Chicken Kebab Recipe: ಮನೆಯಲ್ಲಿಯೇ ಟೇಸ್ಟಿ ಚಿಕನ್ ಶಮಿ ಕಬಾಬ್ ತಯಾರಿಸಿ, ರೆಸಿಪಿ ಇಲ್ಲಿದೆ

|

Updated on: Feb 05, 2023 | 5:52 PM

ನೀವು ಸಾಮನ್ಯವಾಗಿ ತಯಾರಿಸುವ  ಕಬಾಬ್​​ಗಿಂತ ವಿಶೇಷವಾಗಿ ಈ ರೀತಿಯ ಕಬಾಬ್ ಪ್ರಯತ್ನಿಸಿ. ವಿಭಿನ್ನ ರುಚಿಯನ್ನು ನೀಡುವುದರಿಂದ ಮನೆಯಲ್ಲಿ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇಷ್ಟ ಪಡುತ್ತಾರೆ. 

Chicken Kebab Recipe: ಮನೆಯಲ್ಲಿಯೇ ಟೇಸ್ಟಿ ಚಿಕನ್ ಶಮಿ ಕಬಾಬ್ ತಯಾರಿಸಿ, ರೆಸಿಪಿ ಇಲ್ಲಿದೆ
ಚಿಕನ್ ಶಮಿ ಕಬಾಬ್
Image Credit source: cookpad.com
Follow us on

ಚಿಕನ್ ಶಮಿ ಕಬಾಬ್ ಖಂಡಿತವಾಗಿಯೂ ಮಾಂಸಹಾರಿಗಳು ಇಷ್ಟ ಪಡುವಂತಹ ರೆಸಿಪಿ ಇದಾಗಿದೆ.  ರುಚಿಕರವಾದ ಈ ಭಕ್ಷ್ಯವನ್ನು  ಕೋಳಿ ಮಾಂಸ, ಕಡಲೆಬೇಳೆ ಮತ್ತು ಇನ್ನಿತರ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಗರಿಗರಿಯಾದ ಈ ತಿಂಡಿಯನ್ನು ಚಟ್ನಿ ಅಥವಾ ಕೆಚಪ್‌ನೊಂದಿಗೆ ಸವಿಯಬಹುದು. ನೀವು ಸಾಮನ್ಯವಾಗಿ ತಯಾರಿಸುವ  ಕಬಾಬ್​​ಗಿಂತ ವಿಶೇಷವಾಗಿ ಈ ರೀತಿಯ ಕಬಾಬ್ ಪ್ರಯತ್ನಿಸಿ. ವಿಭಿನ್ನ ರುಚಿಯನ್ನು ನೀಡುವುದರಿಂದ ಮನೆಯಲ್ಲಿ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇಷ್ಟ ಪಡುತ್ತಾರೆ.

ಚಿಕನ್ ಶಮಿ ಕಬಾಬ್

ಚಿಕನ್ ಶಮಿ ಕಬಾಬ್ ಮಾಡಲು ಬೇಕಾಗುವ ಪದಾರ್ಥಗಳು:

1 ಟೀಸ್ಪೂನ್ ಎಣ್ಣೆ,
1 ಟೀಸ್ಪೂನ್ ಜೀರಿಗೆ,
ಸ್ವಲ್ಪ ಲವಂಗ
ಸ್ವಲ್ಪ ಕರಿಮೆಣಸು
2 ತುಂಡು ದಾಲ್ಚಿನ್ನಿ
2 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಓಮ್​​ ಕಾಳು
3 ಕೆಂಪು ಮೆಣಸು
1/2 ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್
500 ಗ್ರಾಂ ಬೋನ್‌ಲೆಸ್ ಚಿಕನ್
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ನೀರು
1ಟೀಸ್ಪೂನ್ ಕೊಚ್ಚಿದ ಶುಂಠಿ
2 ಹಸಿ ಮೆಣಸಿನಕಾಯಿ
2 ಟೀಸ್ಪೂನ್ ಕತ್ತರಿಸಿದ ಬೆಳ್ಳುಳ್ಳಿ,
ಸ್ವಲ್ಪ ಕತ್ತರಿಸಿದ ಕೊತ್ತಂಬರಿ, ಪುದೀನಾ ಸೊಪ್ಪು
2 ಮೊಟ್ಟೆ

ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಬಂಗಾಳದ ಸಾಂಪ್ರದಾಯಿಕ ಸಿಹಿತಿಂಡಿಗಳು ಇಲ್ಲಿವೆ

ಚಿಕನ್ ಶಮಿ ಕಬಾಬ್ ಮಾಡುವ ವಿಧಾನ:

1ಕಪ್ ಕಡ್ಲೆಬೇಳೆಯನ್ನು ಕನಿಷ್ಟ 30 ನಿಮಿಷಗಳ ಕಾಲ ನೆನೆಸಿಡಿ. ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ, ಲವಂಗ, ಕರಿಮೆಣಸು, ದಾಲ್ಚಿನ್ನಿ, ಕೊತ್ತಂಬರಿ ಬೀಜಗಳು, ಓಮ್​​ ಕಾಳು, ಕೆಂಪು ಮೆಣಸಿನಕಾಯಿ ಹಾಗೂ ಚಿಲ್ಲಿ ಫ್ಲೇಕ್ಸ್ ಸೇರಿಸಿ 1 ರಿಂದ 2 ನಿಮಿಷಗಳ ಕಾಲ ಹುರಿಯಿರಿ.

ಈಗ ಇದಕ್ಕೆ ಆಗಲೇ ನೆನೆಸಿಟ್ಟ ಕಡ್ಲೆಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದೇ ಕುಕ್ಕರ್‌ಗೆ ಬೋನ್‌ಲೆಸ್ ಚಿಕನ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕುದಿಯಲು ಬೇಕಾದಷ್ಟು ಪ್ರಮಾಣದ ನೀರನ್ನು ಸೇರಿಸಿ ನಂತರ ನೀರು ಆವಿಯಾಗುವವರೆಗೆ ಮತ್ತು ಚಿಕನ್ ಮೃದುವಾಗುವವರೆಗೆ ಬೇಯಿಸಿ. ಚಿಕನ್ ಬೆಂದ ಬಳಿಕ ಸ್ವಲ್ಪ ಹೊತ್ತು ಅದನ್ನು ತಣ್ಣಗಾಗಲು ಬಿಡಿ. ನಂತರ ಬೇಯಿಸಿಟ್ಟ ಎಲ್ಲಾ ಪದಾರ್ಥಗಳನ್ನು ದಪ್ಪ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ.

ರುಬ್ಬಿಟ್ಟುಕೊಂಡ ಪೇಸ್ಟ್​​​ಗೆ ಮೊದಲೆ ಕತ್ತರಿಸಿಟ್ಟಿದ್ದ ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ಇದಕ್ಕೆ ಮೊಟ್ಟೆಯ ಲೋಳೆಯನ್ನು ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಿ. ನಂತರ ಕೈಯನ್ನು ಬಳಸಿಕೊಂಡು ಕಟ್ಲೇಟ್ ಆಕಾರದಲ್ಲಿ ಉಂಡೆಗಳನ್ನು ತಯಾರಿಸಿ. ಉಂಡೆಗಳನ್ನು ತಯಾರಿಸಿದ ಬಳಿಕ ಅದನ್ನು ಮೊಟ್ಟೆಯ ದ್ರವದಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿ, ಕಬಾಬ್‌ನ ಎರಡು ಬದಿ ಗೋಲ್ಡನ್ ಬ್ರೌನ್ ಕಲರ್ ಆಗುವವರೆಗೆ ಫ್ರೈ ಮಾಡಿ ನಂತರ ನಿಮ್ಮ ಆಯ್ಕೆಯ ಚಟ್ನಿಯೊಂದಿಗೆ ಕಬಾಬ್‌ನ್ನು ಬಿಸಿ ಬಿಸಿಯಾಗಿ ಸರ್ವ್ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:51 pm, Sun, 5 February 23