KSTDCನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್
KSTDC ಹೊಸ ವರ್ಷದ ವಿಶೇಷ ದಕ್ಷಿಣ ಭಾರತ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ. ಮೈಸೂರು, ಊಟಿ, ಕೊಡೆಕೆನಾಲ್ ಒಳಗೊಂಡ ಈ ಪ್ರವಾಸಕ್ಕೆ 20% ರಿಯಾಯಿತಿ ಲಭ್ಯ. ಪ್ರಮುಖ ಸ್ಥಳಗಳ ಭೇಟಿ, ಸಾರಿಗೆ, ವಸತಿ ವಿವರಗಳನ್ನು ಒಳಗೊಂಡಿದ್ದು, ಪ್ರಕೃತಿ ಸೌಂದರ್ಯದ ತಾಣಗಳನ್ನು ಕಡಿಮೆ ವೆಚ್ಚದಲ್ಲಿ ನೋಡಲು ಉತ್ತಮ ಅವಕಾಶವಾಗಿದೆ. ಸರ್ಕಾರಿ ನೌಕರರಿಗೆ LTC ಸೌಲಭ್ಯವೂ ಇದೆ.

ದಕ್ಷಿಣ ಭಾರತ ಪ್ರವಾಸಗಳ ತವರು, ( KSTDC South India Tour) ಇಲ್ಲಿರುವಷ್ಟು ಪ್ರಕೃತಿ ಸೌಂದರ್ಯದ ಸೋಬಗು ಎಲ್ಲಿಯೂ ಇರಲು ಸಾಧ್ಯವಿಲ್ಲ. ಅದರಲ್ಲೂ ಕರ್ನಾಟಕ, ಕೇರಳ, ತಮಿಳುನಾಡು ತನ್ನದೇ ಆಗಿರುವ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ ಇಲ್ಲಿ ಹೋಗುವುದಕ್ಕೆ ತುಂಬಾ ಖರ್ಚು ಆಗುತ್ತದೆ ಎಂಬುದು ಅನೇಕರ ಚಿಂತೆ. ಅದಕ್ಕೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಆಗ್ಗಾಗೆ ವಿಶೇಷ ಪ್ಯಾಕೇಜ್ಗಳನ್ನು ನೀಡುತ್ತದೆ. ಇದೀಗ ಹೊಸ ವರ್ಷದ ಎರಡನೇ ವಾರ ವಿಶೇಷ ಪ್ಯಾಕೇಜ್ ಒಂದನ್ನು ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಾದ ಮೈಸೂರು, ಊಟಿ ಮತ್ತು ಕೊಡೈಕೆನಾಲ್ ಪ್ರವಾಸ ಹೋಗಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಈ ಪ್ಯಾಕೇಜ್ ಮೂಲಕ ವಿಶೇಷ ಸ್ಥಳಗಳನ್ನು ನೋಡಬಹುದು. ಒಂದು ವೇಳೆ ಈ ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ 20% ರಿಯಾಯಿತಿ ಇರುತ್ತದೆ. ಪ್ರವಾಸದ ಮಾರ್ಗ, ಸ್ಥಳ, ಟಿಕೆಟ್ ದರ, ಸಂಚಾರ ಸಮಯ, ಪ್ಯಾಕೇಜ್ ಬುಕ್ಕಿಂಗ್ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ:
ಭೇಟಿ ನೀಡುವ ಪ್ರಮುಖ ನಗರಗಳು:
ಮೈಸೂರು (ಅರಮನೆ ನಗರಿ): ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುವ ಮೈಸೂರು, ಭವ್ಯ ಅರಮನೆ, ಮ್ಯೂಸಿಯಂಗಳು, ಚರ್ಚುಗಳು ಮತ್ತು ಪ್ರಾಣಿಸಂಗ್ರಹಾಲಯಕ್ಕೆ ಹೆಸರುವಾಸಿಯಾಗಿರುವ ಕಾರಣ, ಇಲ್ಲಿ ಒಂದು ಅದ್ಭುತ ಕ್ಷಣಗಳನ್ನು ಕಳೆಯಬಹುದು. ವಿಶೇಷ ಪ್ರವಾಸಿ ತಾಣಗಳನ್ನು ನೋಡಬಹುದು.
ಊಟಿ (ಗಿರಿದಾಮಗಳ ರಾಣಿ): ಇಲ್ಲಿನ ಚಹಾ ತೋಟಗಳು ವಿಶ್ವಪ್ರಸಿದ್ಧ. ನೀವು ಮಸಾಲಾ, ಮಲ್ಲಿಗೆ, ಏಲಕ್ಕಿ ಮತ್ತು ಚಾಕೊಲೇಟ್ ಫ್ಲೇವರ್‌ನ ವಿವಿಧ ಚಹಾಗಳನ್ನು ಇಲ್ಲಿ ಸವಿಯಬಹುದು. ಇಲ್ಲಿನ ಬೆಟ್ಟಗಳು ಹಾಗೂ ವಿಶೇಷ ಪ್ರವಾಸಿ ತಾಣಗಳನ್ನು ನೋಡಬಹುದು.
ಕೊಡೈಕೆನಾಲ್ (ಗಿರಿಧಾಮಗಳ ರಾಜಕುಮಾರಿ): ತನ್ನ ಶಾಂತಿಯುತ ವಾತಾವರಣ ಮತ್ತು ಸುಂದರವಾದ ಬೆಟ್ಟಗುಡ್ಡಗಳಿಗೆ ಹೆಸರಾಗಿದೆ. ಈ ಪ್ರದೇಶವನ್ನು ದಂಪತಿಗಳು ಹೆಚ್ಚು ಇಷ್ಟಪಡುತ್ತಾರೆ. ಇಲ್ಲಿ ಹೆಚ್ಚು ಕಪಲ್ಸ್ ಬರುತ್ತಾರೆ.
ಇದನ್ನೂ ಓದಿ: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ
ನೋಡಬೇಕಾದ ಸ್ಥಳ:
ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನನ ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ.
ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ ಮತ್ತು ಬೃಂದಾವನ ಗಾರ್ಡನ್.
ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜುಂಡೇಶ್ವರ ದೇವಸ್ಥಾನ.
ಊಟಿ ಮತ್ತು ಕೊಡೈಕೆನಾಲ್: ಪ್ರಸಿದ್ಧ ಗಿರಿಧಾಮಗಳ ವೀಕ್ಷಣೆ.
ಸಾರಿಗೆ ಮತ್ತು ವಾಸ್ತವ್ಯದ ವಿವರ:
ಸಾರಿಗೆ: ಸುಸಜ್ಜಿತ ಡಿಲಕ್ಸ್ ಕೋಚ್ (Deluxe Coach) ಮೂಲಕ ಪ್ರಯಾಣ.
ಹೋಟೆಲ್ ವಾಸ್ತವ್ಯ:
ಮೈಸೂರಿನಲ್ಲಿ: ಹೋಟೆಲ್ ಮಯೂರ ಹೊಯ್ಸಳ (ಕೆಎಸ್‌ಟಿಡಿಸಿ ಹೋಟೆಲ್).
ಊಟಿಯಲ್ಲಿ: ಹೋಟೆಲ್ ಮಯೂರ ಸುದರ್ಶನ್ ಅಥವಾ ಸಮಾನ ದರ್ಜೆಯ ಹೋಟೆಲ್.
ಕೊಡೈಕೆನಾಲ್‌ನಲ್ಲಿ: ಹೋಟೆಲ್ ಎಸ್ ವಿ ಇಂಟರ್ನ್ಯಾಷನಲ್.
ಪ್ರವಾಸದ ಇತರ ಸೌಲಭ್ಯ:
ಮೈಸೂರು-ಊಟಿ-ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ಗೆ ಒಬ್ಬರಿಗೆ ತಲಾ ₹9,310 ರೂಪಾಯಿ ಇದೆ. ಹಿರಿಯ ನಾಗರಿಕಿಗೆ ದರದಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಇದೆ.
ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗಿದೆ.
ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗಿದೆ.
ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸಲು ಪರಿಣಿತ ಗೈಡ್ ಸೌಲಭ್ಯ.
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ (PSU) ನೌಕರರಿಗೆ LTC (Leave Travel Concession) ಸೌಲಭ್ಯ ಲಭ್ಯವಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Fri, 9 January 26




