ಮದುವೆಯೇ ಎಂದರೆ ಸಂಭ್ರಮ. ಹೆಣ್ಣು ಗಂಡಿನ ಜೀವನದ ತಿರುವಿನ ಘಟ್ಟ. ಎಲ್ಲರೂ ಕೂಡ ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಈಗಿನ ಕಾಲದಲ್ಲಿ ಮದುವೆಗೆ ಮುಂಚೆಯೇ ಗಂಡು ಹೆಣ್ಣು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಹೀಗಾಗಿ ಒಬ್ಬರ ಇಷ್ಟ ಕಷ್ಟಗಳು ಇನ್ನೊಬ್ಬರಿಗೆ ಗೊತ್ತಿರುವ ಹೊಂದಿಕೆಯೆನ್ನುವುದು ಕಷ್ಟವಾಗುವುದಿಲ್ಲ. ಆದರೆ ಈ ಕೆಲವು ಗುಣಗಳು ಗಂಡು ಹೆಣ್ಣು ಇಬ್ಬರಲ್ಲಿ ಇದ್ದರೆ ಮಾತ್ರ ಸಂಸಾರವೆನ್ನುವುದು ಆನಂದ ಸಾಗರವಾಗುತ್ತದೆ.
ಅಭಿರುಚಿಗಳನ್ನೊಳಗೊಂಡ ವ್ಯಕ್ತಿಗಳು ಜೊತೆಗೆ ಬದುಕುವುದು ಕಷ್ಟವೇ. ಇಬ್ಬರನ್ನು ಒಬ್ಬರ ಗುಣ ಅವಗುಣವನ್ನು ಒಪ್ಪಿಕೊಂಡು ಹೋಗಬೇಕು. ಹೊಂದಿಕೊಂಡು ಹೋಗುವ ಗುಣವು ಮದುವೆಯಾಗುವ ಗಂಡು ಹಾಗೂ ಹೆಣ್ಣಿನಲ್ಲಿರಬೇಕು.
ಸಿಕ್ಕದ್ದಕ್ಕೆಲ್ಲಾ ಖರ್ಚು ಮಾಡುತ್ತಾರೆ. ಆದರೆ ಮದುವೆಯಾಗುವ ಹೆಣ್ಣು ಅನಗತ್ಯ ಖರ್ಚು ಮಾಡದೇ ಉಳಿತಾಯ ಮಾಡುವ ಗುಣವನ್ನು ಹೊಂದಿದ್ದರೆ ಮುಂದಿನ ಭವಿಷ್ಯವು ಉಜ್ವಲವಾಗುತ್ತದೆ. ಇಬ್ಬರೂ ಕೂಡ ದುಂದುವೆಚ್ಚ ಮಾಡುವವರೇ ಆಗಿ ಬಿಟ್ಟರೆ ಭವಿಷ್ಯದ ಬಗ್ಗೆ ಯೋಚಿಸುವುದೇ ಇಲ್ಲ.
ಭದ್ರ ಬುನಾದಿಗೆ ಕಾರಣವಾಗುತ್ತದೆ. ಗಂಡು ಹೆಣ್ಣು ಹೊಸ ಜೀವನಕ್ಕೆ ಕಾಲಿಡುವ ಮುನ್ನ ಒಬ್ಬರು ಇನ್ನೊಬ್ಬರ ಮೇಲೆ ಸಂಪೂರ್ಣವಾಗಿ ನಂಬಿಕೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅದಲ್ಲದೇ ಇಟ್ಟ ನಂಬಿಕೆಗೆ ಇಬ್ಬರೂ ಬದ್ಧರಾಗಿರಬೇಕು.
ಮುಖ್ಯವೋ , ಅದೇ ರೀತಿ ಪರಸ್ಪರ ಗೌರವಿಸುವುದು ಅಷ್ಟೇ. ಮದುವೆ ಮಾಡಿಕೊಳ್ಳುವ ಗಂಡು ಹೆಣ್ಣಿನಲ್ಲಿ ಈ ಗುಣವೀರಲೇಬೇಕು. ಒಬ್ಬರಿಗೊಬ್ಬರು ನೀಡುವ ಗೌರವವು ಸಂಬಂಧದ ಗಟ್ಟಿತನಕ್ಕೆ ಕಾರಣವಾಗುತ್ತದೆ. ಅದಲ್ಲದೇ, ಸಂಗಾತಿಯ ಕೆಲಸ, ಕುಟುಂಬ ಮತ್ತು ಭಾವನೆಗಳನ್ನು ನೀವು ಗೌರವಿಸಬೇಕು.
ಇದನ್ನೂ ಓದಿ: ತುಳುನಾಡಿನಲ್ಲಿ ಇಂದಿನಿಂದ ಪತ್ತನಾಜೆ ಆರಂಭ : ಧಾರ್ಮಿಕ ಕಾರ್ಯಕ್ಕೆ ಬ್ರೇಕ್, ಕೃಷಿಯತ್ತ ಚಿತ್ತ, ಏನಿದರ ವಿಶೇಷತೆ
ಈಗಿನ ಜನೇರೇಷನ್ ಸಂಪೂರ್ಣ ಬದಲಾಗಿದೆ. ಮುಂದಿನ ಭವಿಷ್ಯದ ಬಗ್ಗೆ ಮಾತನಾಡುವುದ ಗುಣವು ಸಂಬಂಧವನ್ನು ಗಟ್ಟಿಗೊಳಿಸಲು ಕಾರಣವಾಗುತ್ತದೆ. ಈ ಮಾತುಕತೆಯಿಂದ ಇಬ್ಬರ ಜೀವನದ ಆಸೆ, ಆಕಾಂಕ್ಷೆ ಹಾಗೂ ಗುರಿಯ ಕುರಿತಾಗಿ ತಿಳಿಯುತ್ತದೆ.
ಹೊಸ ಜೀವನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಇಬ್ಬರ ವ್ಯಕ್ತಿತ್ವಗಳು ಭಿನ್ನವಾಗಿರಬಹುದು. ಒಬ್ಬರ ಮಾತು ಇನ್ನೊಬ್ಬರಿಗೆ ನೋವು ಉಂಟು ಮಾಡುತ್ತದೆ. ಅದಲ್ಲದೇ ಗೊತ್ತಿಲ್ಲದೇನೇ ತಪ್ಪುಗಳಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಜೊತೆಯಾಗಿ ಮುನ್ನೆಡುವ ಗುಣವು ದಾಂಪತ್ಯ ಜೀವನಕ್ಕೆ ಅಗತ್ಯವಾಗಿ ಬೇಕಾಗುತ್ತದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ