ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್

ಕೆಎಸ್‌ಟಿಡಿಸಿ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ₹830ಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ದೇವನಹಳ್ಳಿ ಕೋಟೆ, ಘಾಟಿ ಸುಬ್ರಹ್ಮಣ್ಯ, ಶಿವಗಂಗೆ, ಚಿಕ್ಕ ಮಧುರೈ ಸೇರಿದಂತೆ ಹಲವು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿ, ಆಧ್ಯಾತ್ಮ ಹಾಗೂ ಇತಿಹಾಸ ಅನುಭವಿಸಲು ಇದು ಉತ್ತಮ ಅವಕಾಶ. ಕಡಿಮೆ ವೆಚ್ಚದಲ್ಲಿ ರಜೆಗಳನ್ನು ಸದುಪಯೋಗಪಡಿಸಿಕೊಳ್ಳಲು ಬಯಸುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ.

ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್
ಸಾಂದರ್ಭಿಕ ಚಿತ್ರ

Updated on: Jan 23, 2026 | 5:09 PM

ನಾಳೆಯಿಂದ ಸಾಲು ಸಾಲು ರಜೆಗಳು ಇದೆ. ಈ ರಜೆಯಲ್ಲಿ ಎಲ್ಲಿಗೆ ಹೋಗುವುದು ಎಂಬ ಯೋಚನೆ ಇರಬಹುದು. ಇನ್ನು ಕೆಲವರಿಗೆ ತಿಂಗಳ ಕೊನೆ, ಈ ಕೈಯಲ್ಲಿ ಕಾಸು ಇರಲ್ಲ, ಅದರೂ ಚಿಕ್ಕದಾಗಿ ಟೂರ್​​​ ಪ್ಯಾನ್​​ ಮಾಡಬೇಕೆಂದು ಅದುಕೊಂಡಿದ್ದಾರೆ. ನಿಮಗೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಈ ಪ್ಯಾಕೇಜ್​​ ಉತ್ತಮ. ಒಂದೇ ದಿನದಲ್ಲಿ ಇಷ್ಟು ಸ್ಥಳಗಳನ್ನು ನೋಡಬಹುದು. ಈ ಒಂದು ದಿನ ಪ್ಲಾನ್​​ ಮಾಡಿಕೊಂಡಿದ್ದರೆ,ಗಣರಾಜ್ಯೋತ್ಸವದ ದಿನ ಉತ್ತಮ. ಕಡಿಮೆ ದರದಲ್ಲಿ ಈ ಟೂರ್​​ಗೆ ಹೋಗಿ ಬರುಬಹುದು. ಬೆಳಿಗ್ಗೆ 7 ಗಂಟೆಗೆ ಹೊರಟ್ರೆ, 6 ಗಂಟೆ ಮತ್ತೆ ಮನೆಗೆ ಬರಬಹುದು. ಇದೊಂದು ವಿಶೇಷ ಪ್ಯಾಕೇಜ್​​​ನ್ನು kstdc ಘೋಷಣೆ ಮಾಡಿದೆ. ಒಂದು ದಿನದಲ್ಲಿ ಎಲ್ಲ ಕಡೆ ಸುತ್ತಿ ಬರಬಹುದು. ಜತೆಗೆ ಎಲ್ಲ ವ್ಯವಸ್ಥೆಗಳನ್ನು ಕೂಡ ಈ ಪ್ಯಾಕೇಜ್​​ನನಲ್ಲಿದೆ.

ದೇವನಹಳ್ಳಿ ಕೋಟೆ, ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ, ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ, ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನಗಳನ್ನು ಒಳಗೊಂಡ ಬೆಂಗಳೂರಿನಲ್ಲಿ ಒಂದು ದಿನದ ಗ್ರಾಮೀಣ ಪ್ರವಾಸವನ್ನು ಮಾಡಬಹುದು. ಈ ಮೂಲಕ ನಗರದ ಗದ್ದಲದಿಂದ ದೂರವಾಗಿ, ಪ್ರಕೃತಿ ಮತ್ತು ಆಧ್ಯಾತ್ಮದ ಅನುಭವ ಪಡೆಯಲು ಬಯಸುವವರಿಗೆ ಬೆಂಗಳೂರಿನ ಸುತ್ತಮುತ್ತ ಒಂದು ದಿನದ ಗ್ರಾಮೀಣ ಪ್ರವಾಸ ಅತ್ಯುತ್ತಮ ಆಯ್ಕೆ. ದೇವನಹಳ್ಳಿ ಕೋಟೆಯಿಂದ ಆರಂಭಿಸಿ ಶಿವಗಂಗೆ ಬೆಟ್ಟದವರೆಗೆ ಸಾಗುವ ಈ ಪ್ರವಾಸದಲ್ಲಿ ಇತಿಹಾಸ, ಧಾರ್ಮಿಕ ಮಹತ್ವ ಮತ್ತು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಅನುಭವಿಸಬಹುದು.

ಪ್ರವಾಸ ಹೋಗುವ ಸ್ಥಳ ಹಾಗೂ ಸಮಯ:

ಬೆಳಿಗ್ಗೆ 7.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ

ಬೆಳಿಗ್ಗೆ 8.30 – 9.15 ದೇವನಹಳ್ಳಿ ಕೋಟೆಗೆ ಭೇಟಿ ನೀಡಿ

ಬೆಳಿಗ್ಗೆ 10.00 – ಬೆಳಿಗ್ಗೆ 11.00 ಘಾಟಿ ಸುಬ್ರಮಣ್ಯ ದೇವಸ್ಥಾನ

ಬೆಳಿಗ್ಗೆ 11.45 – ಮಧ್ಯಾಹ್ನ 1.00 ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ

ಮಧ್ಯಾಹ್ನ 1.30 – 2.00 ಮಧ್ಯಾಹ್ನದ ಊಟ

ಮಧ್ಯಾಹ್ನ 2.30 – ಸಂಜೆ 4.30 ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನ

ಸಂಜೆ 6.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ ಹಿಂತಿರುಗಿ

ಪ್ರವಾಸದ ಪ್ಯಾಕೇಜ್​​ : 830

ಇದನ್ನೂ ಓದಿ: ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್

ದೇವನಹಳ್ಳಿ ಕೋಟೆ: ಬೆಂಗಳೂರು ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಕೋಟೆ, ಟಿಪ್ಪು ಸುಲ್ತಾನ್ ಅವರ ಜನ್ಮಸ್ಥಳವಾಗಿ ಪ್ರಸಿದ್ಧ. ಪ್ರಾಚೀನ ವಾಸ್ತುಶಿಲ್ಪ ಮತ್ತು ಇತಿಹಾಸ ಪ್ರೇಮಿಗಳಿಗೆ ಇದು ಆಕರ್ಷಕ ತಾಣ.

ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ: ದೇವನಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ, ಕಾರ್ತಿಕೇಯ ಮತ್ತು ನರಸಿಂಹ ಸ್ವಾಮಿಯ ಅಪರೂಪದ ಮೂರ್ತಿ ಇಲ್ಲಿದೆ. ಹಾವು ದೋಷ ನಿವಾರಣೆ ಇದು ಪ್ರಸಿದ್ಧ.

ಚಿಕ್ಕ ಮಧುರೈ (ಚಿಕ್ಕಮಧುರೇಶ್ವರ ದೇವಸ್ಥಾನ): ಭಕ್ತರಿಗೆ ಅತ್ಯಂತ ಪವಿತ್ರವೆನಿಸಿರುವ ಚಿಕ್ಕ ಮಧುರೈ, ಮಧುರೈ ಮೀನಾಕ್ಷಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಿತ ದೇವಾಲಯ.

ಶನಿಮಹಾತ್ಮ ಸ್ವಾಮಿ ದೇವಸ್ಥಾನ: ಶನಿ ದೋಷ ನಿವಾರಣೆಗೆ ಪ್ರಸಿದ್ಧವಾದ ಈ ದೇವಸ್ಥಾನ ಗ್ರಾಮೀಣ ಭಕ್ತರಲ್ಲಿ ವಿಶೇಷ ನಂಬಿಕೆ ಹೊಂದಿದೆ.

ಶಿವಗಂಗೆ ಬೆಟ್ಟ: ಶಿವಗಂಗೆ, ಧಾರ್ಮಿಕ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೆ ಜನಪ್ರಿಯ ತಾಣ. ಬೆಟ್ಟದ ಮೇಲಿನಿಂದ ಕಾಣುವ ನೈಸರ್ಗಿಕ ದೃಶ್ಯ ಮನಸ್ಸಿಗೆ ಶಾಂತಿ ನೀಡುತ್ತದೆ.

ಹೊನ್ನಾದೇವಿ ದೇವಸ್ಥಾನ: ಗ್ರಾಮೀಣ ನಂಬಿಕೆ ಮತ್ತು ಶಕ್ತಿದೇವತೆ ಆರಾಧನೆಗೆ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನ, ಪ್ರವಾಸಕ್ಕೆ ಶಾಂತ ಅಂತ್ಯ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ