Kitchen Tips in Kannada : ರೆಫ್ರಿಜರೇಟರ್ ಇಲ್ಲದೆ ದೀರ್ಘಕಾಲದವರೆಗೆ ಆಹಾರವನ್ನು ಸಂಗ್ರಹಿಸಿಡುವುದ್ಹೇಗೆ? ಈ ಟಿಪ್ಸ್ ಪಾಲಿಸಿ

| Updated By: ನಯನಾ ರಾಜೀವ್

Updated on: May 13, 2024 | 3:22 PM

ಬೇಸಿಗೆಯಲ್ಲಿ ರಣ ರಣ ಬಿಸಿಲಿನ ನಡುವೆ ಕಾಡುವ ಆರೋಗ್ಯ ಸಮಸ್ಯೆ ಗಳು ನೂರಾರಾಗಿರುತ್ತದೆ. ಈ ಸಮಯದಲ್ಲಿ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿರುವ ನೀರಿನಾಂಶ ಹೆಚ್ಚಿರುವ ಆಹಾರ ಸೇವನೆಗಳ ಜೊತೆಗೆ ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿರುವುದು ಉತ್ತಮ. ಆದರೆ ಬೇಸಿಗೆ ಕಾಲದಲ್ಲಿ ತಯಾರಿಸಿದ ಆಹಾರವು ಬೇಗನೇ ಹಾಳಾಗುತ್ತದೆ. ದೀರ್ಘಕಾಲದವರೆಗೆ ಆಹಾರಗಳನ್ನು ಸಂಗ್ರಹಿಸಿಡುವುದು ಕಷ್ಟವಾಗುತ್ತದೆ. ಈ ಸಲಹೆಗಳನ್ನು ಅನುಸರಿಸಿದರೆ ಫ್ರಿಡ್ಜ್ ಯಿಲ್ಲದೇ ಆಹಾರ ಪದಾರ್ಥಗಳನ್ನು ಹಾಳಾಗದಂತೆ ಶೇಖರಿಸಿಡಬಹುದು.

Kitchen Tips in Kannada : ರೆಫ್ರಿಜರೇಟರ್ ಇಲ್ಲದೆ ದೀರ್ಘಕಾಲದವರೆಗೆ ಆಹಾರವನ್ನು ಸಂಗ್ರಹಿಸಿಡುವುದ್ಹೇಗೆ? ಈ ಟಿಪ್ಸ್ ಪಾಲಿಸಿ
ಆಹಾರ
Follow us on

ಬೇಸಿಗೆ ಕಾಲದಲ್ಲಿ ಆಹಾರ(Food) ಬೇಗ ಹಾಳಾಗುವ ಸಾಧ್ಯತೆಯೇ ಹೆಚ್ಚು. ಆಹಾರದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ತ್ವರಿತ ಬೆಳವಣಿಗೆಯಿಂದಾಗಿ, ಆಹಾರವು ಕೆಡುತ್ತದೆ. ಕೆಲವರು ಆಹಾರವು ಕೆಡದಂತೆ  ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಫ್ರಿ ಡ್ಜ್ ಯಿಲ್ಲದ್ದರೂ ಪವರ್ ಕಟ್ ಆಗಿದ್ದರೆ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದು ಕಷ್ಟ. ಮನೆಯಲ್ಲಿ ಫ್ರಿಡ್ಜ್ ಇಲ್ಲದವರು ಬೇರೆ ವಿಧಾನದ ಮೂಲಕ ಆಹಾರವು ಕೆಡದಂತೆ ಉಳಿಸಬಹುದು.

* ಅಡುಗೆ ಮಾಡುವಾಗ ಮಸಾಲೆಗಳ ಬಳಕೆ ಕಡಿಮೆಯಿರಲಿ : ಬೇಸಿಗೆಯಲ್ಲಿ ಹೆಚ್ಚು ಮಸಾಲೆಗಳನ್ನು ಬಳಸುವ ಭಕ್ಷ್ಯಗಳು ಬೇಗನೆ ಕೆಟ್ಟು ಹೋಗುತ್ತವೆ. ಹೀಗಾಗಿ ಈ ಕಾಲದಲ್ಲಿ ಕಡಿಮೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಟ್ಟುಕೊಳ್ಳಬಹುದು. ಈ ಆಹಾರವು ಬೇಗನೇ ಹಾಳಾಗುವುದಿಲ್ಲ.

* ಆಹಾರ ಪದಾರ್ಥಗಳಿಗೆ ಕಡಿಮೆ ಈರುಳ್ಳಿ ಮತ್ತು ಟೊಮೆಟೊಗಳನ್ನು ಬಳಸಿ : ಟೊಮ್ಯಾಟೊ ಮತ್ತು ಈರುಳ್ಳಿ ಇಲ್ಲದೆ ಅಡುಗೆ ಮಾಡುವುದು ಅಷ್ಟು ರುಚಿಯಾಗಿರುವುದಿಲ್ಲ. ಆದರೆ ನೀವು ಬೇಯಿಸಿದ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ ಇದರ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಒಂದು ವೇಳೆ ಈ ಈರುಳ್ಳಿ ಹಾಗೂ ಟೊಮೆಟೊ ಬೇಕು ಎನ್ನುವಂತಿದ್ದರೆ ಅಡುಗೆ ಮಾಡಿದ ಎರಡರಿಂದ ರಿಂದ ಮೂರು ಗಂಟೆಯೊಳಗೆ ಆಹಾರವನ್ನು ಸೇವಿಸುವುದು ಒಳ್ಳೆಯದು.

ಮತ್ತಷ್ಟು ಓದಿ: Health Tips: ನಿಂತು ನೀರು ಕುಡಿಯುವುದು ಆರೋಗ್ಯಕ್ಕೆ ಕೆಟ್ಟದ್ದಾ? ತಜ್ಞರು ಹೇಳುವುದೇನು?

* ಆಹಾರವನ್ನು ಪದೇ ಪದೇ ಬಿಸಿ ಮಾಡುವುದನ್ನು ತಪ್ಪಿಸಿ : ಕೆಲವರಿಗೆ ಬಿಸಿ ಬಿಸಿ ಆಹಾರವನ್ನು ತಿನ್ನುವ ಅಭ್ಯಾಸವಿರುತ್ತದೆ. ಹೀಗಾಗಿ ಆಹಾರವನ್ನು ತಿನ್ನುವ ಮೊದಲು ಬಿಸಿ ಮಾಡುತ್ತಾರೆ. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರ ರುಚಿಯು ಕಡಿಮೆಯಾಗುವುದಲ್ಲದೆ ಬೇಗನೇ ಹಾಳಾಗುತ್ತದೆ.

* ಆಹಾರ ಪದಾರ್ಥಗಳನ್ನು ಬೆರೆಸಬೇಡಿ : ಕೆಲವರಿಗೆ ವಿವಿಧ ರೀತಿಯ ಪದಾರ್ಥಗಳನ್ನು ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ಆಹಾರವು ಬೇಗನೇ ಕೆಡುವ ಸಾಧ್ಯತೆಯಿರುತ್ತದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ