Video : ಒಂದು ಪ್ಲೇಟ್ ಮ್ಯಾಂಗೋ ಮೊಮೊಸ್ ಬೆಲೆ 200 ರೂ, ಮಾಡುವುದನ್ನು ನೋಡಿದ್ರೆ ತಿನ್ನೋದಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 22, 2024 | 2:46 PM

ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಕಾಂಬಿನೇಷನ್ ಫುಡ್ ಟ್ರೆಂಡ್ ಬಹಳನೇ ಟ್ರೆಂಡ್ ಆಗಿದೆ. ಒರಿಯೊ ಬಜ್ಜಿಯಿಂದ ಹಿಡಿದು ಗುಲಾಬ್ ಜಾಮೂನ್ ದೋಸೆಯವರೆಗೂ ತರಹೇವಾರಿ ವಿಲಕ್ಷಣ ಆಹಾರಗಳ ಕುರಿತಾದ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಬೀದಿ ಬದಿಯ ವ್ಯಾಪಾರಿಯೊಬ್ಬರು ಮ್ಯಾಂಗೋ ಮೊಮೊಸ್ ತಯಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಇದು ಆಹಾರ ಪ್ರಿಯರನ್ನು ಬೆಚ್ಚಿ ಬೀಳಿಸಿದೆ.

Video : ಒಂದು ಪ್ಲೇಟ್ ಮ್ಯಾಂಗೋ ಮೊಮೊಸ್ ಬೆಲೆ 200 ರೂ, ಮಾಡುವುದನ್ನು ನೋಡಿದ್ರೆ ತಿನ್ನೋದಿಲ್ಲ
ವೈರಲ್​​ ವಿಡಿಯೋ
Follow us on

ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಮೊಮೊಸನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮಕ್ಕಳಿಗಂತೂ ಈ ಮೊಮೊಸ್‌ ಅಂದರೆ ಪಂಚಪ್ರಾಣ. ಈಶಾನ್ಯ ಭಾರತ ಹಾಗೂ ಚೀನಾದ ಜನಪ್ರಿಯ ಆಹಾರವಾಗಿರುವ ಈ ಮೊಮೊಸ್ ನೋಡಲು ಬಿಳಿ ಮೋದಕದಂತಿದ್ದು, ಈ ತಿನಿಸಿನ ಸ್ಟಫ್ಫಿಂಗ್‌ನಲ್ಲಿ ಹಲವಾರು ವೆರೈಟಿಗಳನ್ನು ಕಾಣಬಹುದು. ಇದೀಗ ಭಾರತದಲ್ಲಿಯೂ ಫೇಮಸ್ ಆಗಿದ್ದು ಸಸ್ಯಹಾರಿ, ಮಾಂಸಹಾರಿ ಹಾಗೂ ಸಮುದ್ರ ಆಹಾರದಲ್ಲಿಯೂ ಮೊಮೊಸ್ ತಯಾರಿಸಲಾಗುತ್ತದೆ. ಆದರೆ ಇಲ್ಲೊಬ್ಬ ಬೀದಿ ಬದಿಯ ವ್ಯಾಪಾರಿಯೊಬ್ಬರು ಮ್ಯಾಂಗೋ ಮೊಮೊಸ್ ತಯಾರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

“ಮೇಡ್ ಫಾರ್ ಫುಡೀ” ಎಂಬ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಜನಪ್ರಿಯ ಆಹಾರ ಬ್ಲಾಗರ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಬೀದಿ ಬದಿಯ ವ್ಯಾಪಾರಿಯೊಬ್ಬನು ಮ್ಯಾಂಗೋ ಮೊಮೊಸ್ ತಯಾರಿಸಿ, ಇದು ಮೊಮೊಸ್ ರಾಜ ಎಂದು ಹೆಮ್ಮೆಯಿಂದ ಘೋಷಿಸಿದ್ದಾನೆ.ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬನು, ಮೊಮೊಸ್ ಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿಕೊಂಡಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಆ ಬಳಿಕ ಸಾಸ್‌ಗೆ ಮಾವಿನ ಹಣ್ಣಿನ ಚೂರು, ಮಜ್ಜಾ ಜ್ಯೂಸ್, ಹಾಲಿನ ಕೆನೆ, ಕೆಂಪು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡುತ್ತಾನೆ. ಈಗಾಗಲೇ ಫ್ರೈ ಮಾಡಿಟ್ಟ ಮೊಮೊಸ್ ಇದಕ್ಕೆ ಸೇರಿಸಿ, ಹಾಲಿನ ಕೆನೆ ಸೇರಿಸಿ ಬೇಯಲು ಬಿಡುತ್ತಾನೆ. ಬೆಂದ ಬಳಿಕ ಈ ಮ್ಯಾಂಗೋ ಮೊಮೊಸ್ ನ್ನು ಪ್ಲೇಟ್ ಗೆ ಹಾಕಿ ಸವಿಯಲು ನೀಡುತ್ತಾನೆ. ಈ ಮ್ಯಾಂಗೋ ಮೊಮೊಸ್ ಬೆಲೆ 200 ರೂಪಾಯಿಯಾಗಿದ್ದು, ಈ ವಿಡಿಯೋ ನೋಡಿದ ಆಹಾರ ಪ್ರೇಮಿಗಳು ಫುಲ್ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ರುಚಿಕರ ಖಾದ್ಯಕ್ಕೂ ಸೈ ಆರೋಗ್ಯಕ್ಕೂ ಸೈ ಮಲೆನಾಡಿನ ಈ ಮಾಡಹಾಗಲ ಕಾಯಿ

ಈ ವಿಡಿಯೋವು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು, ‘ಶ್ರದ್ಧಾಂಜಲಿ ಮೊಮೊಸ್’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಮಜ್ಜಾದ ಸಂಯೋಜನೆಯು ಅರ್ಥವಿಲ್ಲ. ಇದು ಮೊಮೊಸ್‌ನ ನಿಜವಾದ ರುಚಿಯನ್ನು ಹಾಳುಮಾಡುತ್ತದೆ’ ಎಂದಿದ್ದಾರೆ. ಇನ್ನೊಬ್ಬರು, ‘ಖಾರದ ಖಾದ್ಯದಲ್ಲಿ ಸಕ್ಕರೆಯ ಪಾನೀಯವನ್ನು ಬಳಸುವುದರಿಂದ ಆರೋಗ್ಯದ ಪರಿಣಾಮ ಬಿರುತ್ತಾರೆ’ ಕಾಮೆಂಟ್ ಮಾಡುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ