ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ನೈಲ್ ಪಾಲಿಶ್ ಹಾಗೂ ನೈಲ್ ಆರ್ಟ್ ಗಳ ಟ್ರೆಂಡ್ ಹೆಚ್ಚಾಗಿದೆ. ಹೆಂಗಳೆಯರು ತಮ್ಮ ಉಡುಗೆಗೆ ಹೊಂದುವಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಂಡು ಕೈ ಕಾಲುಗಳ ಬೆರಳಿನ ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅದಲ್ಲದೇ, ಋತುಮಾನಕ್ಕೆ ತಕ್ಕಂತಹ ನೈಲ್ ಆರ್ಟ್ ಗಳು ಬಂದಿವೆ. ಈ ಎಲ್ಲಾದರ ನಡುವೆ ಯುವತಿಯರು ಬಿಡಿ, ಯುವಕರು ತಮ್ಮ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿ ಗಮನ ಸೆಳೆಯುತ್ತಿದ್ದಾರೆ. ಆದರೆ ನೈಲ್ ಪಾಲಿಶ್ ನಲ್ಲಿ ರಾಸಾಯನಿಕಗಳು ಇರುವ ಕಾರಣ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆದರೆ ಕೈ ಕಾಲುಗಳ ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚುವುದರಿಂದ ಹಲವರು ಪ್ರಯೋಜನಗಳಿವೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.
- ವ್ಯಕ್ತಿತ್ವವನ್ನು ಸುಧಾರಿಸುತ್ತದೆ : ಉಗುರುಗಳನ್ನು ಟ್ರಿಮ್ ಮಾಡಿ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವುದರಿಂದ ಕೈಯ ಬೆರಳುಗಳು ಅಚ್ಚುಕಟ್ಟಾಗಿ ಕಾಣುವಂತೆ ಮಾಡಿ, ವೈಯಕ್ತಿಕ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ.
- ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದೆ : ನೈಶ್ ಪಾಲಿಶ್ ಹಚ್ಚುವ ಮುನ್ನ ಉಗುರುಗಳನ್ನು ಕತ್ತರಿಸಿ ಟ್ರಿಮ್ ಮಾಡುವ ಕಾರಣ, ಈ ಉಗುರು ಆರೈಕೆಯು ಪುರುಷರಿಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡುತ್ತದೆ.
- ಬೆರಳುಗಳನ್ನು ರಕ್ಷಿಸುತ್ತವೆ :ಉಗುರುಗಳನ್ನು ಟ್ರಿಮ್ಮಿಂಗ್ ಮಾಡುವುದರಿಂದ ಉಗುರುಗಳು ಮತ್ತು ಬಿರುಕುಗಳನ್ನು ತಡೆಯಬಹುದು. ಅದಲ್ಲದೇ ನೈಲ್ ಪಾಲಿಶ್ ಹಚ್ಚಿದರೆ ಬೆರಳಿನ ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ.
- ನೈರ್ಮಲ್ಯವನ್ನು ಸುಧಾರಿಸುತ್ತದೆ: ನಿಯಮಿತವಾಗಿ ಉಗುರು ಟ್ರಿಮ್ಮಿಂಗ್ ಮಾಡಿ ನೈಲ್ ಪಾಲಿಶ್ ಹಚ್ಚುವುದರಿಂದ ಉಗುರುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೊಳಕು ಸಂಗ್ರಹವಾಗುವುದನ್ನು ತಪ್ಪಿಸಿ ನೈರ್ಮಲ್ಯವನ್ನು ಕಾಪಾಡುತ್ತದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ