TV9 Kannada Lifestyle Have you ever tasted Malenadu's special Halbai ? Learn how to make this delicious sweet for Nagar Panchami 2023
ಮಲೆನಾಡಿನ ಹಾಲ್ಬಾಯಿ ಎಂದಾದರು ಸವಿದಿದ್ದಿರಾ? ನಾಗರ ಪಂಚಮಿಗೆ ಈ ರುಚಿಯಾದ ಸಿಹಿ ತಿಂಡಿ ಮಾಡುವುದು ಹೇಗೆ ಎಂದು ತಿಳಿಯಿರಿ
ಹಾಲ್ಬಾಯಿ ತುಂಬಾ ಆರೋಗ್ಯಕರ ಸಿಹಿ ತಿಂಡಿಯಾಗಿದ್ದು, ಇದನ್ನು ಸಾಮಾನ್ಯವಾಗಿ ನಾಗರ ಪಂಚಮಿ ಹಬ್ಬಕ್ಕೆ ತಯಾರಿಸಲಾಗುತ್ತದೆ. ಈ ರೀತಿಯ ಹಾಲ್ಬಾಯಿ ಕರ್ನಾಟಕದ ಉಡುಪಿ, ಮಂಗಳೂರು ಮತ್ತು ಮಲೆನಾಡು ಪ್ರದೇಶದಾದ್ಯಂತ ತಯಾರಿಸುತ್ತಾರೆ.
ಹಾಲ್ಬಾಯಿ
ನಯನಾ ಎಸ್ಪಿ
Updated on:
Aug 20, 2023 | 6:18 AM
ಹಾಲ್ಬಾಯಿ (Halbai Recipe) ಒಂದು ರುಚಿಕರ ಸಿಹಿ ತಿಂಡಿಯಾಗಿದ್ದು ಅನ್ನ, ಬೆಲ್ಲ ಮತ್ತು ತೆಂಗಿನಕಾಯಿ ಬಳಸಿ ತಯಾರಿಸಲಾದ ಅಕ್ಕಿ ಹಲ್ವಾ ಎಂದರೆ ತಪ್ಪಾಗಲಾರದು. ಈ ಹಾಲು ಬಾಯಿ ಅಥವಾ ಹಾಲ್ಬಾಯಿ ಪಾಕವಿಧಾನದಲ್ಲಿ ಸ್ವಲ್ಪ ಸೌತೆಕಾಯಿಯನ್ನು ಸೇರಿಸಿದರೆ ಇದು ಇನ್ನಷ್ಟು ರುಚಿಕರವಾಗಿರುತ್ತದೆ. ಹಾಲ್ಬಾಯಿ ತುಂಬಾ ಆರೋಗ್ಯಕರ ಸಿಹಿ ತಿಂಡಿಯಾಗಿದ್ದು, ಇದನ್ನು ಸಾಮಾನ್ಯವಾಗಿ ನಾಗರ ಪಂಚಮಿ ಹಬ್ಬಕ್ಕೆ ತಯಾರಿಸಲಾಗುತ್ತದೆ. ಈ ರೀತಿಯ ಹಾಲ್ಬಾಯಿ ಕರ್ನಾಟಕದ ಉಡುಪಿ, ಮಂಗಳೂರು ಮತ್ತು ಮಲೆನಾಡು ಪ್ರದೇಶದಾದ್ಯಂತ ತಯಾರಿಸುತ್ತಾರೆ. ಇದು ತುಂಬಾ ಆರೋಗ್ಯಕರ ಸಿಹಿ ತಿಂಡಿಯಾಗಿದೆ ಮತ್ತು ಮಕ್ಕಳಿಗೆ ತುಂಬಾ ಒಳ್ಳೆಯದು.
ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಸಕ್ಕರೆಯೊಂದಿಗೆ ಮಾಡಲಾಗುತ್ತದೆ ಅಥವಾ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ ಅಥವಾ ಮೈದಾ ಅಥವಾ ಡೀಪ್ ಫ್ರೈಗೆ ಎಣ್ಣೆ ಬಳಸಿ ತಯಾರಿಸಲಾಗುತ್ತದೆ. ಆದರೆ ಈ ಸಿಹಿತಿಂಡಿಯನ್ನು ಅಕ್ಕಿ, ಬೆಲ್ಲ ಮತ್ತು ಕಡಿಮೆ ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ. ಆದ್ದರಿಂದ ಯಾರುಬೇಕಾದರು ಈ ಅಕ್ಕಿ ಹಲ್ವಾವನ್ನು ಯಾವುದೇ ಹಿಂಜರಿಕೆಯಿಲ್ಲದೆ ಆನಂದಿಸಬಹುದು.
ಇದೊಂದು ಸುಲಭದ ರೆಸಿಪಿ ಹೌದು. ಆದರೆ, ತಳ ಹಿಡಿಯದಂತೆ ತುಂಬಾ ಹೊತ್ತು ಕಾಯಿಸುತ್ತಿರಬೇಕಾಗಿ ಬರುವುದು ಸ್ವಲ್ಪ ತ್ರಾಸದಾಯಕ ಕೆಲಸವಾಗಿದೆ. ಈ ಪಾಕ ದಪ್ಪಗಾದಾಗ ಬೆರೆಸಲು ಅಥವಾ ಮಿಶ್ರಣ ಮಾಡಲು ನೀವು ಸ್ವಲ್ಪ ಹೆಚ್ಚುವರಿ ಶಕ್ತಿಯನ್ನು ಹಾಕಬೇಕಾಗುತ್ತದೆ.