇತ್ಯಾದಿ ಆಹಾರಗಳನ್ನು ಕಂಚು ಅಥವಾ ಹಿತ್ತಾಳೆಯ ಪಾತ್ರೆಗಳಲ್ಲಿ ಸಂಗ್ರಹಿಸಿಡಬಹುದು. ಇದು ಆಹಾರವನ್ನು ನೈಸರ್ಗಿಕವಾಗಿ ಬೆಚ್ಚಗಿರಿಸಿ, ರುಚಿಯನ್ನು ಹೆಚ್ಚಿಸುತ್ತದೆ. ಅದಲ್ಲದೇ, ಇದರಲ್ಲಿ ಆಹಾರವನ್ನು ಇಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನಬಹುದು.
ಥರ್ಮಲ್ ಬ್ಯಾಗ್ : ಆಹಾರ ಪದಾರ್ಥಗಳನ್ನು ಬೆಚ್ಚಗಿರಿಸಲು ಅತ್ಯುತ್ತಮ ಆಯ್ಕೆಯೇ ಈ ಥರ್ಮಲ್ ಬ್ಯಾಗ್. ಈ ಬ್ಯಾಗ್‌ಗಳನ್ನು ಥರ್ಮೋಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಈ ಬ್ಯಾಗ್ ನೊಳಗೆ ಮಾಡಿಟ್ಟ ಅಡುಗೆಯನ್ನು ಮುಚ್ಚಳ ಮುಚ್ಚಿ ಇಡಿ. ಇದು ಆಹಾರದ ಶಾಖವನ್ನು ಹೊರಗೆ ಹೋಗಲು ಬಿಡುವುದಿಲ್ಲ. ಇದರಿಂದ ಆಹಾರವು ದೀರ್ಘಕಾಲದವರೆಗೆ ಬಿಸಿಯಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ