Kimchi Salad Recipe: ಮನೆಯಲ್ಲಿಯೇ ಸುಲಭವಾಗಿ ಕಿಮ್ಚಿ ಸಲಾಡ್ ತಯಾರಿಸಿ
ನೀವೂ ಕೊರಿಯನ್ ಪುಡ್ ವಿಡಿಯೋಗಳನ್ನು ಹೆಚ್ಚಾಗಿ ನೋಡುವವರಾಗಿದ್ದರೆ, ಕಿಮ್ಚಿ ಸಲಾಡ್ ಅಂತೂ ನಿಮಗೆ ಗೊತ್ತೇ ಇರುತ್ತೇ. ಆದರೆ ಅದನ್ನು ನಮ್ಮ ಭಾರತೀಯ ಶೈಲಿಯಲ್ಲಿ ವಿಶೇಷ ಮಾಡೋಣ.

ಕೊರೊನಾ ನಂತರದ ದಿನಗಳಲ್ಲಿ ಪುಡ್ ರೆಸಿಪಿ ಚಾನೆಲ್ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಿದೆ. ನೀವೂ ಕೊರಿಯನ್ ಪುಡ್(Korean Food) ವಿಡಿಯೋಗಳನ್ನು ಹೆಚ್ಚಾಗಿ ನೋಡುವವರಾಗಿದ್ದರೆ, ಕಿಮ್ಚಿ ಸಲಾಡ್(Kimchi Salad) ಅಂತೂ ನಿಮಗೆ ಗೊತ್ತೇ ಇರುತ್ತೇ. ಅಲ್ಲಿನ ಎಲ್ಲ ಆಹಾರಗಳಲ್ಲಿ ಕಿಮ್ಚಿ ಸಲಾಡ್ ಇದ್ದೇ ಇರುತ್ತದೆ. ಆದರೆ ಅದನ್ನು ನಮ್ಮ ಭಾರತೀಯ ಶೈಲಿಯಲ್ಲಿ ವಿಶೇಷ ಮಾಡೋಣ. ನೀವೂ ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಮಾಡಬಹುದಾಗಿದೆ. ಆದ್ದರಿಂದ ಅತ್ಯಂತ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಕಿಮ್ಚಿ ಸಲಾಡ್ ತಯಾರಿಸಿ. ಪಾಕ ವಿಧಾನ ಇಲ್ಲಿದೆ.
ಬೇಕಾಗಿರುವ ಸಾಮಾಗ್ರಿಗಳು: ಕ್ಯಾಬೆಜ್- 1(450 gm) ಇರುಳ್ಳಿ- 2 ವಿನೆಗರ್- 1/2 ಕಪ್ ಕೆಂಪು ಮೆಣಸಿನ ಪುಡಿ: 2 ಚಮಚ ಶುಂಠಿ- ಚಿಕ್ಕ ತುಂಡು ಆಲಿವ್ ಎಣ್ಣೆ- 2 ಚಮಚ ಕರಿಮೆಣಸಿನ ಹುಡಿ- 1/2 ಚಮಚ ಗ್ರೀನ್ ಆನಿಯನ್- 1/4 ಕಪ್ ಬೆಳ್ಳುಳ್ಳಿ- 8 ಎಸಳು ಸೋಯಾ ಸಾಸ್ – 2ಚಮಚ ಸಕ್ಕರೆ – 1 ಚಮಚ ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಹಂತ 1:
ಮೊದಲಿಗೆ ಒಂದು ಕ್ಯಾಬೆಜ್ ತೆಗೆದುಕೊಳ್ಳಿ, ನಂತರ ಅದನ್ನು ಚೆನ್ನಾಗಿ ತೊಳೆಯಿರಿ ಹಾಗೂ ಎಸಳು, ಎಸಳುಗಳಾಗಿ ತೆಗೆಯಿರಿ. ಈಗ ಇದನ್ನು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ನೆನೆಸಿಡಿ.
ಹಂತ 2:
ನಂತರ ಕ್ಯಾಬೆಜ್ ಎಸಳುಗಳನ್ನು ಉದ್ದ ಉದ್ದವಾದ ಕತ್ತರಿಸಿಡಿ. ನಂತರ ಇರುಳ್ಳಿ, ಬೆಳ್ಳುಳ್ಳಿ, ಗ್ರೀನ್ ಆನಿಯನ್, ಶುಂಠಿ ಎಲ್ಲವನ್ನು ಕತ್ತರಿಸಿ ಮಿಶ್ರಣ ಮಾಡಿ.
ಹಂತ 3:
ಒಂದು ಪಾತ್ರೆಗೆ ವಿನೆಗರ್, ಕೆಂಪು ಮೆಣಸಿನ ಪುಡಿ, ಸೋಯಾ ಸಾಸ್ ಮತ್ತು ಪುಡಿ ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ಆಲಿವ್ ಎಣ್ಣೆ, ಉಪ್ಪು ಮತ್ತು ಮೆಣಸು ಜೊತೆಗೆ ಮಿಶ್ರಣ ಮಾಡಿ.
ಇದನ್ನು ಓದಿ: ನೀವೂ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಿಸಾಡದಿರಿ ಮರು ಬಳಕೆ ಮಾಡಿ
ಹಂತ 4:
ಈ ಮೇಲಿನ ಮಿಶ್ರಣಕ್ಕೆ ಕ್ಯಾಬೆಜ್ ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಚ್ಚಳ ಇರುವಂತಹ ಒಂದು ಪ್ರಾತೆಯಲ್ಲಿ ಹಾಕಿಡಿ. 2-3 ದಿನಗಳವರೆಗೆ ಗಾಳಿಯಾಡದಂತೆ ಮುಚ್ಚಿಡಿ. ನೀವೂ ಎಷ್ಟು ದಿನ ಇಡುತ್ತೀರಿ ಅಷ್ಟು ಅದರ ರುಚಿ ಹೆಚ್ಚಾಗುತ್ತದೆ. ಈಗ ಕಿಮ್ಚಿ ಸಲಾಡ್ ಸಿದ್ಧವಾಗಿದೆ. ಇದು ನಿಮ್ಮ ಊಟದೊಂದಿಗೆ ಸೈಡ್ ಡಿಶ್ ಆಗಿ ಒಂದು ಒಳ್ಳೆಯ ರುಚಿಯನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:13 pm, Sun, 4 December 22