Kitchen Hacks: ದಿನನಿತ್ಯ ಬಳಸುವ ಕಡಲೆಹಿಟ್ಟು ಅಸಲಿಯೇ ನಕಲಿಯೇ? ಮನೆಯಲ್ಲಿ ಹೀಗೆ ಪತ್ತೆ ಹಚ್ಚಿ
ಇತ್ತೀಚೆಗಿನ ದಿನಗಳಲ್ಲಿ ಲಾಭದ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಕಲಬೆರಕೆ ಮಾಡಲಾಗುತ್ತಿದೆ. ಆದರೆ ಕಲಬೆರಕೆಯುಕ್ತ ಆಹಾರ ಪದಾರ್ಥಗಳ ಸೇವನೆಯೂ ಆರೋಗ್ಯಕ್ಕೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಈ ಕಲಬೆರಕೆ ಆಹಾರ ಪದಾರ್ಥಗಳ ಸಾಲಿಗೆ ಕಡಲೆಹಿಟ್ಟು ಸೇರಿದ್ದು, ಮೈದಾ, ಗೋಧಿ ಹಿಟ್ಟು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇರಿಸಿ ಕಲಬೆರಕೆ ಮಾಡಲಾಗುತ್ತಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಖರೀದಿಸಿ ತಂದ ಕಡಲೆಹಿಟ್ಟು ಅಸಲಿಯೇ, ನಕಲಿಯೇ ಎಂದು ತಿಳಿಯಲು ಈ ಕೆಲವು ವಿಧಾನಗಳ ಅನುಸರಿಸಬಹುದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ರುಚಿಕರವಾದ ಬಜ್ಜಿ, ಪಕೋಡ, ಸಿಹಿಖಾದ್ಯಗಳು, ಮಿಕ್ಚರ್ ಸೇರಿದಂತೆ ಇನ್ನಿತ್ತರ ಖಾದ್ಯಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ತ್ವಚೆಯ ಅಂದ ಹೆಚ್ಚಿಸಲು ಕಡಲೆಹಿಟ್ಟನ್ನು ಬಳಸುತ್ತಾರೆ. ಹೀಗಾಗಿ ಈ ಕಡಲೆ ಹಿಟ್ಟು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಇತರ ಪ್ರಮುಖ ಖನಿಜಗಳು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆಆದರೆ ಮಾರುಕಟ್ಟೆಯಲ್ಲಿ ತಂದ ಕಡಲೆಹಿಟ್ಟಿನ ಶುದ್ಧತೆಯನ್ನು ಪತ್ತೆ ಹಚ್ಚುವುದು ಬಹಳ ಮುಖ್ಯ. ಕಲಬೆರಕೆಯುಕ್ತ ಈ ಹಿಟ್ಟಿನ ಸೇವನೆಯೂ ಕೀಲು ನೋವು, ಅಂಗವೈಕಲ್ಯ ಮತ್ತು ಹೊಟ್ಟೆ ಕಾಯಿಲೆಗಳು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಲ್ಲದು. ಹಾಗಾದ್ರೆ ನಕಲಿ ಕಡಲೆಹಿಟ್ಟನ್ನು ಈ ರೀತಿ ಸುಲಭವಾಗಿ ಮನೆಯಲ್ಲಿ ಪತ್ತೆ ಹಚ್ಚಬಹುದು.
ನಕಲಿ ಕಡಲೆಹಿಟ್ಟನ್ನು ಪತ್ತೆಹಚ್ಚಲು ಇಲ್ಲಿದೆ ಸುಲಭ ವಿಧಾನ
* ಕಡಲೆಹಿಟ್ಟನ್ನು ಹೈಡ್ರೋಕ್ಲೋರಿಕ್ ಆಮ್ಲದಿಂದ ಅಸಲಿಯೇ ನಕಲಿಯೇ ಎಂದು ಪತ್ತೆ ಹಚ್ಚಬಹುದು. ಒಂದು ಬಟ್ಟಲಿನಲ್ಲಿ ಎರಡರಿಂದ ಮೂರು ಚಮಚ ಕಡಲೆಹಿಟ್ಟನ್ನು ತೆಗೆದುಕೊಂಡು ಅದನ್ನು ನೀರಿನಿಂದ ಪೇಸ್ಟ್ ರೀತಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಎರಡು ಚಮಚ ಹೈಡ್ರೋಕ್ಲೋರಿಕ್ ಆಮ್ಲವನ್ನು ಮಿಶ್ರಣ ಮಾಡಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಈ ಹಿಟ್ಟು ಕೆಂಪು ಬಣ್ಣಕ್ಕೆ ತಿರುಗಿದರೆ, ಇದು ಕಲಬೆರಕೆಯಾಗಿದೆ ಎಂದರ್ಥ.
* ನಿಂಬೆ ಹಣ್ಣನ್ನು ಬಳಸಿ ನೀವು ಕಡಲೆಹಿಟ್ಟನ್ನು ಅಸಲಿಯೇ, ನಕಲಿಯೇ ಎಂದು ಸುಲಭವಾಗಿ ಗುರುತಿಸಬಹುದು. ಒಂದು ಪಾತ್ರೆಯಲ್ಲಿ ಮೂರು ಚಮಚ ಕಡಲೆ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಸಮಾ ಪ್ರಮಾಣದ ನಿಂಬೆ ರಸವನ್ನು ಮಿಶ್ರಣ ಮಾಡಿ. ಆ ಬಳಿಕ ಹೈಡ್ರೋಕ್ಲೋರಿಕ್ ಆಮ್ಲವನ್ನೂ ಸೇರಿಸಿ. ಐದು ನಿಮಿಷಗಳ ಬಳಿಕ ಕಡಲೆಹಿಟ್ಟು ಕಂದು ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎನ್ನುವುದು ಖಚಿತವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ