Alcohol: 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯಪಾನ ಸೇವನೆಯಿಂದ ಅಪಾಯ ಹೆಚ್ಚು

| Updated By: ನಯನಾ ರಾಜೀವ್

Updated on: Jul 15, 2022 | 3:39 PM

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯಪಾನದಿಂದ ಅಪಾಯ ಹೆಚ್ಚು ಎಂಬುದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ದೊಡ್ಡವರಿಗಿಂತ 40 ವರ್ಷದೊಳಗಿನವರೇ ಮದ್ಯಪಾನದಿಂದ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಾರೆ.

Alcohol: 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯಪಾನ ಸೇವನೆಯಿಂದ ಅಪಾಯ ಹೆಚ್ಚು
Alcohol
Follow us on

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯಪಾನದಿಂದ ಅಪಾಯ ಹೆಚ್ಚು ಎಂಬುದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ದೊಡ್ಡವರಿಗಿಂತ 40 ವರ್ಷದೊಳಗಿನವರೇ ಮದ್ಯಪಾನದಿಂದ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಾರೆ.  ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ಅಧ್ಯಯನದ ಪ್ರಕಾರ, ವಯಸ್ಕರಿಗಿಂತ ಯುವಜನತೆ ಆಲ್ಕೊಹಾಲ್ ಸೇವನೆಯಿಂದ ಹೆಚ್ಚಿನ ಆರೋಗ್ಯ ಅಪಾಯಗಳನ್ನು ಎದುರಿಸುತ್ತಾರೆ ಎಂಬುದು ತಿಳಿದುಬಂದಿದೆ.

ಈ ವರದಿಯು ಜಾಗತಿಕ ಆಲ್ಕೋಹಾಲ್ ಸೇವನೆಯ ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಶಿಫಾರಸುಗಳು ಮಾಡುತ್ತದೆ. 15-39 ವರ್ಷ ವಯಸ್ಸಿನ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಲಾಗಿದೆ.

ನಿಯಮಿತವಾಗಿ ಮದ್ಯಪಾನ ಮಾಡುವ 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯಗಳು ಕಡಿಮೆ ಇರುತ್ತವೆ.

ವಿಶ್ವಾದ್ಯಂತ 15-39 ವರ್ಷ ವಯಸ್ಸಿನ ಪುರುಷರು ಮದ್ಯಪಾನದಿಂದ ಯಾವುದೇ ಪ್ರಯೋಜನವನ್ನು ಪಡೆದಿಲ್ಲ ಬದಲಾಗಿ ಅಪಾಯವೇ ಹೆಚ್ಚಿದೆ ಎಂದು ಸಂಶೋಧನೆ ಹೇಳಿದೆ.

ಇವುಗಳಲ್ಲಿ ಶೇ.60ರಷ್ಟು ಮಂದಿ ಮದ್ಯಪಾನದ ಅಮಲಿನಲ್ಲಿ ವಾಹನ ಅಪಘಾತ, ಆತ್ಮಹತ್ಯೆ, ಕೊಲೆಯಂತಹ ಕೃತ್ಯಗಳಲ್ಲೂ ಭಾಗಿಯಾಗಿದ್ದಾರೆ.
ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನ ಮಾಡುವವರು ಆರೋಗ್ಯ ಪ್ರಯೋಜನವನ್ನು ಪಡೆಯಲಿದ್ದಾರೆ. ಮದ್ಯಪಾನದಿಂದ ಹೃದಯ ರಕ್ತನಾಳದ ಕಾಯಿಲೆ, ಕ್ಯಾನ್ಸರ್ ಸೇರಿದಂತೆ 22ಕ್ಕೂ ಹೆಚ್ಚಿನ ಆರೋಗ್ಯ ಪರಿಣಾಮಗಳುಂಟಾಗಲಿವೆ.

ವರದಿಯು ಕಡಿಮೆ ವಯಸ್ಸಿನವರು ಮದ್ಯಪಾನ ಸೇವನೆ ಮಾಡುವುದೇ ಬೇಡ, ಮಧ್ಯವಯಸ್ಕರು ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನ ಮಾಡುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದಾರೆ.

2020ರ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಡೇಟಾದಲ್ಲಿ ಮದ್ಯಪಾನ ಸೇವನೆ ಮಾಡುವವರು ಒಟ್ಟಾರೆಯಾಗಿ 22 ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೇಳಲಾಗಿತ್ತು ಅದರಲ್ಲಿ ಅಪಘಾತ, ಹೃದಯ, ಕರುಳಿನ ಸಮಸ್ಯೆಯೂ ಸೇರಿದೆ.