Sign In

By signing in or creating an account, you agree with Associated Broadcasting Company's Terms & Conditions and Privacy Policy.

Secrets of Colour: ನೀವು ಧರಿಸುವ ಬಟ್ಟೆಯ ಬಣ್ಣವೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ

ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಆತನ ಜೊತೆಗೆ ಬೆರೆಯಬೇಕು, ಆತನು ಸನ್ನಿವೇಶಕ್ಕೆ ತಕ್ಕಂತೆ ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ಅರಿತುಕೊಳ್ಳಬೇಕು. ಆ ಬಳಿಕ ಆ ವ್ಯಕ್ತಿಯು ಈ ರೀತಿ ಗುಣಸ್ವಭಾವವನ್ನು ಹೊಂದಿದ್ದಾನೆ ಎಂದು ನಿರ್ಣಯಿಸಬಹುದು. ಆದರೆ ಒಬ್ಬ ವ್ಯಕ್ತಿಯು ಇಷ್ಟ ಪಟ್ಟು ಧರಿಸುವ ಬಣ್ಣದ ಉಡುಗೆಯಿಂದಲೇ ಆತನ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದಂತೆ. ಹಾಗಾದ್ರೆ ನಿಮ್ಮ ಇಷ್ಟದ ಬಣ್ಣ ಯಾವುದು? ನಿಮ್ಮ ವ್ಯಕ್ತಿತ್ವವೇನು ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.

Secrets of Colour: ನೀವು ಧರಿಸುವ ಬಟ್ಟೆಯ ಬಣ್ಣವೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2024 | 1:02 PM

ಪ್ರತಿಯೊಬ್ಬರಿಗೂ ಒಂದೊಂದು ಬಣ್ಣವು ಇಷ್ಟವಾಗಿರುತ್ತದೆ. ಕೆಲವು ತಮ್ಮ ಹೆಚ್ಚಿನ ವಸ್ತುಗಳನ್ನು ಇದೇ ಬಣ್ಣದಲ್ಲಿರಲು ಬಯಸುತ್ತಾರೆ. ಹೀಗಾಗಿ ಉಡುವ ಬಟ್ಟೆ, ಕಾರು, ಮನೆಯ ಗೋಡೆಗೂ ಕೂಡ ಇಷ್ಟವಾದ ಬಣ್ಣವನ್ನೇ ಬಳಿಯುತ್ತಾರೆ. ಈ ಕಲರ್ ಫುಲ್ ಬಣ್ಣದ ಬಟ್ಟೆಗಳನ್ನು ಧರಿಸುತ್ತಿದ್ದರೆ ನೀವು ಹೇಗೆ ಎನ್ನುವುದು ತಿಳಿಸುತ್ತದೆ. ಆದರೆ ಈ ಬಣ್ಣದ ಉಡುಪುಗಳೇ ವ್ಯಕ್ತಿತ್ವ ಹಾಗೂ ಗುಣ ಸ್ವಭಾವವನ್ನು ರಿವೀಲ್ ಮಾಡುತ್ತೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

  • ಕೆಂಪು ಬಣ್ಣ : ಕೆಂಪು ಬಣ್ಣವನ್ನು ಇಷ್ಟ ಪಡುವ ವ್ಯಕ್ತಿಗಳು ಬಹುರ್ಮುಖಿಗಳಾಗಿದ್ದು, ಜೀವನವನ್ನು ಬಹಳ ಭಾವನಾತ್ಮಕವಾಗಿ ಮತ್ತು ಉತ್ಸಾಹದಿಂದ ಬದುಕುವರಾಗಿರುತ್ತಾರೆ. ಈ ವ್ಯಕ್ತಿಗಳು ಮಾತಿನಲ್ಲಿ ಚತುರರಾಗಿದ್ದು ಎಲ್ಲರನ್ನು ಆಕರ್ಷಿಸುತ್ತಾರೆ. ಕನಸ್ಸನ್ನು ನನಸು ಮಾಡಲು ಶ್ರಮಿಸುವ ವ್ಯಕ್ತಿಗಳಾಗಿದ್ದು ತಮ್ಮ ಭಾವನೆಗಳನ್ನು ಮುಕ್ತವಾಗಿ ಹೊರ ಹಾಕುವ ಸ್ವಭಾವವು ಇವರದ್ದಾಗಿರುತ್ತದೆ.
  • ಬಿಳಿ ಬಣ್ಣ: ಈ ಬಣ್ಣವನ್ನು ಇಷ್ಟಪಡುವ ಜನರು ಸ್ವಚ್ಛತೆ ಕಡೆಗೆ ಹೆಚ್ಚು ಗಮನವಹಿಸುತ್ತಾರೆ. ಶಾಂತಿಯನ್ನು ಬಯಸುವ ಈ ವ್ಯಕ್ತಿಗಳು ಅಚ್ಚುಕಟ್ಟಾದ ಜೀವನವನ್ನು ನಡೆಸುತ್ತಾರೆ. ಸಹಾಯ ಮಾಡುವುದರಲ್ಲಿ ಎತ್ತಿದ ಕೈಯಾಗಿದ್ದು, ನಂಬಿಕೆಗೆ ಯೋಗ್ಯರಾಗಿರುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಸದಾ ಯಶಸ್ಸನ್ನು ಕಾಣುತ್ತಾರೆ.
  • ಗುಲಾಬಿ ಬಣ್ಣ : ಗುಲಾಬಿ ಬಣ್ಣವನ್ನು ಇಷ್ಟಪಡುವ ಜನರು ಮುದ್ದಾಗಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಈ ವ್ಯಕ್ತಿಗಳು ಭಾವನಾತ್ಮಕರಾ ಗಿದ್ದು ಮತ್ತು ಜಗಳಗಳಿಂದ ದೂರವಿರುತ್ತಾರೆ. ಈ ವ್ಯಕ್ತಿಗಳು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ಸಮತೋಲನದಲ್ಲಿ ಇರಿಸುವಲ್ಲಿ ನಿಸ್ಸಿಮರು. ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ.
  • ನೀಲಿ ಬಣ್ಣ : ಈ ಬಣ್ಣವನ್ನು ಇಷ್ಟಪಡುವ ಜನರು ಶಾಂತಸ್ವಭಾವದವರಾಗಿದ್ದು, ಇತರರ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುತ್ತಾರೆ. ಇವರಿಗೆ ಸ್ನೇಹಿತರು ಮತ್ತು ಕುಟುಂಬ ಬೆಂಬಲವು ಸದಾ ಇರುತ್ತದೆ. ವೃತ್ತಿಪರ ಕ್ಷೇತ್ರದಲ್ಲಿ ವಿವಾದಗಳಿಂದ ದೂರವಿರಲು ಇಷ್ಟ ಪಡುವ ಇವರು ಎಲ್ಲಾ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುತ್ತಾರೆ.
  • ಹಸಿರು ಬಣ್ಣ: ಈ ವ್ಯಕ್ತಿಗಳು ಮುಕ್ತ ಮತ್ತು ಸಾಹಸಮಯ ಜೀವನವನ್ನು ನಡೆಸುತ್ತಾರೆ. ನಿಷ್ಠಾವಂತರಾಗಿದ್ದು, ಜನರ ನಡುವೆ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ವ್ಯವಹಾರವನ್ನು ಮಾಡುವುದರಿಂದ ಬುದ್ಧಿವಂತರಾಗಿದ್ದು, ಲಾಭವನ್ನು ಗಳಿಸುತ್ತಾರೆ. ತಮ್ಮ ಆತ್ಮೀಯರಿಗೆ ಪ್ರೀತಿ ಹಂಚುವ ವ್ಯಕ್ತಿಗಳಾ ಗಿರುತ್ತಾರೆ.
  • ನೇರಳೆ ಬಣ್ಣ : ನೇರಳೆ ಬಣ್ಣವನ್ನು ಇಷ್ಟಪಡುವ ಜನರು ತನ್ನ ಮಾತುಗಳಿಂದಲೇ ಜನರನ್ನು ಮರಳು ಮಾಡುತ್ತಾರೆ. ಈ ವ್ಯಕ್ತಿಗಳ ಮಾತುಗಳನ್ನು ಸುತ್ತಲಿನ ಗಮನವಿಟ್ಟು ಕೇಳುತ್ತಾರೆ. ಹೆಚ್ಚು ಸ್ವತಂತ್ರವನ್ನು ಬಯಸುವ ಈ ವ್ಯಕ್ತಿಗಳು ಬುದ್ಧಿವಂತರಾಗಿರುತ್ತಾರೆ.
  • ಹಳದಿ ಬಣ್ಣ : ಹಳದಿ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳನ್ನು ಆಶಾವಾದಿ ಹಾಗೂ ಸದಾ ಲವಲವಿಕೆಯಿಂದ ಇರುವ ವ್ಯಕ್ತಿಗಳೆಂದು ಹೇಳಲಾಗುತ್ತದೆ ಈ ವ್ಯಕ್ತಿಗಳು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದಲೇ ಕಳೆಯಲು ಬಯಸುತ್ತಾರೆ. ಕೆಟ್ಟ ಪರಿಸ್ಥಿತಿಯಲ್ಲಿಯು ಪಾಸಿಟಿವ್ ಆಗಿ ಯೋಚಿಸುವ ವ್ಯಕ್ತಿಗಳಾಗಿದ್ದು, ನಗುವೇ ಇವರ ಶಕ್ತಿಯಾಗಿರುತ್ತದೆ.
  • ಬೂದು ಬಣ್ಣ : ಈ ಬಣ್ಣವನ್ನು ಇಷ್ಟ ಪಡುವ ವ್ಯಕ್ತಿಗಳು ಚಿಂತನಶೀಲರಾಗಿರುತ್ತಾರೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ನೂರು ಬಾರಿ ಯೋಚಿಸುತ್ತಾರೆ. ಕೆಲವೊಮ್ಮೆ ಇವರು ಸಂಕೋಚ ಸ್ವಭಾವದವರಂತೆ ಕಾಣಿಸಸುತ್ತಾರೆ. ವಿವಾದಗಳಿಂದ ದೂರವಿದ್ದು, ಸಹೋದ್ಯೋಗಿಗಳ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುತ್ತಾರೆ
  • ಕಪ್ಪು ಬಣ್ಣ : ಈ ಬಣ್ಣವನ್ನು ಇಷ್ಟ ಪಡುವ ವ್ಯಕ್ತಿಗಳು ಸ್ವಾವಲಂಬಿಗಳಾಗಿರುತ್ತಾರೆ. ನಿಗೂಢತೆಯಿಂದ ಕೂಡಿದ್ದು, ವೈಯಕ್ತಿಕ ಜೀವನ ವಿಷಯಗಳನ್ನು ಗೌಪ್ಯತೆವಾಗಿಟ್ಟುಕೊಳ್ಳಲು ಇಷ್ಟಪಡುತ್ತಾರೆ. ನಾಟಕ ಸ್ವಭಾವವನ್ನು ಇಷ್ಟಪಡದ ಇವರುಗಳು ಸಂವೇದನಾಶೀಲರಾಗಿದ್ದು, ವೃತ್ತಿ ಹಾಗೂ ವೈಯಕ್ತಿಕ ಜೀವನದ ಪ್ರತಿಯೊಂದು ಅಡಚಣೆಯನ್ನು ಸುಲಭವಾಗಿ ನಿರ್ವಹಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸದನದಲ್ಲಿ ಮನೆಹಾಳು, ನಾಲಾಯಕ್, ಅಯೋಗ್ಯ ಪದಗಳ ಅನಿರ್ಬಂಧಿತ ಬಳಕೆ
ಸದನದಲ್ಲಿ ಮನೆಹಾಳು, ನಾಲಾಯಕ್, ಅಯೋಗ್ಯ ಪದಗಳ ಅನಿರ್ಬಂಧಿತ ಬಳಕೆ
‘ಎದ್ದೆದ್ದು ಬೀಳುತಿಹೆ’: ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆಶಿ
‘ಎದ್ದೆದ್ದು ಬೀಳುತಿಹೆ’: ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆಶಿ
ಬೆಲೆಗಳು ಗಗನ ತಲುಪಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ: ಡಿಸಿಎಂ
ಬೆಲೆಗಳು ಗಗನ ತಲುಪಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ: ಡಿಸಿಎಂ
ತೆರಿಗೆ ನೀಡುವ ಆಧಾರದಲ್ಲಿ ಸಿದ್ದರಾಮಯ್ಯ ಅನುದಾನ ಹಂಚಿಕೆ ಮಾಡಲಿ: ಪ್ರತಾಪ್
ತೆರಿಗೆ ನೀಡುವ ಆಧಾರದಲ್ಲಿ ಸಿದ್ದರಾಮಯ್ಯ ಅನುದಾನ ಹಂಚಿಕೆ ಮಾಡಲಿ: ಪ್ರತಾಪ್
ಪುನೀತ್ ರಾಜ್​ಕುಮಾರ್ ಡೆಡಿಕೇಶನ್ ಹೇಗಿತ್ತು, ಅಪ್ಪು ವೆಂಕಟೇಶ್ ನೆನಪು
ಪುನೀತ್ ರಾಜ್​ಕುಮಾರ್ ಡೆಡಿಕೇಶನ್ ಹೇಗಿತ್ತು, ಅಪ್ಪು ವೆಂಕಟೇಶ್ ನೆನಪು
ಮಸೀದಿ ತೆರೆಸಿ ನೋಡಿ: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಸವಾಲು
ಮಸೀದಿ ತೆರೆಸಿ ನೋಡಿ: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಸವಾಲು
ವಿರೋಧ ಪಕ್ಷಗಳ ಶಾಸಕರು ಅನುದಾನ ಕೇಳೋದ್ರಲ್ಲಿ ತಪ್ಪಿಲ್ಲ: ಪ್ರಿಯಾಂಕ್ ಖರ್ಗೆ
ವಿರೋಧ ಪಕ್ಷಗಳ ಶಾಸಕರು ಅನುದಾನ ಕೇಳೋದ್ರಲ್ಲಿ ತಪ್ಪಿಲ್ಲ: ಪ್ರಿಯಾಂಕ್ ಖರ್ಗೆ
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!