Smiley Moon : ಇಂದು ರಾತ್ರಿ ನಿಮ್ಮನ್ನು ನೋಡಿ ನಗ್ತಾನೆ ಚಂದ್ರ, ನೋಡಿ ನಾಚಿ ನೀರಾಗಬೇಡಿ
ಇಂದು ರಾತ್ರಿ ಆಕಾಶದಲ್ಲಿ ಚಂದ್ರ, ಶನಿ ಮತ್ತು ನೆಪ್ಚೂನ್‌ಗಳ ಅಪರೂಪದ ತ್ರಿವಳಿ ಸಂಯೋಗವನ್ನು ಕಾಣಬಹುದು. ಚಂದ್ರನ ಎರಡೂ ತುದಿಗಳಲ್ಲಿ ಗ್ರಹಗಳಿರುವುದರಿಂದ ಅದು ನಗುವಂತೆ ಗೋಚರಿಸುತ್ತದೆ. ಜನವರಿ 23 ರಂದು ಸೂರ್ಯಾಸ್ತದ ನಂತರ ಪಶ್ಚಿಮ ಆಕಾಶದಲ್ಲಿ ಇದನ್ನು ವೀಕ್ಷಿಸಬಹುದು. ಬರಿಗಣ್ಣಿನಿಂದ ಚಂದ್ರ ಮತ್ತು ಶನಿ ಕಾಣಿಸಿದರೂ, ನೆಪ್ಚೂನ್ ವೀಕ್ಷಣೆಗೆ ಬೈನಾಕ್ಯುಲರ್ ಅಗತ್ಯ. ಈ ಖಗೋಳ ಕೌತುಕವನ್ನು ನೋಡಲು ಮರೆಯಬೇಡಿ.

ಚಂದ್ರ(Moon)ನು ಸೃಷ್ಟಿಯ ಕುತೂಹಲಕಾರಿ ಗ್ರಹ. ಚಂದ್ರನನ್ನು ಅರ್ಥ ಮಾಡಿಕೊಳ್ಳುವುದು, ಆತನನ್ನು ನೋಡಿ ವರ್ಣಿಸಿದಷ್ಟು ಸುಲಭವಲ್ಲ. ಪ್ರತಿ ದಿನವೂ ಬೇರೆ ಬೇರೆ ರೀತಿಯಲ್ಲೇ ಕಾಣುತ್ತಾನೆ. ಚಂದ್ರ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಮಗುವನ್ನು ತೊಡೆಯ ಮೇಲೆ ಕೂರಿಸಿ ಊಟ ಮಾಡಿಸಲು ತಾಯಿಗೂ ಚಂದಮಾಮನೇ ಬೇಕು, ಪ್ರಿಯಕರನಿಗೆ ಪ್ರೇಯಸಿಯ ಬಣ್ಣ ವರ್ಣಿಸಲು ಈ ಚಂದ್ರನೇ ಬೇಕು. ಚಂದ್ರನನ್ನು ಇಷ್ಟಪಡದವರೇ ಇಲ್ಲ. ಆದರೆ ನೀವು ಚಂದ್ರನನ್ನು ಕಂಡು ನಕ್ಕಿದ್ದೀರಿ ಆದರೆ ಅವನು ನಕ್ಕಿರುವುದ ಕಂಡಿದ್ದೀರಾ.
ಹಾಗಾದರೆ ಇಂದು ನೋಡಲು ಮರೆಯದಿರಿ. ಚಂದ್ರ ಇಂದು ನಿಮ್ಮನ್ನು ನೋಡಿ ನಗ್ತಾನೆ, ಕಂಡು ನಾಚುವುದ ನೀವು ಮರೀಬೇಡಿ. ಇಂದು ರಾತ್ರಿ ಆಕಾಶದತ್ತ ನೋಡುವವರು ಚಂದ್ರ, ಶನಿ ಮತ್ತು ನೆಪ್ಚೂನ್‌ಗಳ ಅಪರೂಪದ ಸಂಯೋಗವನ್ನು ಕಾಣುತ್ತೀರಿ.
ಚಂದ್ರ ಅರ್ಧಾಕಾರದಲ್ಲಿ ಇರಲಿದ್ದು ಅವನ ಎರಡೂ ತುದಿಗಳಲ್ಲಿ ಎರಡು ಗ್ರಹಗಳಿರಲಿವೆ. ಅದು ಚಂದ್ರ ನಕ್ಕಂತೆಯೇ ಕಾಣುತ್ತದೆ. ವೀಕ್ಷಕರು ಚಂದ್ರ ಮತ್ತು ಶನಿ ಎರಡನ್ನೂ ಬರಿಗಣ್ಣಿನಿಂದ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ, ಆದರೆ ನೆಪ್ಚೂನ್ ಅನ್ನು ಸಹ ಗುರುತಿಸಲು ಬೈನಾಕ್ಯುಲರ್ ಅಥವಾ ದೂರದರ್ಶಕದ ಅಗತ್ಯ ಬೀಳಬಹುದು. ಅದು ಸ್ವಲ್ಪ ಮಸುಕಾಗಿ ಕಾಣುತ್ತದೆ.
ಮತ್ತಷ್ಟು ಓದಿ: Lunar Eclipse: ಚಂದ್ರ ಗ್ರಹಣ, ಬೆಂಕಿ ಚೆಂಡಿನಂತಾದ ಚಂದಿರ: ನಭೋ ಮಂಡಲಡದ ಅಪರೂಪದ ಚಮತ್ಕಾರ ಇಲ್ಲಿ ನೋಡಿ
ಭೂಮಿಯ ದೃಷ್ಟಿಕೋನದಿಂದ ಆಕಾಶದಲ್ಲಿ ಎರಡು ಅಥವಾ ಹೆಚ್ಚಿನ ಗ್ರಹಗಳು ಹತ್ತಿರದಲ್ಲಿ ಕಾಣಿಸಿಕೊಂಡಾಗ ಗ್ರಹಗಳ ಸಂಯೋಗ ಉಂಟಾಗುತ್ತದೆ. ಜನವರಿ 23 ರಂದು ನಿರೀಕ್ಷಿಸಲಾದ ತ್ರಿವಳಿ ಸಂಯೋಗವನ್ನು ಸೂರ್ಯಾಸ್ತದ ನಂತರ, ಪಶ್ಚಿಮ ಆಕಾಶದಲ್ಲಿ ಕಡಿಮೆ ಎತ್ತರದಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನ ಮತ್ತು ಖಗೋಳಶಾಸ್ತ್ರ ಹೇಳುತ್ತದೆ.
ಯಾವುದೇ ಮರಗಳು ಅಥವಾ ಕಟ್ಟಡಗಳು ನಿಮ್ಮ ದೃಷ್ಟಿಗೆ ಅಡ್ಡಿಯಾಗದಂತೆ ಸ್ಪಷ್ಟ ನೋಟವನ್ನು ಹೊಂದಿರುವ ಸ್ಥಳವನ್ನು ಹುಡುಕಲು ಪ್ರಯತ್ನಿಸಿ. ಚಂದ್ರನು ಶನಿ ಮತ್ತು ನೆಪ್ಚೂನ್ ಕೆಳಗೆ ನಿಧಾನವಾಗಿ ಬಾಗುತ್ತಾನೆ, ಅದು ನಗುಮುಖದಂತೆ ಕಾಣುತ್ತದೆ. ಚಂದ್ರನು ಇರುವ ನಕ್ಷತ್ರ ಹಾಗೂ ಆತನು ಸಂಚರಿಸುವ ದಿಕ್ಕಿನ ಮೇಲೆ ಕೆಲವು ಪರಿಣಾಮಗಳು ಆಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Fri, 23 January 26




