Krishna Janmashtami 2024 : ಬೆಣ್ಣೆಕಳ್ಳ ಕೃಷ್ಣನಿಗೂ ಮೊಸರು ಕುಡಿಕೆಗೂ ಇದೆ ಅವಿನಾಭಾವ ಸಂಬಂಧ, ಈ ಆಚರಣೆ ಹಿಂದಿನ ಮಹತ್ವವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 26, 2024 | 12:53 PM

ಶ್ರೀಕೃಷ್ಣನು ದೇವರಾಗಿದ್ದರೂ ಕೂಡ ತನ್ನ ಬಾಲ್ಯದ ತುಂಟಾಟಗಳಿಂದಲೇ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾನೆ. ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಜನಿಸಿದ ಬೆಣ್ಣೆ ಕಳ್ಳ ಕೃಷ್ಣನಿಗೆ ಇಂದು ಜನ್ಮದಿನದ ಸಂಭ್ರಮ. ಕೃಷ್ಣನು ಹುಟ್ಟಿದ ಮರುದಿನ ಕರ್ನಾಟಕ ಸೇರಿದಂತೆ ವಿವಿಡೆದೆಗಳಲ್ಲಿ ಮೊಸರು ಕುಡಿಕೆ, ಶ್ರೀಕೃಷ್ಣ ವೇಷ ಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಡಗರ ಸಂಭ್ರಮವನ್ನು ಕಾಣಬಹುದು. ಹಾಗಾದ್ರೆ ಕೃಷ್ಣನಿಗೂ ಈ ಮೊಸರು ಕುಡಿಕೆ ಆಚರಣೆಗೂ ಇರುವ ಸಂಬಂಧವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Krishna Janmashtami 2024 : ಬೆಣ್ಣೆಕಳ್ಳ ಕೃಷ್ಣನಿಗೂ ಮೊಸರು ಕುಡಿಕೆಗೂ ಇದೆ ಅವಿನಾಭಾವ ಸಂಬಂಧ, ಈ ಆಚರಣೆ ಹಿಂದಿನ ಮಹತ್ವವೇನು?
Follow us on

ಕೃಷ್ಣ ಜನ್ಮಾಷ್ಟಮಿಯಂದು ಎಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವು ಮನೆ ಮಾಡಿರುತ್ತದೆ. ಈ ದಿನದಂದು ಶಾಲೆಗಳಲ್ಲಿ ಪುಟಾಣಿಗಳಿಗೆ ಶ್ರೀಕೃಷ್ಣನ ವೇಷ ಹಾಕುವ ಸ್ಪರ್ಧೆಗಳು ಇರುತ್ತದೆ. ಪುಟಾಣಿಗಳಿಗೆ ಈ ದಿನ ರಾಧೆ-ಕೃಷ್ಣನ ಉಡುಗೆಗಳನ್ನು ತೊಟ್ಟು ತಮ್ಮ ಮಕ್ಕಳಲ್ಲಿಯೇ ಬಾಲಕೃಷ್ಣನನ್ನು ನೋಡಿ ಖುಷಿ ಪಡುತ್ತಾರೆ. ಕೃಷ್ಣನು ಹುಟ್ಟಿದ ಮರುದಿನ ವಿಟ್ಲಪಿಂಡಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮೊಸರು ಕುಡಿಕೆ ಹಾಗೂ ಶ್ರೀಕೃಷ್ಣ ವೇಷ ಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಬಾಲಕೃಷ್ಣನು ಹುಟ್ಟಿದ ಮರುದಿನ ಮೊಸರು ಕುಡಿಕೆಯನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆಯು ಕೃಷ್ಣನ ಬಾಲ್ಯದ ತುಂಟಾಟವನ್ನು ನೆನಪಿಸುತ್ತದೆ. ಶ್ರೀಕೃಷ್ಣನು ತನ್ನ ಬಾಲ್ಯದ ದಿನಗಳಲ್ಲಿ ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣವನ್ನು ತಿನ್ನುತ್ತಿದ್ದನು. ವ್ರಜಮಂಡಲದಲ್ಲಿ ಗೋವುಗಳನ್ನು ಮೇಯಿಸುವಾಗ ತನ್ನ ಹಾಗೂ ಸ್ನೇಹಿತರ ಬುತ್ತಿಯಿಂದ ಖಾದ್ಯಪದಾರ್ಥಗಳ ರುಚಿಯನ್ನು ಸವಿಯುತ್ತಿದ್ದನಂತೆ.

ಈ ಕಥೆಗೆ ಅನುಸಾರವಾಗಿ ಗೋಕುಲಾಷ್ಟಮಿಯ ಮರುದಿನ ಮೊಸರು ಕುಡಿಕೆಯನ್ನು ಒಡೆಯುವ ಆಚರಣೆಯು ಪ್ರಾರಂಭವಾಯಿತು. ಇನ್ನೊಂದೆಡೆ ಬೆಣ್ಣೆ ಪ್ರಿಯ ಕೃಷ್ಣನು ಚಿಕ್ಕವನಿದ್ದಾಗ ತಾಯಿ ಯಶೋಧೆಯ ಕಣ್ಣು ತಪ್ಪಿಸಿ ಬೆಣ್ಣೆ ಕದ್ದು ತಿನ್ನುತ್ತಿದ್ದನಂತೆ. ಒಂದು ವೇಳೆ ಬೆಣ್ಣೆ ಸಿಗದಂತೆ ಮೇಲೆ ಇಟ್ಟರೂ ಕೂಡ ಸ್ನೇಹಿತರ ಬೆನ್ನ ಮೇಲೆ ಹತ್ತಿ ಬೆಣ್ಣೆ ಕದ್ದು ತಿನ್ನುತ್ತಿದ್ದನು. ಹೀಗಾಗಿ ಮೊಸರು ಕುಡಿಕೆ ಒಡೆಯುವ ಆಚರಣೆಯು ಈ ಶ್ರೀಕೃಷ್ಣನ ಬಾಲ್ಯವನ್ನು ನೆನಪಿಸುತ್ತದೆ.

ಇದನ್ನೂ ಓದಿ: ಕಷ್ಣನಿಗೆ ತನ್ನ ಪ್ರೀತಿ ಸಿಗದಿರಲು ತುಳಸಿಯ ಶಾಪ ಕಾರಣವೇ!

ಈ ಮೊಸರು ಕುಡಿಕೆ ಒಡೆಯುವುದರ ಹಿಂದೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಆಚರಣೆಯಿಂದಾಗಿ ದೈಹಿಕವಾಗಿ ಬಲ ಹಾಗೂ ಶಕ್ತಿಯನ್ನು ನೀಡುತ್ತದೆ ಹಾಗೂ ದೇಹದ ನಾಡಿಗಳು ಶುದ್ಧವಾಗಿ ರಕ್ತವನ್ನು ನಿಯಂತ್ರಿಸುವ ಮೂಲಕ ದೈಹಿಕ ವ್ಯಾಯಮವಾಗುತ್ತದೆ. ಈ ಆಚರಣೆಯು ಮಾನಸಿಕ ಒತ್ತಡಗಳನ್ನು ನಿವಾರಿಸಿ ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ