Love Tips : ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಳ್ಳುವ ಭಯವೇ? ಈ ಕೆಲಸ ಮಾಡಿ
ಪ್ರೀತಿ ಅಂದ್ರೇನೆ ಹಾಗೆ, ಪ್ರೀತಿ ಹುಟ್ಟಲು ಕಾರಣವೇ ಬೇಕಿಲ್ಲ. ಆದರೆ ಈಗಿನ ಕಾಲದಲ್ಲಿ ಈ ಪ್ರೀತಿ ಪ್ರೇಮಕ್ಕೆ ಗ್ಯಾರಂಟಿ ಹಾಗೂ ವ್ಯಾರಂಟಿ ಅನ್ನೋದೇ ಇಲ್ಲ. ಪ್ರೀತಿಸುವ ವ್ಯಕ್ತಿಗಳಿಬ್ಬರೂ ಸಣ್ಣ ಪುಟ್ಟ ವಿಚಾರಗಳಿಗೂ ಬ್ರೇಕಪ್ ಮಾಡಿಕೊಂಡು ದೂರವಾಗುವುದು ಸರ್ವೇ ಸಾಮಾನ್ಯವಾಗಿದೆ. ನಿಮ್ಮ ಸಂಗಾತಿಯು ನಿಮಗೆ ಕೈಕೊಡುತ್ತಾರೆ ಎನ್ನುವ ಭಯವು ಕಾಡುತ್ತಿದ್ದರೆ ನೀವು ಈ ರೀತಿಯ ನಡವಳಿಕೆಯನ್ನು ರೂಢಿಸಿಕೊಳ್ಳುವುದನ್ನು ಮರೆಯದಿರಿ.
ಸಾಂದರ್ಭಿಕ ಚಿತ್ರ
Follow us on
ಪ್ರೀತಿ ಎನ್ನುವುದು ಮಧುರವಾದ ಭಾವನೆ, ಎರಡು ಮನಸ್ಸುಗಳ ಸಮ್ಮಿಲನ. ಆದರೆ ಈಗಿನ ಕಾಲದಲ್ಲಿ ಪರಿಶುದ್ಧ ಪ್ರೀತಿಯನ್ನು ನೋಡೋದೇ ಕಷ್ಟ. ಹೀಗಾಗಿ ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ನೀನಿಲ್ಲದೇ ಹೋದರೆ ಇನ್ನೊಬ್ಬರು ಎನ್ನುವ ಮನೋಭಾವವು ಎಲ್ಲರಲ್ಲೂ ಬೆಳೆದಿದೆ. ಹೀಗಾಗಿ ಪರಿಶುದ್ಧವಾಗಿ ಪ್ರೀತಿಸುವವರಿಗೆ ತಾನು ಪ್ರೀತಿಯಲ್ಲಿ ಮೋಸ ಹೊಂದಿದ್ದರೆ, ಪ್ರೇಮಿಯು ಕೈಕೊಟ್ಟರೆ ಎನ್ನುವ ಭಯವು ಕಾಡುವುದು ಸಹಜ. ಹೀಗಾಗಿ ಸಂಬಂಧವು ಗಟ್ಟಿಯಗಬೇಕೆಂದರೆ ವ್ಯಕ್ತಿಗಳಿಬ್ಬರೂ ಈ ಕೆಲವು ವಿಷಯಗಳ ಬಗ್ಗೆ ಗಮನ ಕೊಡುವುದು ಮುಖ್ಯ.
ಒಟ್ಟಿಗೆ ಸಮಯ ಕಳೆಯುವ ಅಭ್ಯಾಸವಿರಲಿ : ಸಂಗಾತಿಗಳಿಬ್ಬರೂ ಜೊತೆಗೆ ಇರುವುದು ಕೂಡ ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಬಿಡುವು ಸಿಕ್ಕಾಗಲೆಲ್ಲಾ ಲಾಂಗ್ ಡ್ರೈವ್, ಪ್ರವಾಸ ಹೀಗೆ ಒಟ್ಟಿಗೆ ಸಮಯ ಕಳೆಯಲು ಪ್ರಯತ್ನಿಸುವುದು ಒಳ್ಳೆಯ ಅಭ್ಯಾಸವಾಗಿದೆ. ಇದು ಬಂಧವನ್ನು ಗಟ್ಟಿಗೊಳಿಸಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರೀತಿಯನ್ನು ಸದಾ ಜೀವಂತವಾಗಿರಿಸಿ : ಪ್ರತಿಯೊಂದು ಸಂಬಂಧದಲ್ಲಿ ಪ್ರೀತಿಯಿದ್ದರೆ ಸಾಲದು ಅದನ್ನು ಜೀವಂತವಾಗಿರಿಸುವುದನ್ನು ತಿಳಿದಿರಬೇಕು. ಸಂಗಾತಿಗೆ ಇಷ್ಟವಾಗುವ ಸ್ಥಳಕ್ಕೆ ಕರೆದುಕೊಂಡು ಹೋಗುವುದು, ಇಲ್ಲದಿದ್ದರೆ ಏನಾದರೂ ಉಡುಗೊರೆ ನೀಡುವ ಮೂಲಕ ಸರ್ಪ್ರೈಸ್ ನೀಡುವುದು ಕೂಡ ಆತ್ಮೀಯತೆಯನ್ನು ಹೆಚ್ಚಿಸುತ್ತದೆ. ಈ ರೀತಿ ಪ್ರೀತಿಯನ್ನು ಜೀವಂತವಾಗಿರಿಸಿಕೊಳ್ಳಬೇಕು.
ಪ್ರೀತಿಯಲ್ಲಿ ಸ್ವಾತಂತ್ರ್ಯವಿರಲಿ : ಯಾವುದೇ ಸಂಬಂಧವಿರಲಿ ಉಸಿರುಗಟ್ಟಿಸುವಂತೆ ಇರಬಾರದು. ಈ ವೇಳೆಯಲ್ಲಿ ಸಂಬಂಧವು ಹೆಚ್ಚು ದಿನ ಉಳಿಯಲಾರದು. ಸಂಗಾತಿಗೆ ಸ್ವಾತಂತ್ರ್ಯ ಕೊಡುವುದು ಮುಖ್ಯ. ಪ್ರತಿಯೊಂದಕ್ಕೂ ಪ್ರಶ್ನೆ ಮಾಡುವುದು ಎಂದು ಕೇಳುವುದರಿಂದ ಪ್ರೀತಿ ಬ್ರೇಕಪ್ ಆಗಬಹುದು. ಹೀಗಾಗಿ ಪ್ರೀತಿಸುವ ವ್ಯಕ್ತಿಗೆ ಸ್ವಾತಂತ್ರ ನೀಡಿ, ಅವರಿಷ್ಟದ ಕೆಲಸ ಮಾಡಲು ಬಿಡುವುದರಿಂದಡುವುದರಿಂದ ಒಬ್ಬರ ಮೇಲಿನ ಗೌರವ ಹೆಚ್ಚಾಗಿ ಬಾಂಧವ್ಯವು ಗಟ್ಟಿಯಾಗುತ್ತದೆ.
ಸಣ್ಣ ಪುಟ್ಟ ವಿಷಯಕ್ಕೆ ಅಭಿನಂದಿಸಿ ಸಲ್ಲಿಸುವ ಅಭ್ಯಾಸವಿರಲಿ : ಪ್ರೀತಿ ಎಂದರೆ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿ ಒಲವು ತೋರಿಸುವುದಲ್ಲ. ಕೆಲವೊಮ್ಮೆ ಸಂಗಾತಿಯ ಸಣ್ಣ ಪುಟ್ಟ ಕೆಲಸಗಳನ್ನು ಮನಸಾರೆ ಅಭಿನಂದಿಸುವುದು ಕೂಡ ಪ್ರೀತಿಯನ್ನು ವ್ಯಕ್ತಪಡಿಸುವ ಬಗೆಯಾಗಿದೆ. ತನ್ನ ಪ್ರೀತಿಸುವ ವ್ಯಕ್ತಿಯು ನೀಡುವ ಪ್ರೋತ್ಸಾಹವು ಆಪ್ತತೆಯನ್ನು ಹೆಚ್ಚಿಸಿ, ಬಂಧವನ್ನು ಬಲಪಡಿಸುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ