ಸಾಂದರ್ಭಿಕ ಚಿತ್ರ
ಅಡುಗೆಗೆ ಬಳಸುವ ಸಾಮಾನ್ಯ ಬಳಸುವ ಮಸಾಲೆ ಪದಾರ್ಥಗಳಲ್ಲಿ ಮೆಣಸಿನ ಪುಡಿ ಕೂಡ ಒಂದು. ಮೆಣಸಿನ ಕಾಯಿ ಹಾಕಿದ್ರು ಖಾರ ಕಡಿಮೆ ಅಂತೇನಿಸಿದರೆ ಈ ಮೆಣಸಿನ ಪುಡಿಯನ್ನು ಬಳಸುತ್ತೇವೆ. ಕೆಂಪು ಮೆಣಸಿನ ಪುಡಿಯೂ ಸಾರಿಗೆ ಬಣ್ಣವನ್ನು ತಂದು ಕೊಡುತ್ತದೆ. ಈ ಮೆಣಸಿನ ಪುಡಿ ಹಾಕದೇ ಯಾವುದೇ ಸಾಂಬಾರ್, ರಸಂ ಮಾಡಲು ಆಗುವುದಿಲ್ಲ. ಆದರೆ ಈ ಮೆಣಸಿನ ಪುಡಿಯಲ್ಲಿ ಕಲಬೆರಕೆಯನ್ನು ಕಾಣಬಹುದಾಗಿದೆ. ನೀವು ಮಾರುಕಟ್ಟೆಯಲ್ಲಿ ಖರೀದಿ ಮಾಡಿ ತಂದ ಮೆಣಸಿನ ಪುಡಿಯನ್ನು ಮನೆಯಲ್ಲೇ ಸುಲಭವಾಗಿ ಈ ಕೆಲವು ಪರೀಕ್ಷೆಗಳನ್ನು ಮಾಡುವ ಮೂಲಕ ಅಸಲಿಯೇ ನಕಲಿಯೇ ಎಂದು ಕಂಡು ಹಿಡಿಯಬಹುದು.
- ಮೊದಲು ಒಂದು ಲೋಟಕ್ಕೆ ನೀರಿಗೆ ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ಹಾಕಿ. ಈಗ ಮೆಣಸಿನ ಪುಡಿಯನ್ನು ಚಮಚದಿಂದ ಬೆರೆಸಬೇಡಿ..ಈ ಮೆಣಸಿನಕಾಯಿಗಳು ನೀರಿನಲ್ಲಿ ಸ್ವಯಂಚಾಲಿತವಾಗಿ ಗಾಜಿನ ತಳಕ್ಕೆ ಹೋಗಲು ಬಿಡಿ. ಈ ನೆನೆಸಿಟ್ಟ ಮೆಣಸಿನ ಪುಡಿಯನ್ನು ಅಂಗೈಯಲ್ಲಿ ತೆಗೆದುಕೊಂಡು ಹಗುರವಾಗಿ ಉಜ್ಜಿಕೊಳ್ಳಿ. ಜಿಡ್ದು ಜಿಡ್ದಾಗಿದ್ದರೆ ಇಟ್ಟಿಗೆ ಪುಡಿ ಸೇರಿಸಿರುವುದು ಖಚಿತವಾಗುತ್ತದೆ.
- ನೆನೆಸಿದ ಮೆಣಸಿನ ಪುಡಿಯನ್ನು ಮುಟ್ಟಿದಾಗ ತುಂಬಾನೇ ನುಣುಪು ಅಥವಾ ನಯವಾಗಿದ್ದರೆ ಅದರಲ್ಲಿ ಸೋಪಿನ ಪುಡಿ ಸೇರಿಸಲಾಗಿದ್ದು, ಕಲಬೆರಕೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
- ಶುದ್ಧ ಕೆಂಪು ಮೆಣಸಿನ ಪುಡಿಯನ್ನು ಗುರುತಿಸಲು, ಅದನ್ನು ನೀರಿನೊಂದಿಗೆ ಬೆರೆಸಲು ಪ್ರಯತ್ನಿಸಿ. ಅಸಲಿ ಕೆಂಪು ಮೆಣಸಿನಕಾಯಿ ನೀರಿನ ಮೇಲೆ ತೇಲುತ್ತದೆ. ನೀರಿನಲ್ಲಿ ಮುಳುಗಿದರೆ ನಕಲಿ ಕೆಂಪು ಮೆಣಸಿನ ಪುಡಿ ಎಂದರ್ಥ.
- ಕೆಂಪು ಮೆಣಸಿನ ಪುಡಿಗೆ ಪಿಷ್ಟವನ್ನು ಕಲಬೆರಕೆ ಮಡಿರುತ್ತಾರೆ. ಇದನ್ನು ಪತ್ತೆ ಹಚ್ಚಲು ಮೆಣಸಿನ ಪುಡಿ ಮೇಲೆ ಕೆಲವು ಹನಿ ಟಿಂಚರ್ ಅಯೋಡಿನ್ ಅಥವಾ ಅಯೋಡಿನ್ ದ್ರಾವಣವನ್ನು ಹಾಕಿ. ಈ ಅಯೋಡಿನ್ ಹನಿಗಳನ್ನು ಸೇರಿಸಿದ ನಂತರದಲ್ಲಿ ಮೆಣಸಿನ ಪುಡಿ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ