Mental Health: ಮೆದುಳನ್ನು ಆರೋಗ್ಯ, ಕ್ರಿಯಾಶೀಲವಾಗಿಡಲು ಸಹಾಯ ಮಾಡುವ ಚಟುವಟಿಕೆಗಳು 

ವಯಸ್ಸಾದಂತೆ ಕಂಡುಬರುವ ಅಲ್ಝೈಮರ್ ಮತ್ತು ಇತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಾಧಿಸಬಾರದೆಂದರೆ ದೈಹಿಕ ಆರೋಗ್ಯದ ಜೊತೆಗೆ  ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡಾ ಮುಖ್ಯ. ನೀವು  ಕೆಲವೊಂದು ಮೆದುಳಿನ ಆರೋಗ್ಯಕ್ಕೆ ಪೂರಕವಾಗಿರುವ ಚಟುವಟಿಕೆಗಳನ್ನು ಮಾಡುವ ಮೂಲಕ ಮೆದುಳನ್ನು ಕ್ರೀಯಾಶಿಲ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳಬಹುದು.

Mental Health: ಮೆದುಳನ್ನು ಆರೋಗ್ಯ, ಕ್ರಿಯಾಶೀಲವಾಗಿಡಲು ಸಹಾಯ ಮಾಡುವ ಚಟುವಟಿಕೆಗಳು 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 03, 2023 | 6:12 PM

ಆರೋಗ್ಯಕರವಾಗಿರಲು ಹೆಚ್ಚಿನ ಜನರು ದೈಹಿಕವಾಗಿ ಸದೃಢವಾಗಿರುವತ್ತ ಗಮನಹರಿಸುತ್ತಾರೆ, ಆದರೆ ನೀವು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು  ಬಯಸಿದರೆ, ದೇಹದ ಜೊತೆಗೆ ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮನಸ್ಸು ಮತ್ತು ದೇಹದ ನಡುವೆ ಬಹಳ ಆಳವಾದ ಸಂಬಂಧವಿದೆ. ಆದ್ದರಿಂದ ಮೆದುಳನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿರಿಸುವುದು ಬಹಳ ಮುಖ್ಯ. ಕೆಲವೊಂದು ಮೆದುಳಿಗೆ ವ್ಯಾಯಾಮ ನೀಡುವಂತಹ ಚಟುವಟಿಕೆಗಳನ್ನು ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು,  ಮೆದುಳನ್ನು ಚುರುಕಾಗಿಸಬಹುದು. ಜೊತೆಗೆ ಈ ಅಭ್ಯಾಸದಿಂದ ವಯಸ್ಸಾದಂತೆ ಕಂಡುಬರುವ ಅಲ್ಝೈಮರ್ ಮತ್ತು ಇತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಾರದಂತೆ ತಡೆಯಬಹುದು. ಹಾಗಿದ್ದರೆ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾದಂತಹ ಚಟುವಟಿಕೆಗಳು ಯಾವುದೆಂಬುದನ್ನು ನೋಡೋಣ.

ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಈ ಚಟುವಟಿಕೆಗಳು:

ಯೋಗ ಮತ್ತು ಧ್ಯಾನ: ನೀವು ಸಣ್ಣಪುಟ್ಟ ವಿಷಯಗಳ ಮೇಲೆ ಅಸಮಧಾನಗೊಂಡರೆ ಮತ್ತು ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದಿದ್ದರೆ, ಈ ಪರಿಸ್ಥಿತಿಯನ್ನು ಎದುರಿಸಲು ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಧ್ಯಾನ ಮಾಡುವುದು. ಮುಂಜಾನೆ ಸ್ವಲ್ಪ ಬೇಗ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.  ಇದರಿಂದ ನೀವು ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಈ ಅಭ್ಯಾಸಗಳು ಮನಸಿನ ಒತ್ತಡವನ್ನು ತೊಡೆದುಹಾಕುತ್ತದೆ. ಮಾನಸಿಕವಾಗಿ ಸದೃಢವಾಗಿರುವುದರ ಮೂಲಕ ಅಲ್ಝೈಮರ್ ಕಾಯಿಲೆಯಂತಹ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಚೆಸ್, ಸುಡೋಕು ಮುಂತಾದ ಆಟಗಳನ್ನು ಆಡುವುದು: ನಿಮ್ಮ ಮೆದುಳಿಗೆ ವ್ಯಾಯಾಮ ಮಾಡಲು, ಚೆಸ್, ಸುಡೋಕು ಮುಂತಾದ ಮೆದುಳಿನ ಚುರುಕುತನಕ್ಕೆ ಸವಾಲೊಡ್ಡುವ ಆಟಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ. ಮೆದುಳು ಆರೋಗ್ಯಕರವಾಗಿರಬೇಕೆಂದರೆ ಅದನ್ನು ಸಕ್ರಿಯವಾಗಿರಿಸುವುದು ಬಹಳ ಮುಖ್ಯ. ಹಾಗಾಗಿ ಮೆದುಳನ್ನು ಸಕ್ರಿಯವಾಗಿರಿಸಲು ಚೆಸ್, ಸುಡೋಕು ಮುಂತಾದ ಆಟಗಳನ್ನು ಆಡುತ್ತಾ ಮೆದುಳಿಗೆ ವ್ಯಾಯಾಮ ನೀಡಬೇಕು. ಇದರಿಂದಾಗಿ  ಮೆದುಳು ಆರೋಗ್ಯಕರವಾಗಿರುತ್ತದೆ ಮತ್ತು ಇದು ಅನೇಕ ರೋಗಗಳ ಅಪಾಯವನ್ನು ಕಡೆಮೆ ಮಾಡುತ್ತದೆ. ಅಲ್ಲದೆ ಇಂತಹ ಆಟಗಳು ಮಕ್ಕಳ ಕಲಿಕೆಯ ಏಕಾಗ್ರತೆಯನ್ನು ಕೂಡಾ ಹೆಚ್ಚಿಸುತ್ತದೆ.

ಇದನ್ನೂ ಓದಿ: ಮಾನಸಿಕ ಆರೋಗ್ಯ ಸಮಸ್ಯೆಯ ಚಿಕಿತ್ಸೆಗಾಗಿ ಮ್ಯಾಜಿಕ್ ಮಶ್ರೂಮ್…!

ನೃತ್ಯ: ನೃತ್ಯವು ಕೇವಲ ದೈಹಿಕ ಚಟುವಟಿಕೆ ಮಾತ್ರವಲ್ಲ, ಇದು ಮಾನಸಿಕವಾಗಿ ಸದೃಢವಾಗಿರಲು ಸಹ ಸಹಾಯ ಮಾಡುತ್ತದೆ.  ನೀವು ದುಃಖಿತರಾದಾಗ,  ಸ್ವಲ್ಪ ಸಮಯದವರೆಗೆ ನಿಮ್ಮ ನೆಚ್ಚಿನ ಹಾಡಿಗೆ ನೃತ್ಯ ಮಾಡಿ. ಇದರಿಂದ ಉದ್ವೇಗ ಮತ್ತು ಖಿನ್ನತೆಯು ಸಂಪೂರ್ಣವಾಗಿ ಮಾಯವಾಗುತ್ತದೆ. ಅಲ್ಲದೆ ನೃತ್ಯ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡಲು ಕೂಡಾ ಸಹಾಯ ಮಾಡುತ್ತದೆ.

ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ: ಹೊಸ ಹೊಸ ವಿಷಯಗಳನ್ನು ಕಲಿಯುವುದು ಮನಸ್ಸನ್ನು ಆರೋಗ್ಯಕರವಾಗಿಡಲು ಮತ್ತು ಸಂತೋಷವಾಗಿಡಲು ತುಂಬಾ ಪ್ರಯೋಜನಕಾರಿಯಾಗಿದೆ.  ಸಂಗೀತವಾದ್ಯ, ಚಿತ್ರಕಲೆ, ಪುಸ್ತಕ ಓದುವುದು, ತೋಟಗಾರಿಕೆ,  ಅಥವಾ ಹೊಸ ಭಾಷೆಗಳನ್ನು ಕಲಿಯುವುದು ಈ ರೀತಿಯ ಯಾವುದೇ ವಿಷಯಗಳನ್ನು ಕಲಿಯುವುದರಿಂದ ಮಾನಸಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಅಲ್ಲದೆ  ವಿವಿಧ ಭಾಷೆಗಳನ್ನು ಕಲಿಯುವುದರಿಂದ ಮನಸ್ಸು ಚುರುಕಾಗುತ್ತದೆ ಮತ್ತು ನಿಮಗೆ ಅದು ಆತ್ಮವಿಶ್ವಾಸವನ್ನು ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:11 pm, Tue, 3 October 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್