ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಇದು ರಾಘವೇಂದ್ರ ಸ್ವಾಮಿ ಮತ್ತು ಪಂಚಮುಖಿ ಆಂಜನೇಯ ದೇವಸ್ಥಾನಗಳ ದರ್ಶನವನ್ನು ಒಳಗೊಂಡಿದೆ. ಪ್ರತಿ ಬುಧವಾರ ಮತ್ತು ಶುಕ್ರವಾರ ಲಭ್ಯವಿದ್ದು, ಇದರ ದರ 2780 ರೂಪಾಯಿಗಳು. ಈ ಪ್ಯಾಕೇಜ್ ಮೂಲಕ ಭಕ್ತರಿಗೆ ಸುಲಭವಾಗಿ ರಾಯರ ದರ್ಶನ ಮಾಡಬಹುದು.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್
ಸಾಂದರ್ಭಿಕ ಚಿತ್ರ

Updated on: Jan 20, 2026 | 11:04 AM

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (kstdc) ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಜನರು ಮಂತ್ರಾಲಯಕ್ಕೆ ಹೋಗುವುದು ಹೆಚ್ಚು. ಅದರಲ್ಲೂ ಕರ್ನಾಟಕದ ಜನರಿಗೆ ಇದು ಇನ್ನೂ ವಿಶೇಷವಾಗಿರುತ್ತದೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೈವ, ಈ ಕ್ಷೇತ್ರ ಆಂಧ್ರ ಗಡಿಯಲ್ಲಿದ್ದರು. ಹೆಚ್ಚು ಜನ ರಾಜ್ಯದಿಂದಲ್ಲೇ ಹೋಗುತ್ತಾರೆ. ರಾಯರ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಜನ ಇರುತ್ತಾರೆ. ಇದೀಗ ಇಲ್ಲಿ ಹೋಗಲು ವಿಶೇಷ ಪ್ಯಾಕೇಜ್​​​ ಒಂದನ್ನು kstdc ನೀಡಿದೆ. ಪ್ರತಿ ಬುದ್ಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್​ ಇರುತ್ತದೆ. ರಾಘವೇಂದ್ರ ಸ್ವಾಮಿ ಮಠ ಮಾತ್ರವಲ್ಲದೆ. ಇತರ ಸ್ಥಳಗಳಿಗೂ ಇರಲಿ ಕರೆದುಕೊಂಡು ಹೋಗಲಾಗುತ್ತದೆ. ಜತಗೆ ಈ ಎಲ್ಲ ಸೌಲಭ್ಯಗಳು ಇದೆ.

ಪ್ರಯಾಣದ ವಿವರ:

ರಾಘವೇಂದ್ರ ಸ್ವಾಮಿ ದರ್ಶನಕ್ಕೆ ವಿಶೇಷ ಪ್ಯಾಕೇಜ್​​ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ಇದರ ಜತೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ಕೂಡ ದರ್ಶನ ಮಾಡಬಹುದು. ದೇವರ ದರ್ಶನಕ್ಕೆ ಅನುಕೂಲ ಆಗುವಂತೆ ಈ ದಿನದಂದು ಪ್ಯಾಕೇಜ್​​​​ನ್ನು ಬಿಡುಗಡೆ ಮಾಡಲಾಗಿದೆ.

ದಿನ 1: ರಾತ್ರಿ 8.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ.

ದಿನ 2: ಬೆಳಿಗ್ಗೆ 4.30 – 6.00 ಫ್ರೆಶ್ ಅಪ್

ಬೆಳಿಗ್ಗೆ 6.30 – 10.00 ರಾಘವೇಂದ್ರ ಸ್ವಾಮಿಯ ದರ್ಶನ

ಬೆಳಿಗ್ಗೆ 11.00 – ಮಧ್ಯಾಹ್ನ 12 ಪಂಚಮುಖಿ ಆಂಜನೇಯ ದೇವಸ್ಥಾನ

ಮಧ್ಯಾಹ್ನ 1.00 – 2.00 ದಾರಿಯಲ್ಲಿ ಊಟ

ರಾತ್ರಿ 9.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ

ಇದನ್ನೂ ಓದಿ: KSTDCನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್

ಪ್ಯಾಕೇಜ್​​ ದರ ಹೇಗೆ?

ಈ ವಿಶೇಷ ಪ್ಯಾಕೇಜ್​​ನಲ್ಲಿ ಎಲ್ಲ ಸೌಲಭ್ಯಗಳು ಸೇರಿದಂತೆ ಒಬ್ಬರಿಗೆ 2780 ಇರುತ್ತದೆ. ಜತೆಗೆ ಮರುಪಾವತಿ ಸೌಲಭ್ಯ ಕೂಡ ಇದೆ. 48 ಗಂಟೆಗಳ ಮೊದಲು ಟಿಕೆಟ್‌ ರದ್ದು ಮಾಡಿದರೆ – 10%, 24 ಗಂಟೆಗಳ ಮೊದಲು ಟಿಕೆಟ್‌ ರದ್ದು ಮಾಡಿದರೆ – 25% ಕಡಿತಗೊಳಿಸಲಾಗಿದೆ. 24 ಗಂಟೆಗಳ ಒಳಗೆ ಟಿಕೆಟ್‌ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್​​ ಸೈಟ್​​​ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ