Beauty Tips: ನಿಮ್ಮ ಬಣ್ಣಕ್ಕೆ ಯಾವ ಕಲರ್​ ಲಿಪ್​ಸ್ಟಿಕ್​ ಬಳಸಿದರೆ ಅಂದವಾಗಿ ಕಾಣಿಸಬಹದು?

| Updated By: ಆಯೇಷಾ ಬಾನು

Updated on: Aug 26, 2021 | 9:14 AM

ನಿಮ್ಮ ಬಣ್ಣಕ್ಕೆ ಸರಿ ಹೊಂದುವ ಲಿಪ್​ಸ್ಟಿಕ್ ಬಣ್ಣ ಯಾವುದು? ಯಾವ ಬಣ್ಣವನ್ನು ಹೆಚ್ಚು ಬಳಸಬೇಕು ಎಂಬುದರ ಕುರಿತಾಗಿ ನಿಮಗಾಗಿಯೇ ಕೆಲವು ಬ್ಯೂಟಿ ಟಿಪ್ಸ್​ಗಳು ಈ ಕೆಳಗಿನಂತಿವೆ.

Beauty Tips: ನಿಮ್ಮ ಬಣ್ಣಕ್ಕೆ ಯಾವ ಕಲರ್​ ಲಿಪ್​ಸ್ಟಿಕ್​ ಬಳಸಿದರೆ ಅಂದವಾಗಿ ಕಾಣಿಸಬಹದು?
ಸಾಂದರ್ಭಿಕ ಚಿತ್ರ
Follow us on

ಈಗೆಲ್ಲಾ ಲಿಪ್​ಸ್ಟಿಕ್ ಹಚ್ಚುವುದು ಟ್ರೆಂಡ್ ಆಗಿಬಿಟ್ಟಿದೆ. ಯುವತಿಯರಿಂದ ಹಿಡಿದು ವಯಸ್ಕರವರೆಗೂ ಎಲ್ಲಾ ಪ್ಯಾಶನ್ ಲೋಕದಲ್ಲಿ ಮುಳುಗಿದ್ದಾರೆ. ದಿನ್ಕೊಂದು ಹೊಸ ಹೊಸ ಮೇಕಪ್ ಕಿಟ್​ಗಳು ಮಾರುಕಟ್ಟೆಗೆ ಬರುತ್ತಿವೆ. ವಿವಿಧ ಶೈಲಿಯ ಉಡುಗೆ ತೊಡುಗೆಗಳು ಮನ ಸೆಳೆಯುತ್ತಿವೆ. ಹೀಗಿರುವಾಗ ಹೊರ ಹೋಗಬೇಕೆಂದರೆ ಲಿಪ್​ಸ್ಟಿಕ್ ಇರಲೇಬೇಕು ಅನ್ನುತ್ತಾರೆ ಮಹಿಳೆಯರು. ಅದರಲ್ಲಿಯೂ ಡಿಫರೆಂಟ್ ವೆರೈಟಿಯ ಲಿಪ್​ಸ್ಟಿಕ್​ಗಳಿವೆ. ಜತೆಗೆ ನಾನಾ ಬಣ್ಣಗಳಿವೆ. ಹಾಗಿರುವಾ ನಿಮ್ಮ ಬಣ್ಣಕ್ಕೆ ಸರಿ ಹೊಂದುವ ಲಿಪ್​ಸ್ಟಿಕ್ ಬಣ್ಣ ಯಾವುದು? ಯಾವ ಬಣ್ಣವನ್ನು ಹೆಚ್ಚು ಬಳಸಬೇಕು ಎಂಬುದರ ಕುರಿತಾಗಿ ನಿಮಗಾಗಿಯೇ ಕೆಲವು ಬ್ಯೂಟಿ ಟಿಪ್ಸ್​ಗಳು ಈ ಕೆಳಗಿನಂತಿವೆ.

ಈ ದಿನಗಳಲ್ಲಿ ಮ್ಯಾಟ್, ಹೊಳಪು, ಮಿನುಗು, ಮತ್ತು ದ್ರವ ಸೇರಿದಂತೆ ವಿವಿಧ ರೀತಿಯ ಲಿಪ್​ಸ್ಟಿಕ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅನೇಕ ಮಹಿಳೆಯರಿಗೆ ತಮ್ಮ ಚರ್ಮದ ಟೋನ್ ಬಗ್ಗೆ ತಿಳಿದಿರುವುದಿಲ್ಲ. ಯಾವ ಸಂಯೋಜನೆಯ ಲಿಪ್​ಸ್ಟಿಕ್ ಯಾವ ಟೋನ್ ಹೊಂದುತ್ತದೆ ಎಂದ ವಿಷಯದ ಬಗ್ಗೆ ನಿಮಗೂ ಗೊಂದಲಗಳಿದ್ದರೆ ಚಿಂತಿಸಬೇಡಿ. ಚರ್ಮದ ಟೋನ್​ಗೆ ಅನುಗುಣವಾಗಿ ಯಾವ ಲಿಪ್​ಸ್ಟಿಕ್ ನಿಮಗೆ ಸರಿಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಗೋಧಿ ಬಣ್ಣ
ಈ ಬಣ್ಣದ ಮಹಿಳೆಯರು ಹೆಚ್ಚು ಕಪ್ಪು ಬಣ್ಣದವರೂ ಅಲ್ಲ. ತುಂಬಾ ಬೆಳ್ಳಗೂ ಕಾಣಿಸುವವರಲ್ಲ. ಅಂಥವರಿಗೆ ವಿಶೇಷವಾಗಿ ಕಂದು ನೆರಳು ಬಣ್ಣ ಬಹಳಷ್ಟು ಹೊಂದುತ್ತದೆ. ಇದರ ಹೊರತಾಗಿ ನೀವು ಗುಲಾಬಿ, ರಕ್ತ ಕೆಂಪು, ಮಾಗಿದ ಕಿತ್ತಳೆ ಬಣ್ಣವನ್ನು ಬಳಸಬಹುದು. ಈ ಬಣ್ಣದಲ್ಲಿ ಮುಖ ಅಂದವಾಗಿ ಕಾಣುತ್ತದೆ. ಜತೆಗೆ ಮುಖಕ್ಕೆ ಲೈಟ್ಆಗಿ ಸರಿಹೊಂದುವ ಮೇಕಪ್ ಮಾಡಿಕೊಳ್ಳಿ.

ಕಪ್ಪು ಅಥವಾ ತಿಳಿ ಕಪ್ಪು
ನಿಮ್ಮ ಮೈ ಬಣ್ಣ ಕಪ್ಪು ಬಣ್ಣವಾಗಿದ್ದರೆ ಇಟ್ಟಿಗೆ ಕೆಂಪು ಮತ್ತು ಕ್ಯಾರಮೆಲ್ ಬಣ್ಣವನ್ನು ಹಚ್ಚಬಹುದು. ಯಾವಾಗಲೂ ಮ್ಯಾಟ್ ಲಿಪ್​ಸ್ಟಿಕ್​ಅನ್ನು ಆಯ್ಕೆ ಮಾಡಿ. ಹೆಚ್ಚು ಹೊಳಪಿರುವ ಲಿಪ್​ಸ್ಟಿಕ್​ಗಳು ಬೇಡ. ಕಂದು, ಕೆಂಪು ಮತ್ತು ನೇರಳೆ ಬಣ್ಣವನ್ನು ಕೂಡಾ ಪ್ರಯತ್ನಿಸಬಹುದು.

ತಿಳಿ ಹಳದಿ ಅಥವಾ ತಿಳಿ ಗೋಧಿ ಬಣ್ಣ
ಲಿಪ್​ಸ್ಟಿಕ್ ಆರಿಸುವಾಗ ಅಂಡರ್ಟೋನ್ಅನ್ನು ಸಹ ಕಾಳಜಿವಹಿಸಬೇಕು. ನಿಮ್ಮ ಚರ್ಮ ಹಳದಿ ಅಥವಾ ಗೋಧಿ ಬಣ್ಣದಲ್ಲಿದ್ದರೆ ಅದಕ್ಕೆ ತಕ್ಕಂತೆ ಲಿಪ್​ಸ್ಟಿಕ್ ಆಯ್ಕೆ ಮಾಡಿ. ಆದರೆ ಪ್ರತಿ ಬಾರಿಯೂ ತುಟಿಗೆ ಹಚ್ಚಿ ಲಿಪ್​ಸ್ಟಿಕ್ ನೋಡಬೇಕಂತಿಲ್ಲ. ಮಣಿಕಟ್ಟಿನ ಮೇಲೆ ಲಿಪ್​ಸ್ಟಿಕ್​ನಿಂದ ಒಂದು ಗೆರೆ ಎಳೆಯಿರಿ. ಆ ಬಣ್ಣ ನಿಮಗೆ ಸರಿ ಹೊಂದುತ್ತದೆಯೋ ಇಲ್ಲವೋ ಎಂಬುದು ತಕ್ಷಣ ಗೊತ್ತಾಗುತ್ತದೆ. ನಿಮ್ಮ ಚರ್ಮದ ಟೋನ್​ಗೆ ಹೊಂದಿಕೆಯಾದರೆ ನೀವು ಬಳಸಬಹುದು.

ಇದನ್ನೂ ಓದಿ:

Beauty Tips: ಸುಂದರವಾದ ತುಟಿ ಪಡೆಯಲು ಇಲ್ಲಿದೆ ಉತ್ತಮ ಮಾರ್ಗಗಳು

Beauty Tips: ಹಳದಿ ಹಲ್ಲುಗಳಿಂದಾಗಿ ನಗಲು ಮುಜುಗರ ಪಡುತ್ತಿದ್ದೀರಾ?-ಈ ಸರಳ ವಿಧಾನಗಳ ಮೂಲಕ ಪಡೆಯಿರಿ ಬಿಳಿ ಹಲ್ಲು

(Know with colour lipstick looks best check in kannada)