ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ. ಸಾಮಾನ್ಯವಾಗಿ, ನೀವು ಅಡುಗೆಮನೆಯಲ್ಲಿ ಮಧ್ಯಮ ಕೋಣೆಯ ಉಷ್ಣಾಂಶದಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸುತ್ತೀರಿ. ಆದರೆ ಅನೇಕರಿಗೆ ತಿಳಿದಿರದ ವಿಷಯವೆಂದರೆ ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಕಾಲ ನಿಂಬೆಹಣ್ಣುಗಳನ್ನು ಇಡುವುದರಿಂದ ಅದು ಗಟ್ಟಿಯಾಗುತ್ತವೆ. ಇದನ್ನು ತಪ್ಪಿಸಲು, ನೀವು ಮನೆಯಲ್ಲಿಯೇ ಅನುಸರಿಸಬಹುದಾದ ಕೆಲವು ಸರಳ ಸಲಹೆಗಳು ಇಲ್ಲಿವೆ.
ನಿಂಬೆಹಣ್ಣನ್ನು ನೀರು ತುಂಬಿಸಿಟ್ಟ ಗಾಜಿನ ಜಾರ್ ಒಳಗಡೆ ಸಂಗ್ರಹಿಸಿಡಿ. ಇದು ದೀರ್ಘಕಾಲದ ವರೆಗೆ ತಾಜಾವಾಗಿರಿಸುತ್ತದೆ. ಎಲ್ಲಾ ನಿಂಬೆಹಣ್ಣುಗಳನ್ನು ನೀರಿನಿಂದ ತುಂಬಿದ ಜಾರ್ನಲ್ಲಿ ಇಟ್ಟು, ರೆಫ್ರಿಜರೇಟರ್ನಲ್ಲಿ ಇರಿಸಿ. ಇದು ತುಂಬಾ ದಿನಗಳವರೆಗೆ ತಾಜಾ ಮತ್ತು ರಸಭರಿತವಾಗಿರಿಸುತ್ತದೆ.
ಸೇಬು ಮತ್ತು ಬಾಳೆಹಣ್ಣಿನೊಂದಿಗೆ ಎಂದಿಗೂ ನಿಂಬೆಯನ್ನು ಸಂಗ್ರಹಿಸಿ ಇಡಬೇಡಿ. ಸೇಬು ಹಾಗೂ ಬಾಳೆಹಣ್ಣಿನಲ್ಲಿ ಎಥಿಲೀನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವುದರಿಂದ ಇದು ಆಮ್ಲೀಯ ಹಣ್ಣುಗಳು ಬೇಗ ಹಾಳಾಗಲು ಕಾರಣವಾಗುತ್ತದೆ.
ಇದನ್ನೂಓದಿ: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸ ನಿಮಗಿದೆಯೇ?
ನಿಂಬೆಹಣ್ಣುಗಳನ್ನು ಹಾಳಾಗದಂತೆ ಸಂಗ್ರಹಿಸಿಡಲು ಸೀಲ್ ಮಾಡಿದ ಅಥವಾ ಗಾಳಿಯಾಡದ ಚೀಲದೊಳಗೆ ಇರಿಸಿ. ಇದರಿಂದಾಗಿ ನಿಂಬೆಹಣ್ಣುಗಳು ರಸ ಮತ್ತು ಪರಿಮಳವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ನಿಂಬೆಹಣ್ಣನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ಗಾಳಿಯಾಡದ ಕಂಟೇನರ್‌ನಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲದ ವರೆಗೆ ನಿಂಬೆಹಣ್ಣನ್ನು ತಾಜಾವಾಗಿರಿಸುತ್ತದೆ.
ನಿಂಬೆಹಣ್ಣುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಸಂಗ್ರಹಿಸಿಡುವುದರಿಂದ ಅವುಗಳ ತಾಜಾತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಯೂಮಿನಿಯಂ ಫಾಯಿಲ್ ಬಳಸಿ ಪ್ರತಿಯೊಂದು ನಿಂಬೆಯನ್ನು ಪ್ರತ್ಯೇಕವಾಗಿ ಸುತ್ತಿಕೊಳ್ಳುವುದು ಉತ್ತಮ. ಇದು ನಿಂಬೆಹಣ್ಣಿನ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಒಣಗುವುದನ್ನು ಮತ್ತು ಗಟ್ಟಿಯಾಗುವುದನ್ನು ತಡೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:59 pm, Thu, 9 March 23