AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸಂಗಾತಿಯ ಜೊತೆ ಗಾಢವಾದ ಸಂಬಂಧ ಬೆಳೆಸಿಕೊಳ್ಳಲು 6 ಮಾರ್ಗಗಳು ಇಲ್ಲಿವೆ

ನಿಮ್ಮಿಬ್ಬರ ನಡುವೆ ಯಾವುದಾದರೂ ವಿಷಯಕ್ಕೆ ಪದೇಪದೆ ಜಗಳವಾಗುತ್ತಿದ್ದರೆ ಅದರಿಂದ ಮುಕ್ತಿ ಪಡೆಯಲು ಪ್ರಯತ್ನಿಸಿ. ಮಾತಾಡಿ ಬಗೆಹರಿಸಿಕೊಳ್ಳಬಹುದಾದ ವಿಷಯಗಳನ್ನು ಎಳೆದು ದೊಡ್ಡದಾಗಿ ಮಾಡಿಕೊಳ್ಳಬೇಡಿ.

ನಿಮ್ಮ ಸಂಗಾತಿಯ ಜೊತೆ ಗಾಢವಾದ ಸಂಬಂಧ ಬೆಳೆಸಿಕೊಳ್ಳಲು 6 ಮಾರ್ಗಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Mar 02, 2022 | 4:47 PM

Share

ನಿಮ್ಮ ಸಂಗಾತಿಯ ಜೊತೆ ನೀವು ಎಷ್ಟು ಆತ್ಮೀಯವಾಗಿರುತ್ತೀರಿ ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಣ್ಣಪುಟ್ಟ ಮನಸ್ತಾಪಗಳಿಂದ ಇಬ್ಬರ ನಡುವೆ ಬಹುದೊಡ್ಡ ಅಂತರ ಸೃಷ್ಟಿಯಾಗುತ್ತದೆ. ಇದು ನಿಮ್ಮ ಪ್ರೀತಿ ಮತ್ತು ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ದಿನದಿಂದ ದಿನಕ್ಕೆ ನಿಮ್ಮ ಪ್ರೀತಿಪಾತ್ರರೊಂದಿಗಿನ ವಿಶೇಷ ಸಂಪರ್ಕವನ್ನು ಮುಂದುವರೆಸಿಕೊಂಡು ಹೋಗುವುದು ಸುಲಭದ ಮಾತೇನಲ್ಲ. ನೀವು ಇತ್ತೀಚೆಗೆ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯದಿದ್ದರೆ, ನೀವು ಭಾವನಾತ್ಮಕವಾಗಿ ದೂರವಾಗುತ್ತಿರುವಿರಿ ಎಂದರ್ಥ.

ನಿಮ್ಮ ಸಂಗಾತಿಯ ಜೊತೆ ಗಾಢವಾದ ಸಂಬಂಧವನ್ನು ನಿರ್ಮಿಸಿಕೊಳ್ಳಲು ಹಲವು ಮಾರ್ಗಗಳಿವೆ. ಒಟ್ಟಿಗೇ ಇಬ್ಬರ  ಹವ್ಯಾಸವನ್ನು ಅನುಸರಿಸಿ. ಹಾಗೇ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರತಿದಿನ ಸಮಯ ತೆಗೆದುಕೊಳ್ಳಿ. ನಿಮ್ಮಿಬ್ಬರ ನಡುವೆ ಯಾವುದಾದರೂ ವಿಷಯಕ್ಕೆ ಪದೇಪದೆ ಜಗಳವಾಗುತ್ತಿದ್ದರೆ ಅದರಿಂದ ಮುಕ್ತಿ ಪಡೆಯಲು ಪ್ರಯತ್ನಿಸಿ. ಮಾತಾಡಿ ಬಗೆಹರಿಸಿಕೊಳ್ಳಬಹುದಾದ ವಿಷಯಗಳನ್ನು ಎಳೆದು ದೊಡ್ಡದಾಗಿ ಮಾಡಿಕೊಳ್ಳಬೇಡಿ.

ಮಿಲೇನಿಯಲ್ ಥೆರಪಿಸ್ಟ್ ಎಂದು ಜನಪ್ರಿಯವಾಗಿರುವ ಮನಶ್ಶಾಸ್ತ್ರಜ್ಞ ಸಾರಾ ಕುಬುರಿಕ್ ತನ್ನ ಇತ್ತೀಚಿನ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಈ ಕುರಿತು ನೀಡಲಾಗುವ ಸಲಹೆಗಳ ಬಗ್ಗೆ ತಿಳಿಸಿದ್ದಾರೆ.

ಒಟ್ಟಿಗೆ ಹೊಸದನ್ನು ಪ್ರಯತ್ನಿಸಿ: ಒಟ್ಟಿಗೆ ಜಗತ್ತನ್ನು ಅರಿತುಕೊಳ್ಳಲು, ಒಟ್ಟಿಗೆ ಬೆಳೆಯಲು ಆರಾಮದಾಯಕವಾಗಿರಿ.

ಕುತೂಹಲದಿಂದಿರಿ: ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲವೂ ನಿಮಗೆ ತಿಳಿದಿದೆ ಎಂದು ಭಾವಿಸುವುದನ್ನು ನಿಲ್ಲಿಸಿ. ತಿಳಿದುಕೊಳ್ಳಬೇಕಾದುದು ಇನ್ನೂ ಇದೆ ಎಂಬುದನ್ನು ಮರೆಯಬೇಡಿ.

ಸಂಘರ್ಷವನ್ನು ಎದುರಿಸಿ ಅಥವಾ ಜಗಳವಾಗದಂತೆ ನೋಡಿಕೊಳ್ಳಿ: ಯಾವಾಗಲೂ ಜಗಳವಾಡುವುದನ್ನು ಎದುರಿಸುವುದಕ್ಕಿಂತಲೂ ಜಗಳ ಆಗದ ಹಾಗೆ ನೋಡಿಕೊಳ್ಳಿ. ಸಂಘರ್ಷದಿಂದ ಇಬ್ಬರೂ ದೂರವೇ ಇರುವುದು ಒಳ್ಳೆಯದು. ಇದು ಉತ್ತಮ ಬಾಂಧವ್ಯ ಬೆಳೆಯಲು ಕೂಡ ಕಾರಣವಾಗುತ್ತದೆ. ನೀವು ಅವರಲ್ಲಿ ಯಾವ ಗುಣಗಳನ್ನು ಮೆಚ್ಚುತ್ತೀರಿ ಮತ್ತು ಪ್ರೀತಿಸುತ್ತೀರಿ ಎಂಬುದನ್ನು ಇತರ ವ್ಯಕ್ತಿಗೆ ತಿಳಿಸಿ.

ದುರ್ಬಲತೆಯನ್ನು ಅಭ್ಯಾಸ ಮಾಡಿ: ನಿಮ್ಮ ಆಲೋಚನೆಗಳು, ಭಾವನೆಗಳು, ಕನಸುಗಳು ಅಥವಾ ಭಯಗಳನ್ನು ಹಂಚಿಕೊಳ್ಳಿ. ನೀವು ಏನಾಗಬೇಕೆಂದು ನೀವು ಭಾವಿಸುವ ಬದಲು ನೀವು ಯಾರೆಂದು ಅವರಿಗೆ ತೋರಿಸಿ.

ತಪ್ಪಾದಾಗ ಕ್ಷಮೆ ಯಾಚಿಸಿ: ನೀವು ಏನಾದರೂ ತಪ್ಪು ಮಾಡಿದರೆ ಅದನ್ನು ಒಳಗೇ ಮುಚ್ಚಿಟ್ಟುಕೊಳ್ಳಬೇಡಿ. ಬದಲಾಗಿ ತಪ್ಪು ಮಾಡಿದ್ದೇನೆ ಎನಿಸಿದ ತಕ್ಷಣ ಕ್ಷಮೆ ಯಾಚಿಸಲು ಮರೆಯಬೇಡಿ.

ಇದನ್ನೂ ಓದಿ: Health Tips: ವರ್ಕ್​ಔಟ್ ಮಾಡುವಾಗ ಎಷ್ಟು ಲೀಟರ್ ನೀರು ಕುಡಿಯಬೇಕು?; ಸರಿಯಾಗಿ ನೀರು ಕುಡಿಯದಿದ್ದರೆ ಏನಾಗುತ್ತದೆ?

Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ