Yoga: ನೆನಪಿನ ಶಕ್ತಿ ಹಾಗೂ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುವ ಆಸನಗಳಿವು

ಯೋಗವು ವಯಸ್ಸು, ಲಿಂಗ ಎಲ್ಲವನ್ನೂ ಮೀರಿದ್ದು, ಬುದ್ಧಿ ಬಂದಾಗಿನಿಂದ ಕೈಕಾಲುಗಳಲ್ಲಿ ಶಕ್ತಿ ಇರುವವರೆಗೂ ಯೋಗವನ್ನು ಮಾಡಬಹುದು. ಈ ಯೋಗಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

Yoga: ನೆನಪಿನ ಶಕ್ತಿ ಹಾಗೂ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುವ ಆಸನಗಳಿವು
Vrikshasana
TV9kannada Web Team

| Edited By: Nayana Rajeev

Jul 16, 2022 | 8:30 AM

ಯೋಗವು ವಯಸ್ಸು, ಲಿಂಗ ಎಲ್ಲವನ್ನೂ ಮೀರಿದ್ದು, ಬುದ್ಧಿ ಬಂದಾಗಿನಿಂದ ಕೈಕಾಲುಗಳಲ್ಲಿ ಶಕ್ತಿ ಇರುವವರೆಗೂ ಯೋಗವನ್ನು ಮಾಡಬಹುದು. ಈ ಯೋಗಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲಿ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚಳ ಕೂಡ ಒಂದು. ಯೋಗಾಸನ, ಪ್ರಾಣಾಯಾಮ, ಧ್ಯಾನವು ಉಸಿರಾಟ ವ್ಯವಸ್ಥೆ, ಹೃದಯ ರಕ್ತನಾಳ, ಜೀರ್ಣಾಂಗ ವ್ಯವಸ್ಥೆ, ರಕ್ತ ಪರಿಚಲನಾ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಯೋಗವು ಕೌಶಲ್ಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಉತ್ಪಾದಕತೆಯ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಆಸನಗಳ ಅಭ್ಯಾಸವು ಏಕಾಗ್ರತೆ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಈ ಆಸನಗಳನ್ನು ಮಾಡುವುದರಿಂದ ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ವೃಕ್ಷಾಸನ: ವೃಕ್ಷಾಸನ ಮಾಡುವ ಬಗೆ -ಎರಡೂ ಕಾಲುಗಳನ್ನು ಒಂದೆಡೆ ಜೋಡಿಸಬೇಕು, ಎರಡೂ ಕೈಗಳು ತೊಡೆಯ ಪಕ್ಕ ನೇರವಾಗಿರಬೇಕು -ಬೆನ್ನು ನೇರವಾಗಿರಬೇಕು, ನೇರವಾಗಿ ನೋಡಬೇಕು, -ಬಲಗಾಲನ್ನು ಎಡ ತೊಡೆಗೆ ನಿಧಾನವಾಗಿ ಸೇರಿಸಬೇಕು -ಬಳಿಕ ಕೈಗಳನ್ನು ಮೇಲಕ್ಕೆ ಎತ್ತರವಾಗಿಸಬೇಕು, ನಮಸ್ಕಾರ ಸ್ಥಿತಿಯಲ್ಲಿರಲಿ, ನಿಮ್ಮ ತೋಳುಗಳು ಕಿವಿಗಳಿಗೆ ತಾಗಬೇಕು, ಮುಖದಲ್ಲಿ ಮಂದಹಾಸ ಇರಬೇಕು, ಒಂದು ಕಡೆ ನೋಡುತ್ತಿರಬೇಕು. -ನಿಧಾನವಾಗಿ ಕೈಗಳನ್ನು ನಿಧಾನವಾಗಿ ಕೆಳಗೆ ಇಳಿ ಬಿಡುತ್ತಾ, ಕಾಲನ್ನು ಸಹಜ ಸ್ಥಿತಿಗೆ ತರಬೇಕು.

ವೃಕ್ಷಾಸನದ ನಿಯಮಿತ ಅಭ್ಯಾಸದಿಂದ, ಕೈಕಾಲು, ತೊಡೆಗಳು, ಕರುಳು, ಪಕ್ಕೆಲುಬುಗಳು ಬಲಗೊಳ್ಳುತ್ತವೆ. ನೀವು ದೇಹವನ್ನು ಸಮತೋಲನಗೊಳಿಸಿದಾಗ, ನೀವು ಮನಸ್ಸನ್ನು ಕೇಂದ್ರೀಕರಿಸಲು ಪ್ರೇರೇಪಿಸುತ್ತದೆ. -ವೃಕ್ಷಾಸನ ಬೆನ್ನುಮೂಳೆಯನ್ನು ಬಲಪಡಿಸುತ್ತದೆ.

– ಪಾದಗಳ ಅಸ್ಥಿರಜ್ಜುಗಳು ಮತ್ತು ಸ್ನಾಯುರಜ್ಜುಗಳನ್ನು ಬಲಪಡಿಸುತ್ತದೆ.

-ಮೊಣಕಾಲುಗಳು ಬಲವಾಗಿರುತ್ತವೆ ಮತ್ತು ಸೊಂಟದ ಕೀಲುಗಳು ಸಡಿಲವಾಗಿರುತ್ತವೆ.

-ಕಣ್ಣುಗಳು, ಒಳ ಕಿವಿ ಮತ್ತು ಭುಜಗಳು ಸಹ ಬಲಗೊಳ್ಳುತ್ತವೆ.

– ದೇಹದಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

– ನರ-ಸ್ನಾಯುಗಳ ನಡುವಿನ ಸಂಪರ್ಕವನ್ನು ಬಲವಾಗಿಸುತ್ತದೆ

-ವೃಕ್ಷಾಸನವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಗೊಂದಲಗಳನ್ನು ನಿವಾರಿಸುತ್ತದೆ. ಆರಂಭದಲ್ಲಿ, ನೀವು ವೃಕ್ಷಾಸನವನ್ನು ಮಾಡಲು ಕಷ್ಟವಾಗಬಹುದು. ಏಕೆಂದರೆ ನೀವು ನಿಮ್ಮ ಎಡ ಪಾದವನ್ನು ತೊಡೆಯ ಸಂಧಿಯಲ್ಲಿ ಇರಿಸುವುದು ಕಷ್ಟವಾದರೆ ಮೊಣಕಾಲಿನ ಮೇಲೆ ಖಂಡಿತವಾಗಿಯೂ ಪಾದವನ್ನು ಇರಿಸಬೇಡಿ, ಅದರ ಬದಲು ಗೋಡೆ ಸಹಾಯ ಪಡೆಯಿರಿ.

ಪಶ್ಚಿಮೋತ್ತಾಸನ ಪಶ್ಚಿಮೋತ್ತಾಸನ ನೆಲದಮೇಲೆ ಕುಳಿತು ಮುಂದಕ್ಕೆ ಬಾಗಿ ಮಾಡುವ ಆಸನ. ಈ ಆಸನದಿಂದ ಬೆನ್ನು ಮತ್ತು ಸೊಂಟದ ಭಾಗಗಳಿಗೆ ಹೆಚ್ಚಿನ ವ್ಯಾಯಾಮ ಸಿಕ್ಕಿ ಆ ಭಾಗಕ್ಕೆ ರಕ್ತ ಸಂಚಾರ ಉತ್ತಮಗೊಳ್ಳಲು ಸಹಾಯಕಾರಿಯಾಗುತ್ತದೆ.

ಮಾಡುವ ವಿಧಾನ:

-ನಿಮ್ಮ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನದಲ್ಲಿ ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಿ.

-ನಿಮ್ಮ ಎರಡು ಹಸ್ತ ಪ್ರಷ್ಠದ ಬದಿಗಿರಿಸಿ. ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎರಡು ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆತ್ತಿ. -ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಧಾನವಾಗಿ ಮುಂದಕ್ಕೆ ಬಾಗಿ ಕೈ ಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ಮೊಣಕಾಲು ನೇರವಾಗಿರಲಿ.

-ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾಗಿ ಉಸಿರಾಟ ಮಾಡಿ. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ನಿಧಾನವಾಗಿ ಮೇಲಕ್ಕೆ ಬನ್ನಿ.

-ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಧಾನವಾಗಿ ಕೈಯನ್ನು ಕೆಳಗೆ ಇಳಿಸಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ.

ಬಕಾಸನ: ಈ ಆಸನವನ್ನು ಸಾಮಾನ್ಯವಾಗಿ ಎರಡು ವಿಧವಾಗಿ ಮಾಡಬಹುದು:

-ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಎರಡೂ ಕೈಗಳನ್ನು ಶರೀರದ ಮುಂದೆ ಒಂದೂವರೆಯಿಂದ ಎರಡು ಅಡಿ ಅಂತರದಲ್ಲಿ ಊರಬೇಕು. ಹಾಗೆ ಊರಿದ ಕೈಗಳ ಮೇಲೆ ತನ್ನ ಶರೀರವನ್ನು ಚಿತ್ರದಲ್ಲಿ ತೋರಿಸುವಂತೆ ಸಮತೋಲನದಲ್ಲಿ ನಿಲ್ಲಿಸಿಕೊಳ್ಳಬೇಕು. ಹೀಗೆ ಸಮತೋಲನದ ಸ್ಥಿತಿಯಲ್ಲಿ ನಮ್ಮ ಕಾಲಿನ ಮಂಡಿಗಳು ಕಂಕಳುಗಳು ಪಕ್ಕದಲ್ಲಿ ಇರಬೇಕು.

ಮೊದಲು ಶೀರ್ಷಾಸನ ಮಾಡಿ, ಆ ಸ್ಥಿತಿಯಲ್ಲೇ ಪದ್ಮಾಸನ ಹಾಕಬೇಕು. ಅನಂತರ ಪದ್ಮಾಸನದ ಆ ಸ್ಥಿತಿಯಲ್ಲೇ ಎದೆಗೆ ಎರಡೂ ಕಾಲಿನ ಮಂಡಿಗಳು ತಗಲುವಂತೆ ಶರೀರವನ್ನು ಮುಂದಕ್ಕೆ ಬಗ್ಗಿಸಬೇಕು. ಒಮ್ಮೆ ಈ ಸ್ಥಿತಿಯಲ್ಲಿ ಸಮತೋಲನ ಪಡೆದ ನಂತರ ನಿಧನವಾಗಿ ತಲೆಯನ್ನು ನೆಲದಿಂದ ಮೇಲಕ್ಕೆತ್ತಬೇಕು. ಈ ಸ್ಥಿತಿಯಲ್ಲಿ ಎಂದೂ ಸಮತೋಲನ ಕಳೆದುಕೊಳ್ಳಬಾರದು –ಮತ್ತು ಈ ಸ್ಥಿತಿಯಲ್ಲೇ ನಿಧನವಾಗಿ ಉಸಿರಾಡಬೇಕು. ಆಸನದ ಅವಧಿ ಒಂದರಿಂದ ಒಂದೂವರೆ ನಿಮಿಷ.

ಲಾಭಗಳು: ಕೈಕಾಲುಗಳು ಶಕ್ತವಾಗುವುವು. ಬೆನ್ನಲುಬು ಚೆನ್ನಾಗಿ ಹಿಗ್ಗುವುದು. ಕಿಬ್ಬೊಟ್ಟೆಯ ಎಲ್ಲ ಅಂಗಗಳೂ ಸಬಲವಾಗುವುವು. ಎದೆಯಿಂದ ಕತ್ತಿನವರೆಗಿನ ಎಲ್ಲ ಅವಯವಗಳೂ ಚಟುವಟಿಕೆ ಪಡೆಯುವವು.

ಸರ್ವಾಂಗಾಸನದಲ್ಲಿ ನಿರಾಲಂಬ ಸರ್ವಾಂಗಾಸನ, ಸಾಲಂಬಗಾಸನ, ಏಕಪಾಸ ಸರ್ವಾಂಗಸನ ಎಂಬ ಪ್ರಭೇದಗಳು ಇವೆ. ಈ ಆಸನದ ಅಭ್ಯಾಸವು ಶರೀರದ ಎಲ್ಲ ಅಂಗಗಳಿಗೂ ವ್ಯಾಯಾಮ ನೀಡುತ್ತದೆ. ಆದ್ದರಿಂದ ಸರ್ವಾಂಗಾಸನ ಎನ್ನುವ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ.

ಮಾಡುವ ಕ್ರಮ : -ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತವಾಗಿ, ನೇರವಾಗಿ ಮಲಗಬೇಕು. -ಅನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಏಕಕಾಲದಲ್ಲಿ (ಉತ್ಥಿತ ಪಾದಾಸನದಂತೆ) ಮೇಲಕ್ಕೆ ಎತ್ತಬೇಕು. -ಅನಂತರ ಉತ್ಥಿತ ಪಾದಾಸನದಲ್ಲಿ ಲಂಬವಾಗಿದ್ದ ಕಾಲುಗಳನ್ನು ತಲೆಯ ಕಡೆಗೆ ಆದಷ್ಟೂ ಬಗ್ಗಿಸಬೇಕು. -ಸೊಂಟಕ್ಕೆ ಎರಡೂ ಕೈಗಳಿಂದ ಬಲವಾದ ಆಧಾರವನ್ನು ನೀಡಿ ಪುನಃ ಕಾಲುಗಳನ್ನು ಚಿತ್ರದಲ್ಲಿ ತೋರಿಸುವಂತೆ ಭೂಮಿಗೆ ಲಂಬವಾಗಿ ನಿಲ್ಲಿಸಬೇಕು. ಈ ಸ್ಥಿತಿಯಲ್ಲಿ ಸಮತೋಲನ ಪಡೆದುಕೊಂಡಲ್ಲಿ ಮಾತ್ರ ಮುಂದಿನ ಪ್ರಭೇದಗಳನ್ನು ಮಾಡಲು ಸಾಧ್ಯವಾಗುವುದು. ಕತ್ತು, ಹೆಗಲು ಮತ್ತು ಮೊಣಕೈವರೆಗಿನ ತೋಳುಗಳು ಮಾತ್ರ ಈ ಆಸನದಲ್ಲಿ ಭೂಮಿಯ ಮೇಲಿರುತ್ತವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada