ಈ ಆಹಾರ ಪದಾರ್ಥಗಳಿಗೂ ಬಳಸಲಾಗುತ್ತೆ ಪ್ರಾಣಿಗಳ ಕೊಬ್ಬು, ಸೇವಿಸುವ ಮುನ್ನ ಇರಲಿ ಎಚ್ಚರ

ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿದೆ ಎಂಬ ಹೇಳಿಕೆಯು ಆಂಧ್ರಪ್ರದೇಶ ಮಾತ್ರವಲ್ಲದೇ, ದೇಶದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ದಿನನಿತ್ಯ ಸೇವಿಸುವ ಈ ಆಹಾರಗಳಲ್ಲಿಯು ಪ್ರಾಣಿ ಕೊಬ್ಬು ಸೇರಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹಂದಿ ಕೊಬ್ಬು ಅಥವಾ ಟ್ಯಾಲೋ ಎಂದು ಕರೆಯಲ್ಪಡುವ ಪ್ರಾಣಿಗಳ ಕೊಬ್ಬನ್ನು ಕೆಲವು ಆಹಾರಗಳಿಗೆ ಮತ್ತು ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ನೀವೇನಾದ್ರೂ ಸಸ್ಯಾಹಾರಿಗಳಾಗಿದ್ದರೆ ಯಾವೆಲ್ಲಾ ಆಹಾರ ಪದಾರ್ಥಗಳಿಗೆ ಸೇರಿಸಲಾಗುತ್ತದೆ ತಿಳಿದು ಕೊಳ್ಳುವುದು ಮುಖ್ಯ.

ಈ ಆಹಾರ ಪದಾರ್ಥಗಳಿಗೂ ಬಳಸಲಾಗುತ್ತೆ ಪ್ರಾಣಿಗಳ ಕೊಬ್ಬು, ಸೇವಿಸುವ ಮುನ್ನ ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 24, 2024 | 10:47 AM

ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ತಾವು ಏನು ತಿನ್ನುತ್ತೇವೆ, ಈ ಆಹಾರವು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎನ್ನುವ ಬಗ್ಗೆ ಯೋಚಿಸಲು ಸಮಯವಿಲ್ಲ. ಹೀಗಿರುವಾಗಲೇ ತಿರುಪತಿಯ ಲಡ್ದುವಿನಲ್ಲಿ ಪ್ರಾಣಿ ಕೊಬ್ಬು ಇದೆ ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿದೆ. ಆದರೆ ಪ್ರಾಣಿಗಳ ಕೊಬ್ಬನ್ನು ವಿವಿಧ ಆಹಾರಗಳು ಮತ್ತು ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ಹೀಗಾಗಿ ಈ ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕೆಲವು ಸಾಮಾನ್ಯ ಉತ್ಪನ್ನಗಳ ಬಗೆಗೆ ನಿಮಗೆ ತಿಳಿದಿದ್ದರೆ ಉತ್ತಮ.

ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗುವ ಆಹಾರ ಪದಾರ್ಥಗಳು:

  • ಮಾರ್ಗರೀನ್: ಕೆಲವು ವಿವಿಧ ಮಾರ್ಗರೀನ್ ಪ್ರಾಣಿಗಳ ಕೊಬ್ಬನ್ನು ಹೊಂದಿರುತ್ತದೆ. ಇವುಗಳನ್ನು ‘ಸುವಾಸನೆ’ ಅಥವಾ ‘ನೈಸರ್ಗಿಕ ಕೊಬ್ಬು’ಎನ್ನಲಾಗುತ್ತದೆ.
  • ಬಿಸ್ಕತ್ತುಗಳು ಮತ್ತು ಕುಕೀಗಳು: ನಾವು ಸೇವಿಸುವ ಬಿಸ್ಕತ್ತುಗಳು ಮತ್ತು ಕುಕೀಗಳು ಪ್ರಾಣಿಗಳ ಕೊಬ್ಬನ್ನು ಒಳಗೊಂಡಿರುತ್ತವೆ. ಹೀಗಾಗಿ ನೀವು ಬೆಣ್ಣೆ ರುಚಿಯ ಬಿಸ್ಕತ್ತುಗಳು ಮತ್ತು ಕುಕೀಗಳನ್ನು ಸೇವಿಸುತ್ತಿದ್ದರೆ ಹೆಚ್ಚು ಜಾಗರೂಕರಾಗಿರುವುದು ಉತ್ತಮ.
  • ಪ್ಯಾಟೀಸ್ ಮತ್ತು ಸಾಸೇಜ್‌ಗಳು: ಸಾಸೇಜ್‌ಗಳು, ಪ್ಯಾಟೀಸ್ ಮತ್ತು ಮಾಂಸದ ಚೆಂಡುಗಳಂತಹ ಮಾಂಸ ಆಧಾರಿತ ಉತ್ಪನ್ನಗಳಲ್ಲಿ ಈ ಪ್ರಾಣಿಗಳ ಕೊಬ್ಬು ಇರುತ್ತದೆ.
  • ತ್ವರಿತ ಆಹಾರ: ಪ್ರಾಣಿಗಳ ಕೊಬ್ಬನ್ನು ಫ್ರೆಂಚ್ ಫ್ರೈಸ್ ಮತ್ತು ಬರ್ಗರ್‌ಗಳಂತಹ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.
  • ಸೂಪ್‌ಗಳು ಮತ್ತು ಸ್ಟಾಕ್‌ಗಳು: ಪ್ರಾಣಿಗಳ ಕೊಬ್ಬನ್ನು ಕೆಲವು ಸೂಪ್‌ಗಳು ಮತ್ತು ಸ್ಟಾಕ್‌ ಗಳಂತಹ ಪದಾರ್ಥಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.
  • ಚೀಸ್ ಮತ್ತು ಡೈರಿ ಉತ್ಪನ್ನಗಳು: ಪ್ರಾಣಿಗಳ ಕೊಬ್ಬನ್ನು ಕೆಲವು ಸಂಸ್ಕರಿಸಿದ ಚೀಸ್‌ನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ
  • ಚಾಕೊಲೇಟ್ ಹಾಗೂ ಘನೀಕೃತ ಆಹಾರಗಳು: ಕೆಲವು ಚಾಕೊಲೇಟ್ ರುಚಿ ಹಾಗೂ ವಿನ್ಯಾಸವನ್ನು ಒದಗಿಸಲು ಪ್ರಾಣಿಗಳ ಕೊಬ್ಬನ್ನು ಸೇರಿಸಬಹುದು. ಅದಲ್ಲದೇ ಸಿದ್ಧಪಡಿಸಿದ ಹೆಪ್ಪುಗಟ್ಟಿದ ಆಹಾರಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಹೆಚ್ಚು ಬಳಸಲಾಗುತ್ತದೆ.

(ಕೆಲವೊಂದು ವರದಿಗಳು ಈ ಬಗ್ಗೆ ಹೇಳುತ್ತಾದೆ. ಇದು ಟಿವಿ9 ಕನ್ನಡದ ಅಧಿಕೃತ ಮಾಹಿತಿ ಅಲ್ಲ)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Tue, 24 September 24

Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್