ನೀವು ಬೆಳಗ್ಗಿನ ಉಪಹಾರದ ಬಗ್ಗೆ ಯೋಚಿಸಿದಾಗ, ದಕ್ಷಿಣ ಭಾರತದ ಭಕ್ಷ್ಯಗಳು ತಕ್ಷಣವೇ ನೆನಪಿಗೆ ಬರುತ್ತವೆ. ಇಡ್ಲಿ, ದೋಸೆ ಮತ್ತು ಅಪ್ಪಮ್‌ಗಳು ದೇಶದಾದ್ಯಂತ ಆಹಾರ ಪ್ರಿಯರ ಜನಪ್ರಿಯ ಆಯ್ಕೆಯಾಗಿದೆ. ಕಾಲಾನಂತರದಲ್ಲಿ ಈ ಕ್ಲಾಸಿಕ್ ಭಕ್ಷ್ಯಗಳು ಹಲವಾರು ರೂಪಾಂತರಗಳಿಗೆ ಒಳಗಾಗಿವೆ. ಈ ಕೆಲವು ರೂಪಾಂತರಗಳು ಜನಪ್ರಿಯವಾದರೆ, ಇನ್ನು ಕೆಲವು ಆಹಾರ ಪ್ರಿಯರನ್ನು ಮೆಚ್ಚಿಸಲು ವಿಫಲವಾಗಿದೆ. ಇದಕ್ಕೆ ಒಂದು ನಿದರ್ಶನವೆಂದರೆ ಲಾವಾ ಇಡ್ಲಿ. ಇದು ಪ್ರಸ್ತುತ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಭಕ್ಷ್ಯವಾಗಿದೆ.
ಇದು ಇಡ್ಲಿ ಮತ್ತು ಗೋಲ್ಗಪ್ಪಗಳ ಸಂಯೋಜನೆಯಾಗಿದೆ. ಈ ಪಾಕವಿಧಾನವನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಗ್ರೀಸ್ ಮಾಡಿದ ಅಚ್ಚುಗಳು ಅಥವಾ ಬಟ್ಟಲುಗಳಿಗೆ ಇಡ್ಲಿ ಹಿಟ್ಟನ್ನು ಸೇರಿಸಿ ನಂತರ ಸಾಂಬರ್‌ನಿಂದ ತುಂಬಿಸಿದ ಗೊಲ್ಗಪ್ಪವನ್ನು ಅದರ ಮಧ್ಯ ಹಾಕಿ ಅದರ ಮೇಲೆ ಮತ್ತೊಮ್ಮೆ ಹಿಟ್ಟನ್ನು ಸುರಿಯಲಾಗುತ್ತದೆ. ಹೀಗೆ ಮಾಡಿಟ್ಟ ಲಾವಾ ಇಡ್ಲಿಯನ್ನು 8 ರಿಂದ 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಲಾಗುತ್ತದೆ.
Whoever has done this to idli deserves punishment of highest order….??
There is no justice done to idli or to golgappa ….#idli pic.twitter.com/quPTnb134n
— TurtleQuants (@TurtleQuants) January 21, 2023
ಇದನ್ನು ಓದಿ: Food Cravings: ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ಈ ಒಂದು ಭಕ್ಷ್ಯವು ಆಹಾರಪ್ರಿಯರನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಈ ಲಾವಾ ಇಡ್ಲಿ ರೆಸಿಪಿಗೆ ಟೀಕೆಯನ್ನು ಮಾಡಿದ್ದಾರೆ. ಒಬ್ಬ ಸಾಮಾಜಿಕ ಬಳಕೆದಾರ ‘ಈ ಇಡ್ಲಿಯನ್ನು ಯಾರು ಮಾಡಿದ್ದಾರೋ ಅವರು ಶಿಕ್ಷೆಗೆ ಅರ್ಹರು. ಇಲ್ಲಿ ಇಡ್ಲಿಗೆ ಅಥವಾ ಗೋಲ್ಗಪ್ಪಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಟೀಕೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಲಾವಾ ಇಡ್ಲಿ ವಿಡಿಯೋವನ್ನು ಶೇರ್ ಮಾಡುತ್ತಾ ‘ನನ್ನೊಳಗೆ ಏನೋ ಸತ್ತು ಹೋಯಿತು’ ಎಂದು ಹೇಳಿದ್ದಾರೆ. ಹೀಗೆ ಈ ಲಾವಾ ಇಡ್ಲಿ ಅನೆಕ ಜನರ ಟೀಕೆಗೆ ಗುರಿಯಾಗಿದೆ. ಆಹಾರ ಪ್ರಿಯರನ್ನು ಮೆಚ್ಚಿಸುವಲ್ಲಿ ಈ ಭಕ್ಷ್ಯ ವಿಫಲವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Tue, 31 January 23