International Widows Day 2024: ನೀವು ಅನಿಷ್ಟರಲ್ಲ, ನಮ್ಮೊಳಗೆ ನೀವು ಒಬ್ಬರು

ಪ್ರತಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುವ ವಿಧವೆಯರಿಗಾಗಿಯೇ ಒಂದು ದಿನವನ್ನು ಮೀಸಲಿರಿಸಲಾಗಿದೆ. ಅದುವೇ ಅಂತಾರಾಷ್ಟ್ರೀಯ ವಿಧವೆಯರ ದಿನ, ಪ್ರತಿ ವರ್ಷ ಜೂನ್ 23 ಅಂತಾರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

International Widows Day 2024: ನೀವು ಅನಿಷ್ಟರಲ್ಲ, ನಮ್ಮೊಳಗೆ ನೀವು ಒಬ್ಬರು
ಅಂತಾರಾಷ್ಟ್ರೀಯ ವಿಧವೆಯರ ದಿನ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 22, 2024 | 3:28 PM

ಒಂದು ಹೆಣ್ಣು ಸಂಗಾತಿಯನ್ನು ಕಳೆದುಕೊಂಡು ಬದುಕುವುದು ಕಷ್ಟದ ಕೆಲಸ. ಮನೆ ಹಾಗೂ ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿಯೂ ಆಕೆಯ ಮೇಲೆ ಬೀಳುವ ಕಾರಣ ಅನಿವಾರ್ಯವಾಗಿ ಉದ್ಯೋಗವನ್ನು ಮಾಡಲೇಬೇಕು. ಆದರೆ ಇಂದಿನ ಮಹಿಳೆಯರು ಶೈಕ್ಷಣಿಕವಾಗಿ ಮುಂದುವರೆದಿದ್ದರೂ ಬದುಕನ್ನು ನಿಭಾಯಿಸಿಕೊಂಡು ಹೋಗುತ್ತಾರೇನೋ ನಿಜ. ಆದರೆ ಇವತ್ತಿಗೂ ನಮ್ಮ ಸಮಾಜವು ಆಕೆಯನ್ನು ನೋಡುವ ದೃಷ್ಟಿಯೇ ಬೇರೆ. ಭಾರತೀಯ ಸಂಸ್ಕೃತಿಯೂ ವಿಧವೆಯರನ್ನು ಎಲ್ಲಾ ರೀತಿಯಿಂದಲೂ ದೂರವೇ ಇಟ್ಟಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಆಕೆಯನ್ನು ಕಟ್ಟಿ ಹಾಕಿದೆ. ಈ ಎಲ್ಲವನ್ನು ಮೀರಿ ಆಕೆಯೂ ತನ್ನ ಬದುಕನ್ನು ಕಟ್ಟಿಕೊಳ್ಳುವ ದೊಡ್ಡ ಸವಾಲು ಆಕೆಯ ಮುಂದಿದೆ. ಹೀಗಾಗಿ ವಿಧವೆಯರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವರನ್ನು ಸಬಲೀಕರಣಗೊಳಿಸಿ, ಧೈರ್ಯವನ್ನು ತುಂಬುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ವಿಧವೆಯರ ದಿನದ ಇತಿಹಾಸ

ಪ್ರತಿ ವರ್ಷ ಜೂನ್ 23 ರಂದು ಅಂತಾರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸಲಾಗುತ್ತದೆ. ಯುಎನ್ ಮಾನ್ಯತೆ ಪಡೆಯುವ ಮೊದಲು ಅಂದರೆ 2005 ರಿಂದ ಲೂಂಬಾ ಫೌಂಡೇಶನ್ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೌದು, 1954 ರಲ್ಲಿ ಈ ದಿನದಂದು ಫೌಂಡೇಶನ್ ಸಂಸ್ಥಾಪಕ ರಾಜಿಂದರ್ ಪಾಲ್ ಲೂಂಬಾ ಅವರ ತಾಯಿ ಶ್ರೀಮತಿ ಪುಷ್ಪಾ ವಾಟಿ ಲೂಂಬಾ ಅವರು ವಿಧವೆಯಾದರು. ಹೀಗಾಗಿ ಜೂನ್ 23 ರನ್ನು ಲೂಂಬಾ ಫೌಂಡೇಶನ್ ವಿಧವೆಯರ ದಿನವನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಆದಾದ ಬಳಿಕ ಡಿಸೆಂಬರ್ 23, 2010 ರಂದು ಯುನೈಟೆಡ್ ನ್ಯಾಷನಲ್ ಜನರಲ್ ಅಸೆಂಬ್ಲಿ ಜೂನ್ 23 ಅನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ವಿಧವೆಯರ ದಿನವನ್ನು ಘೋಷಿಸಿತು.

ಇದನ್ನೂ ಓದಿ: ಪ್ರೀತಿಸಿದ ಜೋಡಿಗಳು ಮದುವೆಯಾಗಲು ಸಿದ್ದರಾಗಿದ್ದೀರಾ, ಹಾಗಾದ್ರೆ ಈ ವಿಷಯಗಳನ್ನೊಮ್ಮೆ ಗಮನಿಸಿ

ಅಂತಾರಾಷ್ಟ್ರೀಯ ವಿಧವೆಯರ ದಿನದ ಮಹತ್ವ

ಪತಿಯ ಮರಣದ ನಂತರದಲ್ಲಿ ವಿಧವೆಯರು ಅನುಭವಿಸುವ ಹಾಗೂ ಎದುರಿಸುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ವಿಧವೆಯರೆಂದರೆ ಅನಿಷ್ಟರು ಎನ್ನುವ ಮೂಢನಂಬಿಕೆಯಿಂದ ಮುಕ್ತರನ್ನಾಗಿ ಮಾಡಿ ಅವರಿಗೂ ಬದುಕುವ ಹಕ್ಕಿದೆ ಎನ್ನುವ ಬಗ್ಗೆ ಜನರಿಗೆ ತಿಳಿಸುವುದಾಗಿದೆ. ಈ ಅವರಿಗೆ ಧೈರ್ಯ ತುಂಬುವ ಕೆಲಸದ ಜೊತೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈಗಾಗಲೇ ಸರ್ಕಾರವು ವಿಧವೆಯರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಮಾಸಿಕ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಪತಿಯನ್ನು ಕಳೆದುಕೊಂಡ ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: