ಸೋಂಪಿನ ಕಾಳುಗಳಲ್ಲಿದೆ ಆರೋಗ್ಯದ ಗುಟ್ಟು: ಇಲ್ಲಿದೆ ಉಪಯುಕ್ತ ಮಾಹಿತಿ

ಪಿತ್ತವನ್ನು ನಿಯಂತ್ರಿಸಿ, ಹೊಟ್ಟೆಯಲ್ಲಿ ಉಂಟಾಗುವ ಬಿಸಿ ಅನುಭವವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನ ಊಟದ ನಂತರ ಸೋಂಪಿನ ಕಾಳಿನ ಸೇವನೆ ಒಳ್ಳೆಯದು. 

ಸೋಂಪಿನ ಕಾಳುಗಳಲ್ಲಿದೆ ಆರೋಗ್ಯದ ಗುಟ್ಟು: ಇಲ್ಲಿದೆ ಉಪಯುಕ್ತ ಮಾಹಿತಿ
ಸೋಂಪಿನ ಕಾಳು(ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 02, 2022 | 5:32 PM

ಭಾರತೀಯ ಆರೋಗ್ಯ ಪದ್ದತಿಯಲ್ಲಿ ಮಸಾಲೆಗಳು ಕೇವಲ ಆಹಾರ ತಯಾರಿಕೆಗೆ ಮಾತ್ರವಲ್ಲದೆ ಔಷಧೀಯ ಪದಾರ್ಥಗಳಾಗಿಯೂ ಬಳಸಲಾಗುತ್ತದೆ. ದೇಹದ ಯಾವುದೇ ಸಮಸ್ಯೆಗಳಿಗೆ ಮನೆಮದ್ದಾಗಿ ಮೊದಲು ಸಾಂಬಾರು ಪದಾರ್ಥಗಳನ್ನು ಔಷಧ ರೂಪದಲ್ಲಿ ಬಳಸಲಾಗುತ್ತದೆ. ಪ್ರತಿನಿತ್ಯ ಬಳಸುವ ಮಸಾಲೆ ಪದಾರ್ಥಗಳು ದೇಹಕ್ಕೆ ಸಾಕಷ್ಟು ಪ್ರಮಾಣದ ಉಪಯೋಗಗಳನ್ನು ನೀಡುತ್ತದೆ. ಅವುಗಳಲ್ಲಿ ಮುಖ್ಯವಾದುದೆಂದರೆ ಸೋಂಪಿನ ಕಾಳು (Fennel seeds). ಸೋಂಪಿನ ಕಾಳು ನೈಸರ್ಗಿಕ ಮೌತ್​ ವಾಶ್(Mouth Wash)​ ರೀತಿ ಕೆಲಸ ಮಾಡಿ, ಬಾಯಿಯಲ್ಲಿನ ವಾಸನೆಯನ್ನು ಕಡಿಮೆ ಮಾಡುತ್ತದೆ. ಅನಾದಿ ಕಾಲದಿಂದಲೂ ಸೋಂಪಿನ ಕಾಳುಗಳು ಬಳಕೆಯಲ್ಲಿದೆ. ಆಧುನಿಕ ಶೈಲಿಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಸೋಂಪಿನ ಕಾಳು ಪ್ರಮುಖ ಪಾತ್ರ ವಹಿಸುತ್ತದೆ. ಜೀರ್ಣ ಶಕ್ತಿಯನ್ನು ಉತ್ತಮಗೊಳಸಿಕೊಳ್ಳಲು ಕೂಡ ಸೋಂಪಿನ ಕಾಳುಗಳು ಸಹಾಯಕವಾಗಿದೆ. ಸೋಂಪಿನ ಕಾಳುಗಳ ಉಪಯೋಗದ ಕುರಿತು,  ಆಯುರ್ವೇದ ತಜ್ಞೆ ಡಾ ದೀಕ್ಷಾ ಭಾವಸರ್ ಮಾಹಿತಿ ನೀಡಿದ್ದಾರೆ.

  1. ಸೋಂಪಿನ ಕಾಳಿನಲ್ಲಿ ಸಮೃದ್ಧವಾದ ವಿಟಮಿನ್​ ಸಿ, ವಿಟಮಿನ್​, ಕಬ್ಬಿಣಾಂಶ, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಅಂಶಗಳು ಅಡಗಿದ್ದು, ಸ್ತನ ಕ್ಯಾನ್ಸರ್​ ಅನ್ನು ನಿಯಂತ್ರಿಸಲು ಸಹಾಯಕವಾಗಿದೆ. ಜತೆಗೆ ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಹಾಲು ಉತ್ಪಾದನೆ ಮಾಡಲು ನೆರವಾಗುತ್ತದೆ.
  2. ಸಾಮಾನ್ಯವಾಗಿ ಮಸಾಲೆ ಪದಾರ್ಥಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದರೆ ಸೋಂಪಿನ ಕಾಳುಗಳು ದೇಹವನ್ನು ತಂಪಾಗಿರಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.  ದೇಹದ ಅತಿಯಾದ ತೂಕ ಇಳಿಕೆಗೂ ಸೋಂಪಿನ ಕಾಳು ಸಹಾಯಕವಾಗಿದೆ. 
  3. ಪಿತ್ತವನ್ನು ನಿಯಂತ್ರಿಸಿ, ಹೊಟ್ಟೆಯಲ್ಲಿ ಉಂಟಾಗುವ ಬಿಸಿ ಅನುಭವವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನ ಊಟದ ನಂತರ ಸೋಂಪಿನ ಕಾಳಿನ ಸೇವನೆ ಒಳ್ಳೆಯದು
  4. ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ವಾತ, ಕಫವನ್ನೂ ಕೂಡ ನಿಯಂತ್ರಿಸುವಲ್ಲಿ ಸೋಂಪಿನ ಕಾಳುಗಳು ಮಹತ್ವದ ಪಾತ್ರವಹಿಸುತ್ತವೆ. ಹೀಗಾಗಿ ಆಸಿಡಿಟಿ ಅಥವಾ ಅಜೀರ್ಣದ ಸಮಸ್ಯೆ ಇದ್ದವರು ಸೋಂಪಿನ ಕಾಳುಗಳನ್ನು ಸೇವಿಸಿ.
  5. ಸೋಂಪಿನ ಕಾಳುಗಳು ದೀರ್ಘಕಾಲದ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆಇದರೊಂದಿಗೆ ಮುಖ್ಯವಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
  6. ಹೆಣ್ಣು ಮಕ್ಕಳ ಮಾಸಿಕ ದಿನಗಳ ಕಾಣಿಸಿಕೊಳ್ಳುವ ಹೊಟ್ಟೆ ನೋವನ್ನು ಸೋಂಪಿನ ಕಾಳುಗಳು ಕಡಿಮೆ ಮಾಡುತ್ತದೆ. ಹೀಗಾಗಿ ಮುಟ್ಟಿನ ದಿನಗಳಲ್ಲಿ ಊಟದ ಬಳಿಕ ಸೋಂಪಿನ ಕಾಳುಗಳ ಸೇವನೆ ಅಭ್ಯಸಿಸಿಕೊಳ್ಳಿ.
  7. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮೂಡ್​ ಅನ್ನು ರಿಪ್ರೆಶ್​ ಮಾಡಿ, ಕಣ್ಣುಗಳಲ್ಲಿ ಹುರುಪನ್ನು ತುಂಬಲು ಸೋಂಪಿನ ಕಾಳುಗಳು ನೆರವಾಗುತ್ತದೆ ಎನ್ನುತ್ತಾರೆ ಡಾ. ದೀಕ್ಷಾ ಭಾವಸರ್.

ಇದನ್ನೂ ಓದಿ: Summer Skin Care Routine: ಬೇಸಿಗೆಯಲ್ಲಿ ತ್ವಚೆಯ ಆರೈಕೆ ಹೀಗಿರಲಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್