ಸಾಂದರ್ಭಿಕ ಚಿತ್ರ
ಹಿಂದೂಗಳ ಪಾಲಿನ ವಿಶೇಷ ಹಬ್ಬಗಳಲ್ಲಿ ಮಹಾಶಿವರಾತ್ರಿ ಹಬ್ಬ ಕೂಡ ಒಂದು. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನವಾಗಿದ್ದು ದೇಶದೆಲ್ಲೆಡೆ ಬಾರಿ ಸಂಭ್ರಮದಿಂದ ಆಚರಿಸಲಾಗುವ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಫೆಬ್ರವರಿ 26 ರಂದು ಮಹಾ ಶಿವರಾತ್ರಿ ಹಬ್ಬ ಆಚರಿಸಲಾಗುತ್ತಿದ್ದು, ಈ ದಿನ ಶ್ರದ್ಧಾ ಭಕ್ತಿಯಿಂದ ಉಪವಾಸ, ಜಾಗರಣೆ ಮಾಡಲಾಗುತ್ತದೆ. ಶಿವನಿಗೆ ಪ್ರಿಯವಾದ ಸಿಹಿತಿನಿಸುಗಳನ್ನು ಮಾಡಿ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಬಾರಿಯ ಶಿವರಾತ್ರಿ ಹಬ್ಬಕ್ಕೆ ನಿಮ್ಮ ಆತ್ಮೀಯರು ಹಾಗೂ ಸ್ನೇಹಿತರಿಗೆ ವಾಟ್ಸ್‌ಆಪ್, ಫೇಸ್‌ಬುಕ್‌ನಲ್ಲಿ ಶುಭಾಶಯ ಕೋರಲು ಸಂದೇಶಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಒಂದಿಷ್ಟು ಸಂದೇಶಗಳು.
ನಿಮ್ಮ ಆತ್ಮೀಯರಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
- ನಿಮ್ಮ ಎಲ್ಲಾ ಪ್ರಾರ್ಥನೆಗಳನ್ನು ಶಿವನು ಪೂರೈಸಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಹಾಶಿವರಾತ್ರಿಯ ಶುಭಾಶಯಗಳು.
- ಸರ್ವಶಕ್ತನಾದ ಶಿವನು ನಿಮಗೆ ಎಲ್ಲಾ ಒಳ್ಳೆಯದನ್ನು ಮತ್ತು ಪರಿಪೂರ್ಣ ಆರೋಗ್ಯವನ್ನು ದಯಪಾಲಿಸಲಿ ನಿಮಗೆ ಮಹಾ ಶಿವರಾತ್ರಿಯ ಶುಭಾಶಯಗಳು.
- ದೈವಬಲವು ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ. ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ನಿಮ್ಮದಾಗಲಿ. ಹ್ಯಾಪಿ ಮಹಾಶಿವರಾತ್ರಿ.
- ಭಗವಾನ್ ಶಿವನ ದೈವಿಕ ಆಶೀರ್ವಾದ ಸದಾಕಾಲ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ… ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಶಿವನಾಮ ಸ್ಮರಣೆಯಿಂದ ನೆಮ್ಮದಿ ಕಾಣಿರಿ. ಪರಶಿವನ ಆಶೀರ್ವಾದ ಪಡೆಯಿರಿ. ಬದುಕಿನುದ್ದಕ್ಕೂ ಒಳಿತನ್ನೇ ಕಾಣಿರಿ… ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
- ಮಹಾ ಶಿವರಾತ್ರಿಯು ಶಿವನೊಂದಿಗೆ ಪಾರ್ವತಿ ದೇವಿ ಐಕ್ಯವಾದ ರಾತ್ರಿ ಮತ್ತು ವಿನಾಶ ಮತ್ತು ಸೃಷ್ಟಿಯ ರಾತ್ರಿ. ಈ ಮಹಾ ಶುಭ ರಾತ್ರಿಯ ಶುಭಾಶಯಗಳು.
- ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಸರ್ವಶಕ್ತ ಪರಮೇಶ್ವರನು ನಿಮಗೆ ಒಳಿತನ್ನೇ ಮಾಡಲಿ. ಆಯುಷ್ಯ, ಆರೋಗ್ಯ ಕರುಣಿಸಲಿ. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.
- ಶಿವ ಮತ್ತು ಪಾರ್ವತಿ ದೇವಿಯೂ ಎಲ್ಲರನ್ನೂ ಹರಸಲಿ ಈ ಹಬ್ಬ ಪ್ರತಿಯೊಬ್ಬರಿಗೂ ಖುಷಿ ತರಲಿ. ನಿಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ. ನಿಮ್ಮೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
- ನಿಮ್ಮ ಎಲ್ಲಾ ಆಸೆಗಳು ಈಡೇರಲಿ ಮತ್ತು ದೇವರ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರಲಿ. ಮಹಾ ಶಿವರಾತ್ರಿಯ ಶುಭಾಶಯಗಳು.
- ನೃತ್ಯಕಲೆಯ ಆದಿದೈವ ನಟರಾಜ, ಪತ್ನಿ ಸತಿಯ ಅರ್ಧಾಂಗಿ ಎಂದ ಅರ್ಧನಾರೀಶ್ವರ, ಹೆಣ್ಣಿಗೆ ಅತ್ಯುತ್ತನ ಸ್ಥಾನ ನೀಡಿದ ಗಂಗಾಧರ, ದುಷ್ಟರನ್ನು ಎಲ್ಲಿದರೂ ಬಿಡದ ಸಂಹಾರಕನ, ಕೃಪಾಶೀರ್ವಾದ ನಿಮ್ಮದಾಗಲಿ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ