ಯುವಕರೇ… ಮದುವೆಗೂ ಮೊದಲು ಬಾಳ ಸಂಗಾತಿಯಾಗುವವಳ ಜೊತೆ ತಪ್ಪದೆ ಈ ವಿಷಯಗಳನ್ನು ಚರ್ಚಿಸಿ

ಹಾಸನದಲ್ಲಿ ಇತ್ತೀಚಿಗಷ್ಟೆ ತಾಳಿ ಕಟ್ಟುವ ವೇಳೆ ವಧು ಮದುವೆ ಬೇಡವೆಂದು ನಿರಾಕರಿಸಿದ ಘಟನೆ ನಡೆದಿತ್ತು. ಇದಾದ ಬಳಿಕ ಮೊನ್ನೆಯಷ್ಟೇ ನವ ವಿವಾಹಿತೆ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದ ಸುದ್ದಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಘಟನೆಗಳನ್ನೆಲ್ಲಾ ನೋಡಿ ಹೆಚ್ಚಿನ ಯುವಕರು ಮದುವೆಯಾಗಲು ಹಿಂಜರಿಯುತ್ತಿದ್ದಾರೆ, ಮದ್ವೆ ಗಿದ್ವೆ ಏನು ಬೇಡ ಎನ್ನುತ್ತಿದ್ದಾರೆ. ಹೀಗಿರುವಾಗ ಮದ್ವೆ ಆಗ್ತಿದ್ದೀರಿ ಎಂದಾದರೆ, ಬಾಳ ಸಂಗಾತಿಯಾಗುವವಳ ಜೊತೆಯಲ್ಲಿ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ಮಾತುಕತೆ ನಡೆಸುವುದು ಅತ್ಯಗತ್ಯ.

ಯುವಕರೇ… ಮದುವೆಗೂ ಮೊದಲು ಬಾಳ ಸಂಗಾತಿಯಾಗುವವಳ ಜೊತೆ ತಪ್ಪದೆ ಈ ವಿಷಯಗಳನ್ನು ಚರ್ಚಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 12, 2025 | 6:50 PM

ನಾವು ಒಂದು ಮದುವೆಯಾಗಬೇಕು (Marriage), ನಮ್ಮದೇ ಒಂದು ಸುಂದರ ಪುಟ್ಟ ಕುಟುಂಬ ರೂಪಿಸಬೇಕು ಎನ್ನುವುದು ಹಲವರ ಕನಸು. ಆದ್ರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಹುಡುಗರು ಮದ್ವೆ ವಿಷಯ ಕೇಳಿಯೇ ಭಯ ಬೀಳುತ್ತಿದ್ದಾರೆ. ಮೊನ್ನೆಯಷ್ಟೇ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದಂತಹ ಸಂದರ್ಭದಲ್ಲಿ ನವ ವಿವಾಹಿತ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಹತ್ಯೆ ಮಾಡಿದ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಇದಕ್ಕೂ ಮೊದಲು ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ. ಹೀಗಿರುವಾಗ ಮದುವೆಯಾಗುವಾಗ ಬಹಳ ಜಾಗರೂಕರಾಗಿರಬೇಕು, ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ನೀವು ಕೂಡಾ ಮದುವೆಯಾಗಲು ಯೋಜಿಸುತ್ತಿದ್ದರೆ, ಅದರಲ್ಲೂ ಅರೇಂಜ್‌ ಮ್ಯಾರೇಜ್‌ ಆಗ್ತಿದ್ದೀರಿ ಎಂದಾದ್ರೆ ಮದುವೆಗೂ ಮುಂಚೆ, ನಿಮ್ಮ ಬಾಳ ಸಂಗಾತಿಯಾಗುವವಳ ಬಗ್ಗೆ ಒಂದಷ್ಟು (Discuss some  things with partner before marriage) ವಿಷಯಗಳ ಬಗ್ಗೆ ಚರ್ಚಿಸುವುದ, ಹುಡುಗಿಯ ಬಗ್ಗೆ ಒಂದಷ್ಟು  ವಿಷಯಗಳ ಬಗ್ಗೆ ತಿಳಿಯುವುದು ಅವಶ್ಯಕ.

ಮದುವೆಗೂ ಮೊದಲು ಬಾಳ ಸಂಗಾತಿಯ ಜೊತೆ ತಪ್ಪದೆ ಈ ವಿಷಯಗಳನ್ನು ಚರ್ಚಿಸಿ:

ಈ ಮದುವೆ ಇಷ್ಟವಿದೆಯೋ ಇಲ್ವೋ: ಕೆಲವೊಂದು ಬಾರಿ ಹುಡುಗಿಯರಿಗೆ ಆಕೆಯ ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸುವ ಸಾಧ್ಯತೆ ಇರುತ್ತದೆ. ಕುಟುಂಬದವರು ಮಾಡುವ ಈ ತಪ್ಪಿನಿಂದ ಸಂಸಾರ, ಹುಡುಗನ ಬಾಳು ಹಾಳಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಘಟನೆಗಳು ಕೂಡಾ ನಡೆದಿವೆ. ಅದಕ್ಕಾಗಿಯೇ ಮದುವೆಗೂ ಮುಂಚೆ ನೀವು ಮದುವೆಯಾಗಬೇಕಾದ ಹುಡುಗಿಯ ಜೊತೆ ಮುಕ್ತವಾಗಿ ಮಾತನಾಡಿ ಮತ್ತು ಆಕೆಗೆ ಮದುವೆ ಇಷ್ಟವಿದೆಯೋ, ಇಲ್ವೋ ಎಂಬುದನ್ನು ತಿಳಿದುಕೊಳ್ಳಿ.

ಹಿಂದಿನ ಜೀವನದ ಬಗ್ಗೆ ಚರ್ಚಿಸಿ: ನೀವು ಮದುವೆಯಾಗಬೇಕಾದ ಹುಡುಗಿಯ ಹಿಂದಿನ ಜೀವನದ ಬಗ್ಗೆ ತಿಳಿಯುವುದು ಕೂಡಾ ಅವಶ್ಯಕ. ಆಕೆಯೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಆಕೆಯ ಹಿಂದಿನ ಪ್ರೇಮ ಜೀವನದ ಬಗ್ಗೆ ತಿಳಿದುಕೊಳ್ಳಿ. ಜೊತೆಗೆ ನಿಮ್ಮ ಹಿಂದಿನ ಪ್ರೇಮಕಥೆಯ ಬಗ್ಗೆ ಆಕೆಯ ಬಳಿ ಹೇಳಿಕೊಳ್ಳಿ. ಇದರಿಂದ ಮುಂದಿನ ಜೀವನವೂ ಯಾವುದೇ ಅನುಮಾನವಿಲ್ಲದೆ ಸುಂದರವಾಗಿ ಸಾಗುತ್ತದೆ.

ಇದನ್ನೂ ಓದಿ
ಮಹಿಳೆಯರ ಫೋನ್‌ನಲ್ಲಿ ಈ ನಂಬರ್‌ಗಳು ಇರಲೇಬೇಕು
ಗಂಡ ತನ್ನ ಹೆಂಡ್ತಿಯ ದೌರ್ಜನ್ಯದ ವಿರುದ್ಧ ಹೇಗೆ ಕಾನೂನಿನ ಸಹಾಯ ಪಡೆಯಬಹುದು?
ಗಂಡ ಬೇರೆ ಹೆಣ್ಣಿನ ಆಕರ್ಷಣೆಗೆ ಒಳಗಾಗಬಾರದೆಂದರೆ, ಹೀಗೆ ಮಾಡಿ
ಈ 7 ಪ್ರಶ್ನೆಯಿಂದ ನಿಮ್ಮ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎಂದು ತಿಳಿಯಬಹುದು

ಪ್ರೀತಿಯ ಬಗ್ಗೆ ವಿಚಾರಿಸಿ: ನಿಮಗೆ ಮದುವೆ ನಿಶ್ಚಯವಾಗಿದೆ ಎಂದಾದ್ರೆ ಆ ಹುಡುಗಿಯ ಜೊತೆ ಮಾತನಾಡಿ, ಆಕೆಯ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾಳಾ ಎಂಬುದರ ಬಗ್ಗೆ ತಿಳಿಯಿರಿ. ಜೊತೆಗೆ ಆಕೆ ಪೋಷಕರ ಒತ್ತಾಯಕ್ಕೆ ಮದುವೆಯಾಗಿದ್ದಾಳೋ ಅಥವಾ ಮನಸ್ಪೂರ್ವಕವಾಗಿ ಮದುವೆಗೆ ಒಪ್ಪಿಗೆ ನೀಡಿದ್ದಾಳೋ ಎಂಬುದನ್ನು ಕೂಡಾ ತಿಳಿಯಿರಿ.

ಇದನ್ನೂ ಓದಿ: ಹೆಂಡ್ತಿ ಗಂಡನಿಗೆ ಹೊಡೆದರೆ ಅದು ಕೌಟುಂಬಿಕ ಹಿಂಸಾಚಾರವೇ? ಈ ದೌರ್ಜನ್ಯವನ್ನು ಗಂಡ ಎದುರಿಸೋದು ಹೇಗೆ?

ಹುಡುಗಿಯ ಬಗ್ಗೆ ಆಕೆಯ ಪರಿಚಯದವರೊಂದಿಗೂ ವಿಚಾರಿಸಬಹುದು: ಮದುವೆ ಅನ್ನೋದು ಜೀವನಪರ್ಯಂತ ಸಾಗುವ ಸಂಬಂಧವಾದ ಕಾರಣ ಜೀವನ ಸಂಗಾತಿಯನ್ನು ಬಹಳ ಎಚ್ಚರದಿಂದ ಆರಿಸಬೇಕು. ಹಾಗಾಗಿ ನೀವು ಮದುವೆಯಾಗುವ ಹುಡುಗಿಯ ಬಗ್ಗೆ, ಆಕೆಯ ಪೂರ್ವಪರವನ್ನು ಆಕೆಯ ಪರಿಚಯದವರ ಜೊತೆ ವಿಚಾರಿಸಿ ನೋಡುವುದು ತಪ್ಪೇನಿಲ್ಲ.

ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಚರ್ಚಿಸಿ: ಮದುವೆಗೆ ಮೊದಲು ಹೆಚ್ಚಿನವರು ಬಾಳ ಸಂಗಾತಿಯಾಗುವವರ ಜೊತೆ ಒಂದಷ್ಟು ವಿಷಯಗಳ ಬಗ್ಗೆ ಅಂದರೆ ಕೆಲಸ, ಹವ್ಯಾಸ, ಕುಟುಂಬದ ಬಗ್ಗೆ ಪ್ರಶ್ನೆ ಕೇಳಬೇಕು ಎಂದುಕೊಳ್ಳುತ್ತಾರೆ. ನಿಮ್ಮ ಮನದಲ್ಲೂ ಇಂತಹ ಪ್ರಶ್ನೆಗಳಿದ್ದರೆ, ಅವುಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Thu, 12 June 25