Bhagat Singh Birth Anniversary 2024 : ‘ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಆಲೋಚನೆಗಳಲ್ಲ’

ಭಗತ್ ಸಿಂಗ್ ಎಂದರೆ ಅಪ್ರತಿಮ ದೇಶಪ್ರೇಮಿ. ಬಹಳಷ್ಟು ಮನಸ್ಸನ್ನು ಗೆದ್ದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ. ಹೌದು, ಬ್ರಿಟಿಷರ ನೇಣಿಗೆ ನಗುನಗುತ್ತಲೆ ಕೊರಳೊಡ್ಡಿದ ಭಾರತದ ಏಕೈಕ ಕ್ರಾಂತಿಕಾರ ಎಂದರೆ ತಪ್ಪಾಗಲ್ಲ. ಭಗತ್ ಸಿಂಗ್ ಜನಿಸಿದ್ದು ಸೆಪ್ಟೆಂಬರ್ 28 , 1907 ರಲ್ಲಿ, ಇಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 117ನೇ ಜನ್ಮದಿನ. ಈ ಹಿನ್ನಲೆಯಲ್ಲಿ ಇಡೀ ದೇಶದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ.

Bhagat Singh Birth Anniversary 2024 : 'ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಆಲೋಚನೆಗಳಲ್ಲ'
ಭಗತ್​ ಸಿಂಗ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2024 | 10:20 AM

ಮಕ್ಕಳಿಂದ ಹಿಡಿದು ಹಿರಿಯರವರೆಗೂ ಭಾರತದ ಕ್ರಾಂತಿಕಾರಿ ನಾಯಕ ಯಾರು ಎಂದು ಕೇಳಿದರೆ ಅವರ ಬಾಯಿಂದ ಬರುವ ಹಹೆಸರು ಅದುವೇ ಕೆಚ್ಚೆದೆಯ ಹೋರಾಟಗಾರ ಭಗತ್ ಸಿಂಗ್. ಇಂದು ಭಾರತದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ 117 ನೇ ಜನ್ಮ ದಿನ. ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆ ಅಗಾಧವಾದದ್ದು. ತನ್ನ ಧೈರ್ಯದಿಂದಲೇ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ, ದೇಶಕ್ಕಾಗಿಯೇ 23ನೇ ವಯಸ್ಸಿನಲ್ಲೇ ವೀರಮರಣ ಹೊಂದಿದ ಕ್ರಾಂತಿಕಾರಿ ಹೋರಾಟಗಾರರೆನಿಸಿಕೊಂಡವರು.

ಭಗತ್ ಸಿಂಗ್ ಹುಟ್ಟಿದ್ದು, ಸೆಪ್ಟೆಂಬರ್ 28, 1907 ರಲ್ಲಿ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ. ತಂದೆ ಕಿಶನ್‌ ಸಿಂಗ್‌, ತಾಯಿ ವಿದ್ಯಾವತಿ. ತಂದೆ ಕಿಶನ್ ಸಿಂಗ್ ಜೀವ ವಿಮಾ ಕಂಪನಿಯಲ್ಲಿ ಏಜೆಂಟ್‌ ರಾಗಿ ಕೆಲಸ ಮಾಡುತ್ತಿದ್ದರು. ಭಗತ್ ಸಿಂಗ್ ಹುಟ್ಟಿದ ದಿನವೇ ಅವರ ತಂದೆ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್‌ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆಯಾದರು.

ಇವರ ಕುಟುಂಬವೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾರಣ ಇದುವೇ ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಕುಟುಂಬದ ಪ್ರಭಾವವು ಕ್ರಾಂತಿಕಾರಿ ಹೋರಾಟದ ಮನೋಭಾವವನ್ನು ಹುಟ್ಟು ಹಾಕಿತು. ಹೀಗಾಗಿ ಬ್ರಿಟಿಷರನ್ನು ಭಾರತದಲ್ಲಿ ಓಡಿಸಲು ಹಿಂಸಾತ್ಮಕ ಮಾರ್ಗವನ್ನೇ ಅನುಸರಿಸಿದರು. ಕೊನೆಯ ಉಸಿರು ಇರುವವರೆಗೂ ಹೋರಾಡಿದ ಭಗತ್ ಸಿಂಗ್ ಅವರು 1931ರಲ್ಲಿ ತನ್ನ ಗೆಳೆಯರಾದ ರಾಜ್​​ಗುರು ಮತ್ತು ಸುಖದೇವ್​ ಜೊತೆಗೆ ನೇಣಿಗೆ ಕೊರಳೊಡ್ಡಿದ್ದರು.

ಇದನ್ನೂ ಓದಿ: ವಿಶಿಷ್ಟ ಶಿಲಾರಚನೆಯಿಂದಲೇ ಅಚ್ಚರಿ ಮೂಡಿಸುವ ಕರ್ನಾಟಕದ ತಾಣಗಳಿವು

ಕೆಚ್ಚೆದೆಯ ಹೋರಾಟಗಾರ ಭಗತ್ ಸಿಂಗ್ ಪ್ರಮುಖ ಸಂದೇಶಗಳಿವು

* ಪ್ರೀತಿ ಯಾವಾಗಲೂ ಮನುಷ್ಯನ ಗುಣವನ್ನು ಹೆಚ್ಚಿಸುತ್ತದೆ. ಅದು ಆತನನ್ನು ಎಂದಿಗೂ ಕಡಿಮೆ ಮಾಡುವುದಿಲ್ಲ, ಪ್ರೀತಿಯನ್ನು ಪ್ರೀತಿಯಿಂದ ಒದಗಿಸಿ.

* ದೇಶಕ್ಕಾಗಿ ಕೆಲಸ ಮಾಡುವಾಗ ವೈಯಕ್ತಿಕ ಕೆಲಸಗಳನ್ನು ದೂರವಿಡಿ. ನಿಮ್ಮ ಸುಖದ ಕನಸನ್ನು ಭಗ್ನಗೊಳಿಸಿ. ಆಗ ಜಯಶಾಲಿಯಾಗುತ್ತೀರಿ.

* ನಾನು ಮನುಷ್ಯ ಮತ್ತು ಮಾನವಕುಲದ ಮೇಲೆ ಪರಿಣಾಮ ಬೀರುವ ಎಲ್ಲವೂ ನನಗೆ ಸಂಬಂಧಿಸಿದೆ.

* ಕ್ರಾಂತಿಯ ಖಡ್ಗವು ಆಲೋಚನೆಗಳ ಕಲ್ಲಿನ ಮೇಲೆ ಹರಿತವಾಗಿದೆ-ಭಗತ್ ಸಿಂಗ್ ತನ್ನ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟ.

* ಕ್ರಾಂತಿಯು ಅಗತ್ಯವಾಗಿ ಜಗಳವನ್ನು ಒಳಗೊಂಡಿರುವುದಿಲ್ಲ. ಇದು ಬಾಂಬ್ ಮತ್ತು ಪಿಸ್ತೂಲ್ ಆರಾಧನೆಯಲ್ಲ.

* ದಬ್ಬಾಳಿಕೆ ಖಂಡಿತವಾಗಿಯೂ ದಬ್ಬಾಳಿಕೆ ಬುದ್ಧಿವಂತ ವ್ಯಕ್ತಿಯನ್ನು ಹುಚ್ಚನನ್ನಾಗಿಸುತ್ತದೆ.

* ಕ್ರಾಂತಿ ಜೀವನ ಮತ್ತು ಸಾವು, ಹಳೆಯ ಮತ್ತು ಹೊಸ, ಬೆಳಕು ಮತ್ತು ಕತ್ತಲೆಯ ನಡುವಿನ ಶಾಶ್ವತ ಸಂಘರ್ಷವನ್ನು ಸೂಚಿಸುವ ಪ್ರಮುಖ ಜೀವಂತ ಶಕ್ತಿಯಾಗಿದೆ.

* ಎಲ್ಲಾ ಬಂಡವಾಳಶಾಹಿ ಸರ್ಕಾರಗಳು ಅಂತಹ ಯಾವುದೇ ಪ್ರಯತ್ನಕ್ಕೆ ಸಹಾಯ ಮಾಡುವುದಲ್ಲ, ಬದಲಾಗಿ, ಅದನ್ನು ನಿಷ್ಕರುಣೆಯಿಂದ ನಿಗ್ರಹಿಸುತ್ತವೆ. ನಂತರ, ಅವನ ‘ವಿಕಾಸ’ ಏನನ್ನು ಸಾಧಿಸುತ್ತದೆ?.

* ಅವರು ನನ್ನನ್ನು ಕೊಲ್ಲಬಹುದು, ಆದರೆ ಅವರು ನನ್ನ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಅವರು ನನ್ನ ದೇಹವನ್ನು ಪುಡಿಮಾಡಬಹುದು, ಆದರೆ ಅವರು ನನ್ನ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.

* ವಿಮರ್ಶೆ ಮತ್ತು ಸ್ವತಂತ್ರ ಚಿಂತನೆಯು ಕ್ರಾಂತಿಕಾರಿಗಳಿಗೆ ಇರಬೇಕಾದ ಎರಡು ಅನಿವಾರ್ಯ ಗುಣಗಳಾಗಿವೆ.

* ಆದರೆ, ಮನುಷ್ಯನ ಕರ್ತವ್ಯವು ಪ್ರಯತ್ನಿಸುವುದು ಮತ್ತು ಶ್ರಮಪಡುವುದು. ಯಶಸ್ಸು ಅವಕಾಶ ಮತ್ತು ಪರಿಸರವನ್ನು ಅವಲಂಬಿಸಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ