LED Light Therapy: ಎಲ್ಇಡಿ ಲೈಟ್ ಥೆರಪಿ ಎಂದರೇನು? ಚರ್ಮದ ಸಮಸ್ಯೆಗಳಿಗೆ ಇದರಿಂದ ಪರಿಹಾರ ಉಂಟಾ! ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 11, 2022 | 8:00 AM

ಈ ಚಿಕಿತ್ಸೆಯಲ್ಲಿ ಬೆಳಕಿನ ವಿವಿಧ ತರಂಗಾಂತರಗಳನ್ನು ಬಳಸಲಾಗುತ್ತದೆ. ಇದನ್ನು ಮಾಡುವುದರಿಂದ ಚರ್ಮದ ನೈಸರ್ಗಿಕ ಚಿಕಿತ್ಸೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತಿದೆ.

LED Light Therapy: ಎಲ್ಇಡಿ ಲೈಟ್ ಥೆರಪಿ ಎಂದರೇನು? ಚರ್ಮದ ಸಮಸ್ಯೆಗಳಿಗೆ ಇದರಿಂದ ಪರಿಹಾರ ಉಂಟಾ! ಇಲ್ಲಿದೆ ಮಾಹಿತಿ
LED Light Therapy (ಸಂಗ್ರಹ ಚಿತ್ರ)
Follow us on

ಮೊಡವೆ ಮತ್ತು ಸನ್ ಬರ್ನ್​​ನಂತಹ ಚರ್ಮದ ಸಮಸ್ಯೆಗಳಿಗೆ ಈಗ ಎಲ್ ಇಡಿ ಲೈಟ್ ಥೆರಪಿ (LED Light Therapy) ಯನ್ನು ಬಳಸಲಾಗುತ್ತಿದೆ. ಈ ಎಲ್ಇಡಿ ಲೈಟ್ ಥೆರಪಿ ಮಾಡಿಸಲು ನೀವು ಚರ್ಮರೋಗ (Skin) ವೈದ್ಯರ ಸಹಾಯ ಪಡೆದುಕೊಳ್ಳಬೇಕು. ವೈದ್ಯರ ಸಲಹೆಯ ಮೇರೆಗೆ ಇದನ್ನು ಮನೆಯಲ್ಲಿಯೂ ಬಳಸಬಹುದು. ಈ ಚಿಕಿತ್ಸೆಯಲ್ಲಿ ಬೆಳಕಿನ ವಿವಿಧ ತರಂಗಾಂತರಗಳನ್ನು ಬಳಸಲಾಗುತ್ತದೆ. ಇದನ್ನು ಮಾಡುವುದರಿಂದ ಚರ್ಮದ ನೈಸರ್ಗಿಕ ಚಿಕಿತ್ಸೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಎಲ್ ಇಡಿ ಲೈಟ್ ಥೆರಪಿ ಎಂದರೇನು ಈ ಲೇಖನದಲ್ಲಿ ತಿಳಿಯೋಣ.

ಎಲ್ಇಡಿ ಲೈಟ್ ಥೆರಪಿ ಎಂದರೇನು? 

ಎಲ್ಇಡಿಯ ವಿಸ್ತೃತ ರೂಪ ಲೈಟ್ ಎಮಿಟಿಂಗ್ ಡಯೋಡ್. ಎಲ್ಇಡಿ ದೀಪಗಳು ಸುಮಾರು ವರ್ಷಗಳಿಂದಲೂ ಇವೆ. ಆದರೆ ಎಲ್​ಇಡಿ ಲೈಟ್ ಥೆರಪಿ ಮೂಲಕ ಸ್ಕಿನ್ ಟ್ರೀಟ್ ಮೆಂಟ್ ಆರಂಭಿಸಿ ಕೆಲವೇ ದಿನಗಳಾಗಿವೆ. ಎಲ್ಇಡಿ ಲೈಟ್​ಗಳು ಗಾಯವನ್ನು ಗುಣಪಡಿಸಲು ಮತ್ತು ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎಲ್ಇಡಿ ಲೈಟ್​ಗಳು ತರಂಗಾಂತರಗಳು ವಿವಿಧ ಆಳಗಳಿಂದ ಚರ್ಮವನ್ನು ಭೇದಿಸುತ್ತವೆ. ಅವು ನೀಲಿ ಮತ್ತು ಕೆಂಪು ಬೆಳಕನ್ನು ಹೊಂದಿರುತ್ತವೆ.

ಚಿಕಿತ್ಸೆ ಹೇಗೆ? 

ಚರ್ಮಕ್ಕಾಗಿ ಎಲ್ಇಡಿ ಬೆಳಕಿನ ಚಿಕಿತ್ಸೆಯನ್ನು ವೃತ್ತಿಪರರು ಅಥವಾ ಮನೆಯಲ್ಲಿ ಬಳಸುವ ಸಾಧನವನ್ನು ಬಳಸಬಹುದು. ಪ್ರತಿ ಚಿಕಿತ್ಸೆ ಸುಮಾರು 20 ನಿಮಿಷಗಳವರೆಗೆ ಇರುತ್ತದೆ. ಗರಿಷ್ಠ 10 ಸೆಷನ್‌ಗಳ ಅಗತ್ಯವಿದೆ. ಎಲ್ಇಡಿ ಬೆಳಕಿನ ಚಿಕಿತ್ಸೆಯನ್ನು ವ್ಯಕ್ತಿಯ ಮುಖ, ಕೈ ಮತ್ತು ಕುತ್ತಿಗೆಗೆ ನೀಡಲಾಗುತ್ತದೆ.

ಎಲ್ಇಡಿ ಲೈಟ್ ಥೆರಪಿ ಸುರಕ್ಷಿತವೇ?

ಎಲ್ಇಡಿ ಲೈಟ್ ಥೆರಪಿ ಸುರಕ್ಷಿತವಾಗಿದೆಯೇ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಎಲ್​ಇಡಿ ಲೈಟ್ ಥೆರಪಿ ಚರ್ಮಕ್ಕೆ ಸುರಕ್ಷಿತ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಎಲ್ಇಡಿ ಲೈಟಿಂಗ್ ಸಾಧನಗಳ ದೀರ್ಘಕಾಲೀನ ಪರಿಣಾಮಗಳು ತಿಳಿಯಬೇಕಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಆದಾಗ್ಯೂ, ಕೆಲವು ಜನರು ಉರಿಯೂತ, ದದ್ದು ಮತ್ತು ಚರ್ಮದ ಕೆಂಪು ಬಣ್ಣಗಳಂತಹ ಅಡ್ಡಪರಿಣಾಮಗಳನ್ನು ಅನುಭವಿಸಬಹುದು ಎಂದು ತಜ್ಞರು ಹೇಳುತ್ತಾರೆ.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.