Relationship Tips
ಪ್ರೀತಿಯ ಜೀವನವೇ ಬೇರೆ, ಮದುವೆಯ ನಂತರದ ಜೀವನವೇ ಬೇರೆಯೇ. ಹೀಗಾಗಿ ಇದೇ ಕಾರಣಕ್ಕೆ ಅದೆಷ್ಟೋ ಲವ್ ಮ್ಯಾರೇಜ್ ಗಳು ಮುರಿದು ಬೀಳುತ್ತಿದೆ. ಪ್ರೀತಿಯಲ್ಲಿದ್ದಾಗ ಹುಡುಗ ಹುಡುಗಿಯರಿಬ್ಬರೂ ತಮ್ಮಿಬ್ಬರ ಸಂಬಂಧವನ್ನು ಉತ್ತಮವಾಗಿ ನಿಭಾಯಿಸಿಕೊಂಡು ಹೋಗುತ್ತಿರಬಹುದು. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರೇಮಿಗಳು ದಂಪತಿಗಳಾಗಿ ಹೊಸ ಜವಾಬ್ದಾರಿಗಳಿಗೆ ತೆರೆದುಕೊಳ್ಳುತ್ತಾರೆ. ಹೀಗಾಗಿ ಮದುವೆಯ ಬಳಿಕ ಇಬ್ಬರೂ ಕೂಡ ಖುಷಿಯಾಗಿರಬೇಕಾದರೆ, ಪ್ರೀತಿಯಲ್ಲಿರುವಾಗಲೇ ಈ ಕೆಲವು ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಕೆಲವೊಮ್ಮೆ ಇಬ್ಬರೂ ಕೂಡ ತಮ್ಮ ನಡವಳಿಕೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
- ಪ್ರೀತಿಯಲ್ಲಿ ಬಿದ್ದ ನಂತರ ಸುಂದರವಾಗಿ ಕಾಣುವ ಸಂಬಂಧದಲ್ಲಿ ಮದುವೆ ಮಾತುಕತೆಗೆ ಬಂದ ಕೂಡಲೇ ಜಗಳಗಳು, ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದಕ್ಕೆ ಮುಖ್ಯ ಕಾರಣವೇ ಸಂಬಂಧದಲ್ಲಿ ನಂಬಿಕೆಯ ಕೊರತೆ ಮತ್ತು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಇರುವುದು. ಇಬ್ಬರಿಗೂ ಪರಸ್ಪರರಲ್ಲಿ ನಂಬಿಕೆಯಿದ್ದರೆ ಮಾತ್ರ ಮದುವೆಯೆನ್ನುವ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯಿರಿ.
- ಪ್ರೇಯಸಿಯೂ ನಿರಂತರವಾಗಿ ನಿಮಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಅವಳಿಗೆ ನಿಮ್ಮ ಮೇಲೆ ನಂಬಿಕೆಯಿಲ್ಲ ಎನ್ನುವುದನ್ನು ನೆನಪಿಡಿ. ಮದುವೆಯ ನಂತರದಲ್ಲಿ ಅಸುರಕ್ಷಿತ ಭಾವನೆಯೊಂದು ಕಾಡಬಹುದು. ಈ ಗುಣವು ನಿಮ್ಮ ಪ್ರೇಮಿಯಲ್ಲಿದ್ದರೆ ಆಕೆಯನ್ನು ಮದುವೆಯಾಗುವ ಮೊದಲು ಸಾವಿರ ಸಲ ಯೋಚಿಸಿ.
- ಮದುವೆಯ ವಿಷಯದ ಬಗ್ಗೆ ಮಾತನಾಡುವ ವೇಳೆ ನಿಮ್ಮ ಪ್ರೇಮಿಯೂ ಸರಿಯಾಗಿ ಪ್ರತಿಕ್ರಿಯಿಸದೆ ಇರುವುದು. ಈ ನಡವಳಿಕೆಯಿಂದ ನಿಮ್ಮ ಪ್ರೇಯಸಿ ಅಥವಾ ಪ್ರೇಮಿಗೆ ನಿಮ್ಮನ್ನು ಮದುವೆಯಾಗುವುದಕ್ಕೆ ಆಸಕ್ತಿ ತೋರುತ್ತಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಹೀಗಾಗಿ ನೀವು ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಿ.
- ಒಬ್ಬ ವ್ಯಕ್ತಿಯನ್ನು ಹೇಗಿದ್ದಾರೆಯೋ ಹಾಗೆ ಸ್ವೀಕರಿಸದ ಸಂಗಾತಿಯ ಜೊತೆಗೆ ಬದುಕು ಹಂಚಿಕೊಳ್ಳುವುದು ಸೂಕ್ತವಲ್ಲ. ಒಂದು ವೇಳೆ ನಿಮ್ಮ ಗೆಳೆಯ ಅಥವಾ ಗೆಳತಿ ನಿಮ್ಮ ತಪ್ಪುಗಳನ್ನು ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರೆ, ನಿಮ್ಮನ್ನು ಗೇಲಿ ಮಾಡುತ್ತಿದ್ದರೆ, ಅವರು ನಿಮ್ಮನ್ನು ನಿಮ್ಮಂತೆಯೇ ಒಪ್ಪಿಕೊಂಡಿಲ್ಲ ಎಂದರ್ಥ. ಈ ನಡವಳಿಕೆಯಿಂದ ನೀವಿಬ್ಬರೂ ಎಂದಿಗೂ ಸಂತೋಷವಾಗಿರುವುದಿಲ್ಲ. ಹೀಗಾಗಿ ಈ ಪ್ರೇಮ ಸಂಬಂಧವನ್ನು ಮದುವೆಯ ಹಂತಕ್ಕೆ ತೆಗೆದುಕೊಂಡು ಹೋಗುವುದು ಒಳ್ಳೆಯದಲ್ಲ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: