Weight Loss: ತೂಕ ನಷ್ಟಕ್ಕೆ ಮನೆಯಲ್ಲಿಯೇ ಈ ಸಿಂಪಲ್​​ ವ್ಯಾಯಾಮ ಪ್ರಯತ್ನಿಸಿ

ಇಲ್ಲಿ ಸೂಚಿಸಲಾದ ಕೆಲವೊಂದು ವ್ಯಾಯಾಮಗಳನ್ನು ಪ್ರಯತ್ನಿಸಿ. ಇದು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುವುದು ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ.

Weight Loss: ತೂಕ ನಷ್ಟಕ್ಕೆ ಮನೆಯಲ್ಲಿಯೇ ಈ ಸಿಂಪಲ್​​ ವ್ಯಾಯಾಮ ಪ್ರಯತ್ನಿಸಿ
Home Workouts Image Credit source: PharmEasy
Follow us
ಅಕ್ಷತಾ ವರ್ಕಾಡಿ
|

Updated on: Jul 30, 2023 | 6:33 AM

ನೀವು ತೂಕ ಕಳೆದುಕೊಳ್ಳಲು(Weight Loss) ಬಯಸಿದರೆ ಯಾವುದೇ ಜಿಮ್​​ಗೆ ಹೋಗುವ ಬದಲಾಗಿ ವಾರಾಂತ್ಯದಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಇಲ್ಲಿ ಸೂಚಿಸಲಾದ ಕೆಲವೊಂದು ವ್ಯಾಯಾಮಗಳನ್ನು ಪ್ರಯತ್ನಿಸಿ. ಇದು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುವುದು ಮಾತ್ರವಲ್ಲದೇ, ಮಾನಸಿಕ ಆರೋಗ್ಯ(Mental Health) ಕ್ಕೂ ಕೊಡುಗೆ ನೀಡುತ್ತದೆ. ನಿಮ್ಮ ಮನೆ ಕೆಲಸಗಳಿಂದ ನೀವು ತೂಕ ಕಳೆದುಕೊಳ್ಳಲು ಸಾಧ್ಯವಿದೆ. ಜೊತೆಗೆ ಇದು ನಿಮ್ಮ ಮಕ್ಕಳೊಂದಿಗೆ ಕೂಡಿ ಮಾಡಬಹುದು.

ತೂಕ ನಷ್ಟಕ್ಕೆ ಮನೆಯಲ್ಲಿಯೇ ಮಾಡಬಹುದಾದ ಸಿಂಪಲ್​​ ವ್ಯಾಯಾಮಗಳು:

ಸ್ಕಿಪ್ಪಿಂಗ್:

ಸ್ಕಿಪ್ಪಿಂಗ್ ಒಟ್ಟಾರೆ ದೇಹದ ಕೊಬ್ಬನ್ನು ಸುಡಲು ಉತ್ತಮ ಮಾರ್ಗವಾಗಿದೆ. ನಿಮಗೆ ಬೇಕಾಗಿರುವುದು ಹಗ್ಗ ಮಾತ್ರ, ಮತ್ತು ಈ ವ್ಯಾಯಾಮವು ಹೊಟ್ಟೆಯ ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿಯಾಗಿರುತ್ತದೆ. ಬಿಡುವಿನ ಸಮಯದಲ್ಲಿ ಅಥವಾ ವಾರಾಂತ್ಯದಲ್ಲಿ ಪ್ರಯತ್ನಿಸಿ ನೋಡಿ. ಉತ್ತಮ ಫಲಿತಾಂಶವನ್ನು ಪಡೆಯಬಹುದು.

ನೆಲವನ್ನು ಒರೆಸುವುದು:

ವಾರಾಂತ್ಯದಲ್ಲಿ, ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ತೆಗೆದುಕೊಳ್ಳಿ. ನೆಲ ಗುಡಿಸುವುದು, ಸಾಧ್ಯವಾದರೆ ಇಡೀ ಮನೆಯನ್ನು ಒರೆಸಿ. ಇದು ಕಾಲುಗಳ ಮೇಲಿನ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಲು ಸಹ ನಿಮಗೆ ಸಹಾಯ ಮಾಡುತ್ತದೆ. ನೀವು ಹೆಚ್ಚು ಬೆವರುವುದರಿಂದ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅತಿ ಹೆಚ್ಚು ಅರೋಗ್ಯ ಪ್ರಯೋಜನಗಳನ್ನು ಪಡೆಯಲು ಈ ಸಮಯದಲ್ಲಿ ವ್ಯಾಯಾಮ ಮಾಡಿ

ಜಂಪಿಂಗ್ :

ಈ ವಾರಾಂತ್ಯದಲ್ಲಿ, ಜಿಮ್‌ಗಳನ್ನು ಮುಚ್ಚಿದಾಗ ಮತ್ತು ಹೊರಗೆ ಮಳೆ ಬರುತ್ತಿರುವಾಗ, ಮನೆಯಲ್ಲಿ ಕೆಲವು ಜಂಪಿಂಗ್ ಜ್ಯಾಕ್‌ಗಳನ್ನು ಪ್ರಯತ್ನಿಸಿ. ಇದು ಹೆಚ್ಚುವರಿ ಕೊಬ್ಬನ್ನು ಬೆವರಿನ ಮೂಲಕ ಇಳಿಸುತ್ತದೆ.

ಮೆಟ್ಟಿಲುಗಳನ್ನು ಹತ್ತುವುದು:

ಮೆಟ್ಟಿಲುಗಳನ್ನು ಹತ್ತುವುದು ಮತ್ತು ಇಳಿಯುವ ಅಭ್ಯಾಸ ದೇಹದ ಕೆಳಭಾಗದ ಸ್ನಾಯುಗಳಿಗೆ ಸವಾಲು ಹಾಕಲು ಮತ್ತೊಂದು ಅತ್ಯುತ್ತಮ ಮಾರ್ಗವಾಗಿದೆ. ಈ ಕಾರ್ಡಿಯೋ ವ್ಯಾಯಾಮವು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ಸಮಯದಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: