National Cashew Day 2024 : ಬೇಕರಿ ಶೈಲಿಯಲ್ಲಿ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ , ಇಲ್ಲಿದೆ ರೆಸಿಪಿ

ಪ್ರತಿ ವರ್ಷ ನವೆಂಬರ್ 23 ರಂದು 'ರಾಷ್ಟ್ರೀಯ ಗೋಡಂಬಿ ದಿನ'ವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸುವ ಉದ್ದೇಶವು ಈ ಆರೋಗ್ಯಕರ ಒಣ ಹಣ್ಣನ್ನು ತಮ್ಮ ಆಹಾರದ ಭಾಗವಾಗಿಸಲು ಜನರನ್ನು ಪ್ರೋತ್ಸಾಹಿಸುವುದಾಗಿದೆ. ಹಾಗಾದ್ರೆ ಈ ದಿನದ ಆಚರಣೆಯೂ ಹುಟ್ಟಿಕೊಂಡದ್ದು ಯಾವಾಗ? ಏನಿದರ ವಿಶೇಷತೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

National Cashew Day 2024 : ಬೇಕರಿ ಶೈಲಿಯಲ್ಲಿ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ , ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2024 | 9:45 AM

ಗೋಡಂಬಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣದ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆಯೂ ಆರೋಗ್ಯ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ಗೋಡಂಬಿಯನ್ನು ತಿನ್ನುವುದರಿಂದ ಹಿಡಿದು ವಿವಿಧ ಬಗೆಯ ಖಾದ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತ್ವಚೆಯ ಹೊಳಪನ್ನು ಹೆಚ್ಚಿಸಲು ಇದು ತುಂಬಾ ಸಹಕಾರಿಯಾಗಿದೆ. ಇದೊಂದು ವಿದೇಶಿ ಒಣ ಹಣ್ಣಾಗಿದ್ದರೂ ಭಾರತದ ಮಣ್ಣು ಮತ್ತು ಹವಾಮಾನ ಹೆಚ್ಚು ಸೂಕ್ತವಾಗಿದೆ ಎನ್ನಬಹುದು. ಪ್ರತಿ ವರ್ಷ ನವೆಂಬರ್ 23 ರಂದು ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ರಾಷ್ಟ್ರೀಯ ಗೋಡಂಬಿ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ

ರಾಷ್ಟ್ರೀಯ ಗೋಡಂಬಿ ದಿನವನ್ನು ಮೊದಲ ಬಾರಿಗೆ 23 ನವೆಂಬರ್ 2015 ರಂದು ಆಚರಿಸಲಾಯಿತು. ಅದರ ನಂತರ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆರೋಗ್ಯಕರ ಒಣ ಹಣ್ಣಾಗಿರುವ ತಮ್ಮ ಆಹಾರದ ಭಾಗವಾಗಿಸಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ದಿನವು ಅತ್ಯಂತ ಮಹತ್ವದಾಯಕವಾಗಿದೆ. ಈ ವಿಶೇಷ ದಿನದಂದು ಗೇರು ಕೃಷಿಯನ್ನು ಉತ್ತೇಜಿಸಲು ಕಾರ್ಯಾಗಾರಗಳು ಸೇರಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾಜು ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳು

* ಗೋಡಂಬಿ – 1 ಕಪ್

* ಸಕ್ಕರೆ – 1/2 ಕಪ್

* ನೀರು – 1/2 ಕಪ್

* ತುಪ್ಪ – 1 ಚಮಚ

* ರೋಸ್ ವಾಟರ್ ಅಥವಾ ಕೇಸರಿ – 1 ಚಮಚ

ಇದನ್ನೂ ಓದಿ: ಚಳಿಗಾಲದಲ್ಲಿ ಆಹಾರವನ್ನು ದೀರ್ಘಕಾಲದವರೆಗೆ ಬೆಚ್ಚಗೆ ಇಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಕಾಜು ಬರ್ಫಿ ಮಾಡುವ ವಿಧಾನ

* ಮೊದಲಿಗೆ ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ. ಇದನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.

* ಒಂದು ಪ್ಯಾನ್‌ನಲ್ಲಿ ನೀರು ಮತ್ತು ಸಕ್ಕರೆ ಹಾಕಿ ಸಣ್ಣನೆಯ ಉರಿಯಲ್ಲಿ ಬಿಸಿ ಮಾಡಿ. ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿ ಹದ ಪಾಕ ಬರುವವರೆಗೂ ಕುದಿಸಿ.

* ಆ ಬಳಿಕ ಗೋಡಂಬಿ ಪುಡಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಸುಮಾರು 5-10 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಈ ಮಿಶ್ರಣವನ್ನು ಕೈಯಾಡಿಸುತ್ತ ಇರಿ.

* ಈ ಮಿಶ್ರಣವು ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಸ್ಟೌವ್‌ನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಇದಕ್ಕೆ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ ಚೆನ್ನಾಗಿ ನಾದಿಕೊಳ್ಳಿ.

* ನಂತರದಲ್ಲಿ ತುಪ್ಪ ಸವರಿದ ತಟ್ಟೆಗೆ ನಾದಿದ ಈ ಮಿಶ್ರಣವನ್ನು ಹಾಕಿ, ಲಟ್ಟಣಿಗೆಯ ಸಹಾಯದಿಂದ ತಟ್ಟೆಯ ತುಂಬಾ ಹರಡಿಕೊಳ್ಳಿ.

* ಕೊನೆಗೆ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಕಾಜು ಬರ್ಫಿ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ